ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಾಂಗ್ಲಾದೇಶ ಚುನಾವಣೆಯಲ್ಲಿ ಸತತ 4ನೇ ಬಾರಿ ಶೇಖ್ ಹಸೀನಾ ಪ್ರಧಾನಿಯಾಗಿ ಪುನರಾಯ್ಕೆ..!

Twitter
Facebook
LinkedIn
WhatsApp
ಬಾಂಗ್ಲಾದೇಶ ಚುನಾವಣೆಯಲ್ಲಿ ಸತತ 4ನೇ ಬಾರಿ ಶೇಖ್ ಹಸೀನಾ ಪ್ರಧಾನಿಯಾಗಿ ಪುನರಾಯ್ಕೆ..!

ಬಾಂಗ್ಲಾದೇಶದಲ್ಲಿ ಭಾನುವಾರ (ಜನವರಿ 7) ನಡೆದ 12ನೇ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ-ಬಿಎನ್‌ಪಿ ಮತದಾನ ಬಹಿಷ್ಕಾರದ ನಡುವೆ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಅವಾಮಿ ಲೀಗ್ (AL) ಪಕ್ಷ ನಿರೀಕ್ಷೆಯಂತೆ ಗೆಲುವು ಸಾಧಿಸಿದೆ.

ಭಾನುವಾರ ಮತದಾನ ಮುಕ್ತಾಯದ ಬಳಿಕ ನಡೆದ ಮತ ಎಣಿಕೆಯಲ್ಲಿ ಅವಾಮಿ ಲೀಗ್‌ ಆರಂಭಿಕ ಮುನ್ನಡೆ ಸಾಧಿಸಿತ್ತು. 224 ಸ್ಥಾನಗಳ ಪೈಕಿ 216 ಸ್ಥಾನಗಳನ್ನು ಗೆದ್ದುಕೊಂಡಿವೆ. ಉಳಿದ ಸ್ಥಾನಗಳ ಫಲಿತಾಂಶ ಘೋಷಣೆ ಆಗಬೇಕಿದೆ ಎಂದು ಅಲ್ಲಿನ ಚುನಾವಣಾ ಆಯೋಗ ತಿಳಿಸಿದೆ. ಪ್ರಧಾನಿ ಹಸೀನಾ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ವಿರೋಧ ಪಕ್ಷ ಬಿಎನ್‌ಪಿ ಚುನಾವಣೆಯನ್ನು ಬಹಿಷ್ಕಾರಿಸಿದ ಪರಿಣಾಮವಾಗಿ ಬಾಂಗ್ಲಾದೇಶದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮತದಾನ ದಾಖಲಾಗಿತ್ತು.

ಶೇಖ್ ಹಸೀನಾ ಅವರ ಮರು ಆಯ್ಕೆ ಭಾರತಕ್ಕೆ ಉತ್ತಮ ಬೆಳವಣಿಗೆ ಯಾಕೆ?

ಶೇಖ್ ಹಸೀನಾ ಅವರು ಸತತ 4ನೇ ಬಾರಿ ಹಾಗೂ ಒಟ್ಟಾರೆಯಾಗಿ 5ನೇ ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ. ಹಸೀನಾ ಅವರ ಆಯ್ಕೆ ಭಾರತಕ್ಕೆ ಒಳ್ಳೆಯ ಬೆಳವಣಿಗೆಯಾಗಿದೆ. ಯಾಕೆ ಅಂತ ನೋಡುವುದಾದರೆ ನೆರೆಯ ಬಾಂಗ್ಲಾ ಪ್ರಧಾನಿ ಹಸೀನಾ ಅವರು ಭಾರತಕ್ಕೆ ನಂಬಿಕಸ್ಥರಾಗಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧಗಳು ಕಳೆದ ಒಂದೂವರೆ ದಶಕದಿಂದ ಸೌಹಾರ್ದಯುತವಾಗಿದೆ. ಸೂಕ್ಷ್ಮತೆ ವಿಚಾರಗಳಲ್ಲಿ ಎರಡೂ ಕಡೆಯಿಂದ ಕಾಳಜಿ ವಹಿಸಲಾಗುತ್ತಿದೆ. ಹೀಗಾಗಿ ಹಸೀನಾ ಅವರು ಮತ್ತೆ ಆಯ್ಕೆಯಾಗಿರುವುದು ದೆಹಲಿಯ ಹಿತಾಸಕ್ತಿಯಾಗಿದೆ. ಬಾಂಗ್ಲಾದ ವಿರೋಧ ಪಕ್ಷವಾಗಿರುವ ಬಿಎನ್‌ಪಿ ಭಾರತ ಸರ್ಕಾರಕ್ಕೆ ಪ್ರತಿಕೂಲ ಎಂದೇ ಪರಿಗಣಿಸಲಾಗಿದೆ.

ಬಾಂಗ್ಲಾದೇಶ ಸಂಪೂರ್ಣವಾಗಿ ಭಾರತದಿಂದ ಸುತ್ತವರೆದಿದೆ. ಮಿಜೋರಾಂ, ತ್ರಿಪುರಾ, ಮೇಘಾಲಯ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಆದರೆ ಈ ದೇಶದಲ್ಲಿ ಚೀನಾ ಹೆಚ್ಚಿನ ಹಸ್ತಕ್ಷೇಪಗಳನ್ನು ಮಾಡುತ್ತಲೇ ಬಂದಿದೆ. ಶೇಖ್ ಹಸೀನಾ ಭಾರತದ ಹಿತಾಸಕ್ತಿಯಾಗಿಯೇ ಉಳಿಯುತ್ತಾರೆ. ಇದಕ್ಕೆ ಕಾರಣವೂ ಇದೆ.

ಉಭಯ ದೇಶಗಳ ಗಟ್ಟಿ ಸಂಬಂಧಕ್ಕೆ ಕಾರಣವಿದು

1996 ರಿಂದ 2001ರ ನಡುವಿನ ಆಡಳಿತ ಹಾಗೂ ಆ ನಂತರದ ಅಂದರೆ 2009 ರಿಂದ ಭಾರತದ ಭದ್ರತಾ ಸಂಸ್ಥೆಯು ಬಾಂಗ್ಲಾದೇಶದ ಏಜೆನ್ಸಿಗಳಿಂದ ಸಹಕಾರವನ್ನು ಪಡೆದುಕೊಂಡಿದೆ. ಆ ದೇಶದಲ್ಲಿ ಭಾರತದ ವಿರೋಧ ಚಟುವಟಿಕೆಗಳನ್ನು ತಡೆಯಲು ನಿಜವಾದ ಪ್ರಯತ್ನಗಳನ್ನು ಮಾಡಲಾಗಿದೆ ಎಂಬ ವಾಸ್ತವಾಂಶ ಉಭಯ ದೇಶಗಳ ನಡುವಿನ ಸಂಬಂಧ ಗಟ್ಟಿಯಾಗಲು ಕಾರಣವಾಗಿದೆ.

ಬಾಂಗ್ಲಾದ ಈಗಿನ ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ನಾಯಕಿ ಬೇಗಂ ಖಲೀದಾ ಜಿಯಾ ಅವರು 1991 ರಿಂದ 1996, 2001 ರಿಂದ 2006ರ ವರೆಗೆ ಎರಡು ಬಾಂಗ್ಲಾದ ಪ್ರಧಾನಿಯಾಗಿದ್ದರು. ಇವರ ಆಡಳಿತದ ಅವಧಿಯಲ್ಲಿ ಬಿಎನ್‌ಪಿ ಪಕ್ಷ ಜಮಾತ್ ಎ ಇಸ್ಲಾಮಿ ಮತ್ತು ಪಾಕಿಸ್ತಾನದ ಐಎಸ್‌ಐ ಬೆಂಬಲವನ್ನು ಪಡೆದಿತ್ತು. 2008ರಲ್ಲಿ ಬಾಂಗ್ಲಾದೇಶದ ಹರ್ಕತ್ ಉಲ್ ಜಿಹಾದ್ ಅತ್ ಇಸ್ಲಾಮಿ (ಹುಜಿ) ಸಂಘಟನೆ ಉತ್ತರ ಪ್ರದೇಶದ ಗೋರಖ್‌ಪುರ, ಲಕ್ನೋ, ಫೈಜಾಬಾದ್ ಹಾಗೂ ವಾರಣಾಸಿಯಲ್ಲಿ ಸರಣಿ ಬಾಂಬ್ ಸ್ಫೋಟಕಗಳನ್ನು ನಡೆಸಿದ್ದವು.

ಭಾರತದ ಮಾಜಿ ರಾಯಭಾರಿ ಅಶೋಕ್ ಕಾಂತ ಅವರ ವರದಿಯ ಪ್ರಕಾರ, ಶೇಖ್ ಹಸೀನಾ ಮತ್ತು ಬಾಂಗ್ಲಾದೇಶ ಯಾವಾಗಲೂ ಭಾರತೀಯ ಕಾಳಜಿಗೆ ಸಂವೇದನಾಶೀಲವಾಗಿ ವರ್ತಿಸಿದೆ. ಎರಡು ದಶಕಗಳ ಕಾಲ ನಿಕಟವಾಗಿ ಕೆಲಸ ಮಾಡಿದ್ದು, ಗಡಿ ವಿವಾದಕ್ಕೆ ಸಹಿ ಹಾಕಿವೆ.

2009 ರಲ್ಲಿ ಹಸೀನಾ ಮತ್ತೆ ಅಧಿಕಾರಕ್ಕೆ ಬಂದಾಗ ಭಾರತವು ನೆಮ್ಮೆದಿಯ ನಿಟ್ಟುಸಿರು ಬಿಟ್ಟಿತ್ತು. ಭಾರತದ ಈಶಾನ್ಯ ದಂಗೆಕೋರರನ್ನು ನಿಭಾಯಿಸುವಲ್ಲಿ ಇವರ ಸರ್ಕಾರ ಸಕ್ರಿಯವಾಗಿ ಭಾಗವಹಿಸಿತ್ತು. 2015 ರಲ್ಲಿ ಅವರು ಬಾಂಗ್ಲಾದೇಶದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ ಇತರ ಇಬ್ಬರು ನಾಯಕರೊಂದಿಗೆ ಯುನೈಟೆಡ್ ಲಿಬರೇಷನ್ ಫ್ರಂಡ್ ಆಫ್ ಅಸೋಮ್ (ಉಲ್ಫಾ) ಸಂಘಟನೆಯ ಸಂಸ್ಥಾಪಕ ಅನುಪ್ ಚೇಟಿಯಾ ಅವರನ್ನು ಹಸ್ತಾಂತರಿಸಿದ್ದರು.

ಹಿಂದಿನ ಎಲ್ಲಾ ಪ್ರಮುಖ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದಾಗ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿ ಮರು ಆಯ್ಕೆಯಾಗಿರುವುದು ಭಾರತಕ್ಕೆ ಉತ್ತಮ ಬೆಳವಣಿಗೆ ಆಗಿದೆ. ಮುಂದಿನ ದಿನಗಳಲ್ಲಿ ಭಾರತ-ಬಾಂಗ್ಲಾ ದೇಶಗಳ ನಡುವಿನ ಸಂಬಂಧ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist