ಶಾಲಾ ಬಸ್ ಹರಿದು ಸ್ಥಳದಲ್ಲೇ 7 ವರ್ಷದ ವಿದ್ಯಾರ್ಥಿನಿ ಸಾವು
Twitter
Facebook
LinkedIn
WhatsApp
ಬೆಂಗಳೂರು (ಜೂ.08): ನಗರದ ತಾವರೆಕೆರೆಯಲ್ಲಿ ಶಾಲೆಯ ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಸಾವನ್ನಪ್ಪಿರೋ ಘಟನೆ ನಡೆದಿದೆ.
ಕೃಷ್ಣೇಗೌಡ ರಾಧಾ ದಂಪತಿಯ ಪುತ್ರಿ, ಎಂಇಎಸ್ ಶಾಲೆಯ ವಿದ್ಯಾರ್ಥಿನಿ 7 ವರ್ಷದ ಲಿಸ್ಮಿತಾ ಮೃತ ಬಾಲಕಿ. ನಿನ್ನೆ ಶಾಲೆಯಿಂದ ಮನೆಗೆ ವಾಪಸ್ ಆಗಿ ಬಸ್‌ನಿಂದ ಇಳಿದ ವೇಳೆ ಮನೆ ಮುಂದೆಯೇ ಬಾಲಕಿ ಮೇಲೆ ಶಾಲಾ ಬಸ್ ಹರಿದಿದೆ.
ವಾಹನ ಹರಿದು ತೀವ್ರವಾಗಿ ಗಾಯಗೊಂಡಿದ್ದ ಲಿಸ್ಮಿತಾಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದ್ದು, ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಎಂಇಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಡ್ರೈವರ್ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.