ಸಾನಿಯಾ ಮಿರ್ಜಾ ಹೆಸರನ್ನು ಕೂಗುತ್ತಾ ಶೋಯೆಬ್ ಮಲಿಕ್ ಪತ್ನಿ ಸನಾ ಜಾವೆದ್ ರನ್ನು ರೇಗಿಸಿದ ಪ್ರೇಕ್ಷಕರು! ವಿಡಿಯೋ
ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ಭಾವಿ ಪತ್ನಿ ಸನಾ ಜಾವೇದ್ ಇತ್ತೀಚೆಗೆ ನಡೆದ ಪಿಎಸ್‌ಎಲ್ ಪಂದ್ಯದ ವೇಳೆ ಮೈದಾನದಲ್ಲಿ ಹಾಜರಿದ್ದರು. ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವಿನ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯ ವೀಕ್ಷಿಸಲು ಬಂದ ನಟಿ ಸನಾ ಮುಂದೆ, ಪಾಕಿಸ್ತಾನ ಅಭಿಮಾನಿಗಳು ಸಾನಿಯಾ ಮಿರ್ಜಾ ಎಂದು ಜೋರಾಗಿ ಘೋಷಣೆ ಕೂಗಿ ಚಾಣಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಿಎಸ್‌ಎಲ್‌ನಲ್ಲಿ ನಟಿ ಸನಾ ಅವರ ಪತಿ ಶೋಯೆಬ್ ಮಲಿಕ್ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಪತಿಯನ್ನು ಬೆಂಬಲಿಸಲು ಸನಾ ಜಾವೆದ್ ಮೈದಾನಕ್ಕೆ ಬಂದಿದ್ದರು. ಈ ವೇಳೆ ವೀಕ್ಷಕರ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರಲ್ಲಿ ಒಂದು ಗುಂಪು ಸಾನಿಯಾ ಮಿರ್ಜಾ ಹೆಸರನ್ನು ಕೂಗುತ್ತಾ ಸನಾ ಅವರನ್ನು ರೇಗಿಸಲು ನೋಡಿದ್ದಾರೆ. ಅಲ್ಲದೆ ಅವರ ವಿಡಿಯೋ ಚಿತ್ರೀಕರಣ ಕೂಡಾ ಮಾಡಿದ್ದಾರೆ.
ಘೋಷಣೆ ಕೇಳುತ್ತಿದ್ದಂತೆಯೇ ಸನಾ ವೀಕ್ಷಕರತ್ತ ತಿರುಗಿ ನೋಡುತ್ತಾರೆ. ಅವರ ಮುಖದಲ್ಲಿ ಯಾವುದೇ ರೀತಿಯ ಕೋಪವಾಗಲಿ, ಭಾವನೆಯಾಗಲಿ ಕಾಣಿಸಲಿಲ್ಲ. ಅವರತ್ತ ಗಮನ ಕೊಡದೆ ಮುಂದುವರೆಯುತ್ತಾರೆ. ಸನಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ವಿಐಪಿ ಸೋಫಾದಲ್ಲಿ ಕುಳೀತಾಗಲೂ ಘೋಷಣೆಗಳು ಕೇಳುತ್ತಿರುತ್ತವೆ. ಈ ವೇಳೆ ಅವರು ತಮ್ಮ ಸಮೀಪ ನಿಂತಿದ್ದ ವ್ಯಕ್ತಿಯೊಂದಿಗೆ ನಗುತ್ತಾ ಮಾತನಾಡುತ್ತಾರೆ. ಅಭಿಮಾನಿಗಳತ್ತ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.
#Sanajaved reaction in sania mirza #PSL2024 sana javed in psl 2024 fan reaction Multan stadium 🤣🤣🤣multanstadoum pic.twitter.com/CTJrLH3BPv
— Rizwan malik (@Rizwanmalik3100) February 20, 2024
ಸನಾ ಬೆಂಬಲಕ್ಕೆ ನಿಂತ ಅಭಿಮಾನಿಗಳು
ಅತ್ತ ಭಾರತೀಯ ಮತ್ತು ಪಾಕಿಸ್ತಾನಿ ಅಭಿಮಾನಿಗಳ ಟೀಕೆಗಳ ಹೊರತಾಗಿಯೂ, ಸನಾ ಅವರ ಕೆಲವು ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. “ಸಾಮಾಜಿಕ ಮಾಧ್ಯಮದಲ್ಲಿನ ಎಲ್ಲಾ ಟೀಕೆಗಳ ಹೊರತಾಗಿಯೂ, ಪತಿ ಶೋಯೆಬ್ ಮಲಿಕ್ ಅವರನ್ನು ಬೆಂಬಲಿಸಲು ಸನಾ ಜಾವೇದ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದನ್ನು ನೋಡಲು ಖುಷಿಯಾಗುತ್ತಿದೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
It's their prerogative, so there's no need to taunt sana javed, every individual deserves respect, treating others poorly is unjustifiable#SanaJaved #ShoaibMalik pic.twitter.com/GHnBVhG23E
— Ashir (@wasmashr) February 20, 2024