ಸೆಲ್ಫಿ ಅವಾಂತರ: ಯುವಕನ ಮೇಲೆ ಹರಿದ ರೈಲು, ಸ್ಥಳದಲ್ಲೇ ಸಾವು
ಸೆಲ್ಫಿ(Selfie) ತೆಗೆದುಕೊಳ್ಳುತ್ತಿದ್ದ ಯುವಕನ ಮೇಲೆ ರೈಲು ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವಂಶ್ ಎಂದು ಗುರುತಿಸಲಾಗಿದ್ದು, ಬೆಳಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ದ್ವಾರಕಾ ಧೀಶ್ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ ತಿವಾರಿಪುರಂ ರೈಲ್ವೆ ಸೇತುವೆಯಲ್ಲಿ ಈ ಘಟನೆ ನಡೆದಿದೆ.
ಹೋಲಿ ಗೇಟ್ನಲ್ಲಿ ವಾಹನ ದಟ್ಟಣೆಯಿಂದಾಗಿ ಮೂವರು ಜಮುನಾ ಪ್ರದೇಶದ ತಿವಾರಿಪುರಂ ಕಡೆಗೆ ತೆರಳಿದರು. ಅಲ್ಲಿ ಸ್ಕೂಟರ್ ನಿಲ್ಲಿಸಿ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದರು.
ಬಳಿಕ ರೈಲು ಸಮೀಪಿಸುತ್ತಿದ್ದಂತೆ, ಅದನ್ನು ತಪ್ಪಿಸಲು ಸ್ನೇಹಿತರು ತಕ್ಷಣವೇ ಸೇತುವೆಯ ಒಂದು ಬದಿಗೆ ತೆರಳಿದರು, ಆದರೆ ವಂಶ್ ಮಾತ್ರ ಟ್ರ್ಯಾಕ್ ಬಳಿ ಹೆಜ್ಜೆ ಹಾಕಿದ್ದಾನೆ, ಬಲವಾದ ಗಾಳಿಯನ್ನು ತಡೆಯಲಾಗಲಿಲ್ಲ. ಈ ವೇಳೆ ರೈಲಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಎಸ್ಪಿ ಶೈಲೇಶ್ ಕುಮಾರ್ ಪಾಂಡೆ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ನದಿ ದಡಗಳು ಮತ್ತು ರೈಲ್ವೆ ಹಳಿಗಳಂತಹ ಅಪಾಯಕಾರಿ ಸ್ಥಳಗಳ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.
ಜೋಧ್ಪುರ: ಮಿಲಿಟರಿ ಕ್ವಾರ್ಟರ್ಸ್ನಲ್ಲಿ ಯೋಧರೊಬ್ಬರ ಪತ್ನಿ ಹಾಗೂ ಮಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ
ಮಿಲಿಟರಿ ಕಾರ್ಟರ್ಸ್ನಲ್ಲಿ ಯೋಧರೊಬ್ಬರ ಪತ್ನಿ ಹಾಗೂ ಮಗಳ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ, ಈ ಸಂಬಂಧ ಯೋಧರನ್ನು ಬಂಧಿಸಲಾಗಿದೆ. ರಾಜಸ್ಥಾನದ ಜೋಧ್ಪುರದಲ್ಲಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ, 25 ವರ್ಷದ ರುಕ್ಮೀನಾ ಮತ್ತು ಅವರ ಎರಡು ವರ್ಷದ ಮಗಳು ರಿದ್ಧಿಮಾ ಅವರ ಶವಗಳು ಹಾಸಿಗೆಯ ಮೇಲೆ ಪತ್ತೆಯಾಗಿವೆ.
ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಬೆಂಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರುಕ್ಮೀನಾ ಅವರ ಪತಿ ರಾಮ್ ಪ್ರಸಾದ್ ಹೇಳಿದ್ದಾರೆ. ರಾಮ್ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವರದಿಯ ಪ್ರಕಾರ, ಪೊಲೀಸ್ ಉಪ ಕಮಿಷನರ್ (ಪೂರ್ವ) ಅಮೃತ ದುವಾಹ್ನ್ ಅವರು ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಮತ್ತು ಅವರು ಜೋಧ್ಪುರ ತಲುಪಿದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಿಕ್ಕಿಂ ಮೂಲದ ರಾಮ್ ಪ್ರಸಾದ್ ನೇಪಾಳ ಮೂಲದ ರುಕ್ಮೀನಾ ಅವರನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಭಾರತೀಯ ಸೇನೆಯಲ್ಲಿ ನಾಯಕ್ ಆಗಿರುವ ರಾಮ್ ಪ್ರಸಾದ್ ಎರಡು ವರ್ಷಗಳ ಹಿಂದೆ ಕುಟುಂಬ ಸಮೇತ ಜೋಧ್ಪುರಕ್ಕೆ ತೆರಳಿ ಮಿಲಿಟರಿ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದರು. ಭಾನುವಾರ ಮುಂಜಾನೆ 5 ಗಂಟೆಗೆ ಆರ್ಮಿ ಕ್ವಾರ್ಟರ್ಸ್ನಲ್ಲಿ ಎರಡು ಶವ ಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಮಹಿಳೆ ಮತ್ತು ಅವರ ಮಗಳು ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡುಕೊಂಡಿದ್ದೇವೆ ಎಂದು ದುಹಾನ್ ಪಿಟಿಐಗೆ ತಿಳಿಸಿದರು.
ರಾಮ್ ಪ್ರಸಾದ್ ಕೂಡ ಮನೆಯಲ್ಲಿದ್ದರು ಮತ್ತು ಅವರ ಕೈಗಳಲ್ಲಿ ಸುಟ್ಟ ಗುರುತುಗಳಿವೆ ಎಂದು ಅವರು ಹೇಳಿದರು. ರಾಮ್ ಪ್ರಸಾದ್ ಅವರು ತಮ್ಮ ಪತ್ನಿ ಮತ್ತು ಅವರ ಮಗಳನ್ನು ಉಳಿಸಲು ಪ್ರಯತ್ನಿಸಿದರು ಆದರೆ ವಿಫಲರಾದರು ಮತ್ತು ಸಹಾಯಕ್ಕಾಗಿ ಮನೆಯಿಂದ ಹೊರಗೆ ಓಡಿಹೋದರು ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ರಾಮ್ ಪ್ರಸಾದ್ ವಿರುದ್ಧ ರತನಾಡ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದುಹಾನ್ ಹೇಳಿದರು.
ಮರಣೋತ್ತರ ಪರೀಕ್ಷೆ ನಡೆಸುವವರೆಗೆ ನಾವು ಯಾವುದೇ ತೀರ್ಮಾನಕ್ಕೆ ಬರುವ ಸ್ಥಿತಿಯಲ್ಲಿಲ್ಲ ಎಂದು ದುಹಾನ್ ಹೇಳಿದರು ಮತ್ತು ಫೋರೆನ್ಸಿಕ್ಸ್ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಮಾಹಿತಿ ನೀಡಿದರು.