Friday, December 2, 2022
ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್-ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ-ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ-6ನೇ ತರಗತಿಯ ಬಾಲಕ ಹೃದಯಾಘಾತದಿಂದ ಸಾವು-ಭಾರತವಿಂದು ಜಗತ್ತಿನ ನಂ.1 ಹಾಲು ಉತ್ಪಾದಕ: ಕೇಂದ್ರ ಸಚಿವ ಪರುಷೋತ್ತಮ ರೂಪಲಾ-ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಮಗೆ ಪಾಠ ಮಾಡಬೇಕಿಲ್ಲ, ವಿಶ್ವಸಂಸ್ಥೆಗೆ ಭಾರತದ ದಿಟ್ಟ ಉತ್ತರ!-ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು-ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್-ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ 15ರ ಬಾಲಕ-ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ 'ಸಮೃದ್ಧ ಕೊಡಗು' ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Shilpa Shetty: ಕನ್ನಡದಲ್ಲಿ ಮತ್ತೊಮ್ಮೆ ಶಿಲ್ಪಾ ಶೆಟ್ಟಿ ಕಮಾಲ್: 'ಕೆಡಿ'ಯಲ್ಲಿ ಪವರ್ ಫುಲ್ ಲೇಡಿ

Twitter
Facebook
LinkedIn
WhatsApp

ಮಂಗಳೂರು ಚೆಲುವೆ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಕನ್ನಡದಲ್ಲಿ ಕಮಾಲ್ ಮಾಡಲು ಬರುತ್ತಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಅಭಿನಯದ ‘ಕೆಡಿ’ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದ್ದು, ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಪವರ್ ಫುಲ್ ಪಾತ್ರ ಮಾಡಲಿದ್ದಾರೆ. ಇದು ಕನ್ನಡದಲ್ಲಿ ಅವರ ನಾಲ್ಕನೇ ಸಿನಿಮಾ. ಈ ಹಿಂದೆ ಮೂರು ಬಾರಿ ಸ್ಯಾಂಡಲ್ ವುಡ್ ತೆರೆಮೇಲೆ ನಗು ಚೆಲ್ಲಿ, ನಡು ಬಳುಕಿಸಿ, ಪ್ರೇಕ್ಷಕರ ಎದೆಗೆ ಕಿಚ್ಚು ಹಚ್ಚಿದ್ದಾರೆ ಶಿಲ್ಪಾ ಶೆಟ್ಟಿ. 

ಅದರಲ್ಲೂ ಪ್ರೀತ್ಸೋದ್ ತಪ್ಪಾ ಚಿತ್ರದಲ್ಲಿನ ಶಿಲ್ಪಾ ಶೆಟ್ಟಿಯ ಗ್ಲಾಮರಸ್ ನೋಟವನ್ನು ಅದ್ಯಾರು ತಾನೆ ಮರೆಯಲು ಸಾಧ್ಯ. ಇದೀಗ ಕೆಡಿಯಲ್ಲಿ ಶಿಲ್ಪಾ ರೆಟ್ರೋ ಸ್ಟೈಲ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾಕಂದ್ರೆ ಕೆಡಿ 80ರ ದಶಕದ ರಕ್ತಸಿಕ್ತ ಕಥೆಯ ಸಿನಿಮಾ. ಶಿಲ್ಪಾ ಶೆಟ್ಟಿ ಎಂಟ್ರಿ ಕೆಡಿ ಖದರ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ