ಹಿರಿಯ ಮುಖಂಡರು ಅಡ್ವಾಣಿ ಮತ್ತು ಜೋಶಿ ಅವರಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ..!
ದೆಹಲಿ ಡಿಸೆಂಬರ್ 20: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬಿಜೆಪಿ ಹಿರಿಯ ಮುಖಂಡರು ಅಯೋಧ್ಯೆ ಹೋರಾಟದ ಪ್ರಮುಖರಾದ ಅಡ್ವಾಣಿ ಹಾಗೂ ಜೋಶಿ ಅವರಿಗೆ ಕೊನೆಗೂ ಆಹ್ವಾನ ನೀಡಲಾಗಿದೆ.
ಇಬ್ಬರು ಹಿರಿಯ ಮುಖಂಡರ ವಯಸ್ಸಿ ಕಾರಣ ಮುಂದಿಟ್ಟು ಇಬ್ಬರನ್ನು ರಾಮಮಂದಿರ ಉದ್ಘಾಟನೆಯಿಂದ ದೂರ ಇಡಲಾಗಿತ್ತು. ಈದ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮುಂದಿನ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಹಿರಿಯರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಹ್ವಾನ ನೀಡಿದೆ. ಸಾಕಷ್ಟು ಸ್ವಾಮೀಜಿಗಳಿಗೆ ಹಾಗೂ ಹಿರಿಯ ರಾಜಕಾರಣಿಗಳಿಗೆ ಆಹ್ವಾನ ನೀಡಿತ್ತು. ಆದರೆ. ರಾಮಮಂದಿರಕ್ಕಾಗಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಅಡ್ವಾಣಿ ಮತ್ತು ಜೋಶಿ ಇಬ್ಬರನ್ನು ವಯಸ್ಸಿನ ಕಾರಣ ಹೇಳಿ ಟ್ರಸ್ಟ್ ಕೈಬಿಟ್ಟಿತ್ತು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಇಬ್ಬರು ನಾಯಕರಿಗೆ ಆಹ್ವಾನ ನೀಡಲಾಗಿದೆ.
ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಲ್ ಕೃಷ್ಣ ಅಡ್ವಾಣಿ ಮತ್ತು ರಾಮಮಂದಿರ ಚಳವಳಿಯ ಹರಿಕಾರ ಡಾ. ಮುರಳಿ ಮನೋಹರ ಜೋಶಿ ಅವರನ್ನು ಆಹ್ವಾನಿಸಲಾಗಿದೆ. ಇಬ್ಬರೂ ಹಿರಿಯರು ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ ” ಎಂದು ವಿಶ್ವ ಹಿಂದೂ ಪರಿಷತ್ ಸದಸ್ಯ ಅಲೋಕ್ ಕುಮಾರ್ ಹೇಳಿದರು.
ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆಯ ಸಂಭ್ರಮ – ಧಾರೆ ಎರೆದ ಉಡುಪಿ ಜಿಲ್ಲಾಧಿಕಾರಿ
ಉಡುಪಿ ಡಿಸೆಂಬರ್ 20: ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಡಿಸೆಂಬರ್ 19 ರ ಸಂಜೆ ಮಂಗಳವಾರ ದಿಂದ ಬುಧವಾರ ಮಧ್ಯಾಹ್ನದ ವರೆಗೆ ಮದುವೆ ಸಂಭ್ರಮದ ಕಳೆಯು ಕಟ್ಟಿತ್ತು. ಸಂಜೆ ಮೆಹಂದಿ ಕಾರ್ಯಕ್ರಮ ನಡೆದರೆ, ಬೆಳಗ್ಗೆ ಎರಡು ಜೋಡಿಗಳ ವಿವಾಹ ಮಹೋತ್ಸವವು ಅಧಿಕಾರಿಗಳು, ಗಣ್ಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು.
ವಿವಾಹ ನಿಶ್ಚಯ ಕಾರ್ಯಕ್ರಮ ಜಿಲ್ಲಾಡಳಿತದ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ವರರ ಆರೋಗ್ಯ, ನಡತೆ, ಅವರು ಗಳಿಸಿರುವ ಆದಾಯ, ನಡತೆ ಮತ್ತಿತರ ವಿವರಗಳನ್ನು ಕಲೆ ಹಾಕುವುದರೊಂದಿಗೆ ಜಿಲ್ಲಾಡಳಿತ, ವರನ ಗುರು ಹಿರಿಯರು ಒಪ್ಪಿಗೆ ನೀಡಿದರು.
ತುಮಕೂರು ಮೂಲದ 32 ವರ್ಷ ಪ್ರಾಯದ ಶೀಲಾ ರವರು ಕಳೆದ 4 ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಿದ್ದು, ಅನಾಥೆಯಾದ ಇವರನ್ನು ಕುಂದಾಪುರ ತಾಲೂಕಿನ ಬೆದ್ರಾಡಿಯ ಮಹಾಬಲ ಶಾಸ್ತಿçಯ ಸುಪುತ್ರರಾದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದ 43 ವರ್ಷದ ಗಣೇಶ್ ಶಾಸ್ತ್ರೀ ಅವರೊಂದಿಗೆ ಹಾಗೂ ಭದ್ರಾವತಿ ಮೂಲದ 21 ವರ್ಷ ಪ್ರಾಯದ ಕುಮಾರಿ ಅವರು ಕಳೆದ ಎರಡು ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಿದ್ದು, ಪೋಷಕರಿಲ್ಲದ ಇವರನ್ನು ಯಲ್ಲಾಪುರ ಮೂಲದ ನಂದೊಳ್ಳಿ ಅಣಲಗಾರದ ಹಾಲಿ ಬೆಳ್ಳಂಜೆಯಲ್ಲಿ ಪುರೋಹಿತ ಕೆಲಸ ನಿರ್ವಹಿಸುತ್ತಿರುವ 29 ವರ್ಷ ಪ್ರಾಯದ ಸತ್ಯ ನಾರಾಯಣ ಶ್ರೀಧರ ಭಟ್ಟ ಅವರೊಂದಿಗೆ ಮದುವೆ ನೆರವೇರಿತು.