ಬರೋಬ್ಬರಿ 2 ಎಕ್ರೆ ಜಾಗ ಖರೀದಿಸಿದ ಶಾರುಖ್ ಖಾನ್ ಪುತ್ರಿ..! ಯಾಕೆ ಗೊತ್ತಾ?
ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್(Shah Rukh Khan) ಪುತ್ರಿ ಸುಹಾನಾ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟಿದ್ದೀರಾ? ಹಾಗಂತ ಮಾತನಾಡುತ್ತಿದೆ ಬಿಟೌನ್. ಮುಂಬೈ ಸಮೀಪದ ಅಲಿಭಾಗ್ ನಲ್ಲಿ ಸುಹಾನಾ ಬರೋಬ್ಬರಿ ಎರಡು ಎಕರೆ ಜಮೀನು ಖರೀದಿಸಿದ್ದಾರಂತೆ. ಹಾಗಾಗಿ ಸುಹಾನಾ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲಿದ್ದಾರೆ ಎನ್ನುವ ಅನುಮಾನ ಮೂಡಿದೆ.
ಈ ಜಮೀನಿಗಾಗಿ ಅವರು 12.91 ಕೋಟಿ ರೂಪಾಯಿ ನೀಡಿದ್ದು, ಈ ಪ್ರಮಾಣದ ಹಣ ತೊಡಗಿಸಿದ್ದು ಅವರ ಹೊಸ ಯೋಜನೆಗಾಗಿ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸುಹಾನಾ ಸಿನಿಮಾ ರಂಗದಲ್ಲೇ ಸಕ್ರೀಯರಾಗುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ ಚಿತ್ರವೊಂದರಲ್ಲಿ ನಟಿಸಿದ್ದರು. ಈಗ ರಿಯಲ್ ಎಸ್ಟೇಟ್ ನಲ್ಲಿ ಭಾರೀ ಹೂಡಿಕೆ ಮಾಡಿದ್ದಾರೆ.
ಸುಹಾನಾ ಖಾನ್ (Suhana Khan) ದುಬಾರಿ ಹುಡುಗಿ ಎಂದೇ ಫೇಮಸ್. ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಕಾಣಿಸಿಕೊಂಡಾಗ ಅವರ ಧರಿಸುವ ಬಟ್ಟೆಗಳ ಬೆಲೆ ಬಗ್ಗೆ ಯಾವತ್ತಿಗೂ ಚರ್ಚೆ ಆಗುತ್ತದೆ. ಇತ್ತೀಚೆಗೆ ಗೆಳತಿಯರೊಂದಿಗೆ ಕಾಣಿಸಿಕೊಂಡಿದ್ದ ಸುಹಾನಾ ಬರೋಬ್ಬರಿ 69,574 ರೂ. ಬೆಲೆಯ ಶೂ ಧರಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಕೇವಲ ಸಿನಿಮಾ ನಟ-ನಟಿಯರು ಹೆಚ್ಚು ಬೆಲೆ ಬಾಳುವ ಶೂ ಮತ್ತು ಬಟ್ಟೆಗಳನ್ನು ಧರಿಸುತ್ತಾರೆ ಎಂಬ ಮಾತನ್ನು ಸುಹಾನ ಸುಳ್ಳು ಮಾಡಿದ್ದರು.