ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಿಕ್‍ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ- 170 ಇದ್ದ ಕಿಂಗ್‍ಫಿಷರ್ ಬೆಲೆ 190 ರೂ.ಗೆ ಏರಿಕೆ!

Twitter
Facebook
LinkedIn
WhatsApp
29

ಬೆಂಗಳೂರು: ಎಣ್ಣೆ ಪ್ರಿಯರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್‍ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಇನ್ನೊಂದು ವಾರದಲ್ಲಿ ಮದ್ಯಪಾನದ ದರದಲ್ಲಿ (Alcohol Rate) ಏರಿಕೆಯಾಗಲಿದೆ.

ಅಬಕಾರಿ ಶುಂಕ 20% ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಇನ್ನು ಮುಂದೆ ಬ್ರಾಂಡೆಡ್ ಮದ್ಯಗಳು ದುಬಾರಿಯಾಗಲಿದೆ. 

ಬ್ಲಾಕ್ & ವೈಟ್: ಹಿಂದಿನ ಬೆಲೆ 2,464- ಏರಿಕೆ ಬೆಲೆ – 2,800
ಜಾನಿ ವಾಕರ್ ಬ್ಲಾಕ್ ಲೇಬಲ್: ಹಿಂದಿನ ಬೆಲೆ – 6,250, ಏರಿಕೆ ಬೆಲೆ – 7,150
ಚಿವಾಸ್ ರೀಗಲ್: ಹಿಂದಿನ ಬೆಲೆ – 6,200, ಏರಿಕೆ ಬೆಲೆ – 7,000

ಟೀಚರ್ಸ್ (750 ML): ಹಿಂದಿನ ದರ – 2,451, ಏರಿಕೆ ದರ – 2,800
ಬ್ಲಾಕ್ & ವೈಟ್ (750 ML): ಹಿಂದಿನದರ – 2,415, ಏರಿಕೆ ದರ – 2, 800
ರೊಮನೊವಾ ವೋಡ್ಕಾ: ಹಿಂದಿನ ಬೆಲೆ – 915, ಏರಿಕೆ ಬೆಲೆ – 1,000
100 ಪೈಪರ್ ವಿಸ್ಕಿ: ಹಿಂದಿನ ಬೆಲೆ – 106, ಏರಿಕೆ ಬೆಲೆ – 120

ಬಿಯರ್ ಗಳ ಮೇಲೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತಿದೆ. ತೆರಿಗೆ ಹೆಚ್ಚಳದಿಂದ ಬಿಯರ್ ಗಳೂ (Beer Price) ದುಬಾರಿಯಾಗಲಿದ್ದು, ಕನಿಷ್ಠ 20 ರೂ. ಹೆಚ್ಚಳ ಮಾಡಲಾಗುತ್ತಿದೆ. ಕಿಂಗ್‍ಫಿಷರ್ (King Fisher) ಬೆಲೆ 170 ಇದ್ದಿದು 190 ರೂ., ಬಡ್ ವೈಸರ್ (Budweiser) ಬೆಲೆ 220 ಇದ್ದಿದ್ದು 240 ರೂ., ಟ್ಯೂಬರ್ಗ್ ( Tuborg) ಬೆಲೆ 170 ಇದ್ದಿದ್ದು 190 ರೂ. ಹಾಗೂ ಕಾರ್ಲ್ಸ್ ಬರ್ಗ್ ಬೆಲೆ 220 ಇದ್ದಿದ್ದು 250 ರೂ. ಆಗಲಿದೆ.‌

ಅಬಕಾರಿ ಶುಂಕ ಹೆಚ್ಚಳದಿಂದ ಮದ್ಯ ದುಬಾರಿಯಾಗಲಿದೆ. ಹೀಗಾಗಿ ಇನ್ನೊಂದು ವಾರದ ಬಳಿಕ ದರ ಏರಿಕೆಯಾಗಲಿದೆ. 4-5 ದಿನ ಅಥವಾ ವಾರದಲ್ಲಿ ಸರ್ಕಾರದಿಂದ ಅನುಮೋದನೆ ಸಿಗಲಿದೆ. ಸರ್ಕಾರ ಅನುಮೋದನೆ ಬಳಿಕ ಹೊಸ ದರ ಜಾರಿಗೊಳಿಸಲಾಗುವುದು ಎಂದು ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಕರುಣಾಕರ ಹೆಗ್ಡೆ ತಿಳಿಸಿದ್ದಾರೆ.

ಪರಂವಃ ಚಿತ್ರದ ಹಾಡು ರಿಲೀಸ್ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ‘ಪರಂವಃ’ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹೊಸಬರೇ ಈ ಚಿತ್ರತಂಡದಲ್ಲಿದ್ದು, ವಿಶೇಷ ಕಥೆಯೊಂದನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರಂತೆ ಚಿತ್ರತಂಡ. ಹಾಗಾಗಿಯೇ ಕುಮಾರಸ್ವಾಮಿ ಅವರು ಹಾಡು ರಿಲೀಸ್ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

ಪೀಪಲ್ ವರ್ಲ್ಡ್ ಫಿಲಂಸ್ ಲಾಂಛನದಲ್ಲಿ 200 ಜನ ಸ್ನೇಹಿತರು ಸೇರಿ ಸಿನಿಮಾವನ್ನು ನಿರ್ಮಿಸಿದ್ದು, ಪ್ರೇಮ್ ಸಿಡೇಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಮಣ್ಣಿನ ಹೆಮ್ಮೆಯ ಕಲೆಯಾದ ವೀರಗಾಸೆಯ ಕುರಿತಾದ ಜೊತೆಗೆ ತಂದೆ ಮಗನ ನಡುವಿನ ಭಾವನಾತ್ಮಕ ಪಯಣದ ಕುರಿತು  ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.

ಸಂತೋಷ್ ಕೈದಾಳ ನಿರ್ದೇಶನದಲ್ಲಿ ಪರಂವಃ ಸಿನಿಮಾ ಮೂಡಿ ಬಂದಿದ್ದು, ‘ಕಿರುದೀಪ ನೀ’ ಎಂಬ ಮೂರನೇ ಲಿರಿಕಲ್ ಹಾಡು ಇದೀಗ ಬಿಡುಗಡೆಯಾಗಿದೆ. ಈ ಹಾಡನ್ನು ಗಾಯಕ ಮೆಹಬೂಬ್ ಸಾಬ್ ಹಾಡಿದ್ದು, ನಾಗೇಶ್ ಕುಂದಾಪುರ, ಸಂಕೇತ್ ಅಂಬಲಿ ಹಾಗೂ ಕಿರಣ್ ಎನ್ ಆರ್ ಪುರ ಸೇರಿ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಡನ್ನು ಮೆಚ್ಚಿ, ಚಿತ್ರತಂಡಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ