ಬುಧವಾರ, ಫೆಬ್ರವರಿ 21, 2024
ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆಸ್ತಿಗಾಗಿ ಗಲಾಟೆ ; ಸಂಬಂಧಿಯನ್ನೇ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಅಪ್ಪ - ಮಗ.!

Twitter
Facebook
LinkedIn
WhatsApp
ಆಸ್ತಿಗಾಗಿ ಗಲಾಟೆ ; ಸಂಬಂಧಿಯನ್ನೇ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಅಪ್ಪ - ಮಗ.!

ಶಿವಮೊಗ್ಗ, ಡಿ.03: ತಾಲೂಕಿನ ಬೆಳಲಕಟ್ಟೆ ಗ್ರಾಮದಿಂದ ಇಂದು(ಡಿ.03)ಬೆಳಗ್ಗೆ ಮಗಳ ಮನೆಗೆ ಹೋಗುತ್ತಿದ್ದ ಮಹೇಶಪ್ಪ ಎನ್ನುವ ವ್ಯಕ್ತಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾರೆ. ಆಸ್ತಿ ವಿಚಾರ(Property Issue)ಕ್ಕಾಗಿ ದಾಯಾದಿಗಳ ನಡುವಿನ ಮನಸ್ತಾಪವು ಕೊಲೆಯಲ್ಲಿ ಅಂತ್ಯವಾಗಿದೆ. ಬೈಕ್ ಮೇಲೆ ಹೋಗುತ್ತಿದ್ದ ಮಹೇಶಪ್ಪನನ್ನು ದಾಯಾದಿ ಕುಮಾರಪ್ಪ ಮತ್ತು ಆತನ ಮಗ ಕಾರ್ತಿಕ್ ಎಂಬುವರು, ಬೈಕ್ ತಡೆದು ಪೆಟ್ರೋಲ್ ಸುರಿದು ಜೀವಂತ ಸುಟ್ಟಿದ್ದಾರೆ. ಜೊತೆಗೆ ಆತನ ಬಳಿಯಿದ್ದ 60 ಸಾವಿರ ರೂಪಾಯಿ ನಗದು ಮತ್ತು ಬೈಕ್​ನ್ನು ಸುಟ್ಟು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಕರೆ ಮೂಲಕ ಆರೋಪಿಗಳ ವಿಷಯ ತಿಳಿಸಿದ ಮೃತ ವ್ಯಕ್ತಿ

ಬೆಂಕಿಯಿಂದ ಸುಟ್ಟುಗಾಯವಾಗಿದ್ದ ವ್ಯಕ್ತಿಯು ಅಳಿಯನಿಗೆ ಕಾಲ್ ಮಾಡಿ ಸಾಯುವ ಮೊದಲು ತನ್ನ ಹತ್ಯೆ ಮಾಡಿದ ಇಬ್ಬರ ಹೆಸರನ್ನು ಹೇಳಿದ್ದಾನೆ. ಸುಟ್ಟ ಗಾಯದಿಂದ ಬಳಲುತ್ತಿದ್ದ ವ್ಯಕ್ತಿಯು ನರಳಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಕೊಲೆ ಮಾಡಿದ ಕುಮಾರಪ್ಪ ಮತ್ತು ಕಾರ್ತಿಕ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದು, ಕೊಲೆ ಮಾಡಿದ ತಂದೆ ಮಕ್ಕಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತನ ಮಗಳು ಒತ್ತಾಯಿಸಿದ್ದಾಳೆ.

ಮೂರು ಎಕರೆ ಜಮೀನು ವಿಚಾರ; ಸಂಬಂಧಿಯನ್ನೇ ಜೀವಂತ ಸುಟ್ಟ ಅಪ್ಪ-ಮಗ

ನಿತ್ಯ ಮಹೇಶಪ್ಪ ಮಗಳ ಮನೆಗೆ ಹೋಗಿ ತೋಟಕ್ಕೆ ನೀರು ಬಿಟ್ಟು ವಾಪಾಸಾಗುತ್ತಿದ್ದರು. ನಿನ್ನೆ(ಡಿ.02) ನೀರಿನ ಮೋಟಾರ್ ಕೆಟ್ಟಕಾರಣ ಇಂದು ಬೆಳಿಗ್ಗೆ ಮೋಟಾರ್ ಬದಲಾಯಿಸಲು ತೀರ್ಮಾನಿಸಿ, ಮನೆಯಿಂದ ದ್ವಿಚಕ್ರ ವಾಹನದಲ್ಲಿ 60 ಸಾವಿರ ರೂ ಹಣ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಶಿವಮೊಗ್ಗ ತಾಲೂಕಿನ ಮತ್ತೋಡು ಕ್ರಾಸ್ ಬಳಿ ಈ ಕೃತ್ಯ ನಡೆದಿದೆ. ಕೊಲೆಯಾದ ಮಹೇಶಪ್ಪ ಮತ್ತು ದಾಯಾದಿ ಕುಮಾರಪ್ಪ ಇಬ್ಬರ ನಡುವೆ ಮೂರು ಎಕರೆ ಜಮೀನು ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ಇದೆ. ಈ ವಿಚಾರವಾಗಿ ಪದೇ ಪದೇ ದಾಯಾದಿಗಳ ನಡುವೆ ಕಿರಿಕ್ ನಡೆಯುತ್ತಿತ್ತು. ಇದರ ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ ಪ್ಲ್ಯಾನ್ ಮಾಡಿ ತಂದೆ ಮಗ ಸೇರಿ ಮಹೇಶಪ್ಪನನನ್ನು ಜೀವಂತ ಸುಟ್ಟಿದ್ದಾರೆ.

ತಕ್ಷಣವೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಮಹೇಶಪ್ಪ ಬದುಕುಳಿಯುವುದು ಕಷ್ಟವೆಂದಿದ್ದಾರೆ. ಬಳಿಕ ಮೆಗ್ಗಾನ್ ಗೆ ಸಾಗಿಸಲಾಗಿತ್ತು. ಮೆಗ್ಗಾನ್ ನಲ್ಲಿ ಮಹೇಶಪ್ಪ ಕೊನೆ ಉಸಿರೆಳೆದಿದ್ದಾನೆ. ಕುಮಾರಪ್ಪ, ಮಗ ಕಾರ್ತಿಕ್ ಹೆಸರನ್ನು ಸುಟ್ಟ ಸ್ಥಿತಿಯಲ್ಲಿ ಮಹೇಶಪ್ಪ ಹೇಳಿದ್ದಾನೆ. ಇದರ ಆಧಾರದ ಮೇಲೆ ಈಗಾಗಲೇ ಗ್ರಾಮಾಂತರ ಪೊಲೀಸರು ತಂದೆ ಕುಮಾರಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಮಗ ಕಾರ್ತಿಕ್ ಸದ್ಯ ತಲೆಮರೆಸಿಕೊಂಡಿದ್ದಾನೆ.

ಮಹೇಶಪ್ಪ, ಆಸ್ತಿ ವಿಚಾರವಾಗಿ ಕುಮಾರಪ್ಪನ ಬೆದರಿಕೆ ಗಲಾಟೆಗಳಿಗೆ ಕ್ಯಾರೆ ಎಂದಿರಲಿಲ್ಲ. ಈ ಜಗಳವು ಈಗಾಗಲೇ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಜಮೀನು ವಿವಾದವು ಕೋರ್ಟ್​ನಲ್ಲಿತ್ತು. ಹೀಗಾಗಿ ಗ್ರಾಮಾಂತರ ಪೊಲೀಸರು ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದರ ಬೆನ್ನಲ್ಲೇ ಮಹೇಶಪ್ಪನ ಧಾರುಣ ಹತ್ಯೆ ಆಗಿದ್ದಕ್ಕೆ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಆಸ್ತಿಗಾಗಿ ವಯಸ್ಸಾದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಪೆಟ್ರೋಲ್ ಹಾಕಿ ಸುಟ್ಟು ಕೊಲೆ ಮಾಡಿದ್ದಾರೆ. ರಕ್ತ ಸಂಬಂಧಿ ಎನ್ನುವುದನ್ನು ಮರೆತು ಕೇವಲ ದ್ವೇಷಕ್ಕಾಗಿ ದಾಯಾದಿಯು ಮಗನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ಆಸ್ತಿ ವಿಚಾರವು ಒಂದು ಜೀವವನ್ನೇ ಇಲ್ಲಿ ಬಲಿ ಪಡೆದಿದ್ದು ಮಾತ್ರ ನೋವಿನ ಸಂಗತಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ Twitter Facebook LinkedIn WhatsApp Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’