ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

SCDCC Recruitment : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 123 ಹುದ್ದೆಗೆ ನೇಮಕ ; ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

Twitter
Facebook
LinkedIn
WhatsApp
SCDCC Recruitment : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 123 ಹುದ್ದೆಗೆ ನೇಮಕ ; ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಲ್ಲಿ ದ್ವಿತೀಯ ದರ್ಜೆ ಕ್ಲರ್ಕ್‌ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರು ಅರ್ಜಿ ಹಾಕಿರಿ. ಒಟ್ಟು 125 ಹುದ್ದೆಗಳಿವೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಲ್ಲಿ ಪ್ರಸ್ತುತ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಹತೆ, ಆಯ್ಕೆ ವಿಧಾನ, ಶುಲ್ಕ ಮಾಹಿತಿ, ವಯಸ್ಸಿನ ಅರ್ಹತೆಗಳನ್ನು ಈ ಕೆಳಗಿನಂತೆ ಚೆಕ್‌ ಮಾಡಿಕೊಳ್ಳಿ.

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಕಂಪ್ಯೂಟರ್ ಪ್ರೋಗ್ರಾಮರ್2
ದ್ವಿತೀಯ ದರ್ಜೆ ಕ್ಲರ್ಕ್‌123

ಹುದ್ದೆವಾರು ವೇತನ ಶ್ರೇಣಿ
ಕಂಪ್ಯೂಟರ್ ಪ್ರೋಗ್ರಾಮರ್ : Rs.36985-89,600.
ದ್ವಿತೀಯ ದರ್ಜೆ ಕ್ಲರ್ಕ್‌ : Rs.24910-55,655.

ವಿದ್ಯಾರ್ಹತೆ ಹಾಗೂ ಆಯ್ಕೆ ವಿಧಾನ
ಕಂಪ್ಯೂಟರ್‌ ಪ್ರೋಗ್ರಾಮರ್ – ಎಂಸಿಎ ಅಥವಾ ಬಿಇ ಇನ್‌ ಕಂಪ್ಯೂಟರ್ ಸೈನ್ಸ್‌ ಅಥವಾ ಎಂಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್‌ ಪಾಸ್. ಜತೆಗೆ ಕನಿಷ್ಠ 3 ವರ್ಷ ಸೇವಾನುಭವ ಹೊಂದಿರಬೇಕು. ಈ ಹುದ್ದೆಗಳಿಗೆ 200 ಅಂಕಗಳಿಗೆ ಕನ್ನಡ ಭಾಷೆ, ಜೆನೆರಲ್ ಇಂಗ್ಲಿಷ್, ಕಂಪ್ಯೂಟರ್ ಅರಿವು ಕುರಿತು ಪ್ರಶ್ನೆಗಳ ಪರೀಕ್ಷೆ ಇರುತ್ತದೆ.

ದ್ವಿತೀಯ ದರ್ಜೆ ಕ್ಲರ್ಕ್ – ಯಾವುದೇ ಪದವಿ / ಸ್ನಾತಕೋತ್ತರ ಪದವಿ ಜತೆಗೆ ಕನಿಷ್ಠ 6 ತಿಂಗಳ ಕಂಪ್ಯೂಟರ್‌ ಕೋರ್ಸ್‌ ಪ್ರಮಾಣ ಪತ್ರ ಹೊಂದಿರಬೇಕು. ಈ ಹುದ್ದೆಗಳಿಗೆ ಸಹ 200 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಕನ್ನಡ ಭಾಷೆ, ಜೆನೆರಲ್ ಇಂಗ್ಲಿಷ್, ಕಂಪ್ಯೂಟರ್ ಅರಿವು, ಸಹಕಾರಿ ವಿಷಯಗಳು, ಭಾರತ ಸಂವಿಧಾನ, ಸಮಾಜಿಕ ನಡಾವಳಿಗಳ ಕುರಿತು ಪ್ರಶ್ನೆಗಳು ಇರುತ್ತವೆ.

ವಯಸ್ಸಿನ ಅರ್ಹತೆಗಳು
ದಿನಾಂಕ 20-09-2023 ಕ್ಕೆ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 20-09-2023

ಅರ್ಜಿ ಸಲ್ಲಿಸುವ ವಿಧಾನ
– ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನೇಮಕಾತಿ ವೆಬ್‌ಸೈಟ್‌ ಗೆ ಭೇಟಿ ನೀಡಿ.
– ಓಪನ್ ಆದ ಪೇಜ್‌ನಲ್ಲಿ ಸ್ಕ್ರಾಲ್‌ ಡೌನ್‌ ಮಾಡಿ.
– ಅರ್ಜಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಕೇಳಲಾಗಿರುತ್ತದೆ. ಸೂಕ್ತವಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.

LIC HFL ವಿದ್ಯಾಧನ್ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ: ವಾರ್ಷಿಕ Rs.25,000 ವರೆಗೆ ವಿದ್ಯಾರ್ಥಿವೇತನ

ಎಲ್‌ಐಸಿ’ಯ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್ ವಿದ್ಯಾಧನ್‌ ಸ್ಕಾಲರ್‌ಶಿಪ್‌ ಅನ್ನು ಲಾಂಚ್‌ ಮಾಡಿದೆ. ಹತ್ತನೇ ತರಗತಿ ಪಾಸ್‌ ಮಾಡಿದ್ದು 11ನೇ ತರಗತಿಗೆ ಪ್ರವೇಶ ಪಡೆದಿರುವವರು, ಪದವಿ ಓದುತ್ತಿರುವವರು, ಸ್ನಾತಕೋತ್ತರ ಪದವಿ ಓದುತ್ತಿರುವವರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ವಾರ್ಷಿಕವಾಗಿ ರೂ.25,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಯಾರಿಗೆಲ್ಲಾ ಸಿಗುತ್ತೆ ಎಲ್‌ಐಸಿ ಹೆಚ್‌ಎಫ್‌ಎಲ್‌ ವಿದ್ಯಾಧನ್ ಸ್ಕಾಲರ್‌ಶಿಪ್ ?
  • 10ನೇ ತರಗತಿ ಪಾಸಾದ ವಿದ್ಯಾರ್ಥಿ, ಪಿಯುಸಿ’ಗೆ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿದ್ದಲ್ಲಿ ಅಂತಹವರಿಗೆ.
  • ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ.
  • ಪದವಿ ಪಾಸಾಗಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅಡ್ಮಿಷನ್‌ ಪಡೆದವರಿಗೆ.
  • ಕನಿಷ್ಠ ಶೇಕಡ.60 ಅಂಕಗಳನ್ನು ತಮ್ಮ ಕೊನೆ ವರ್ಷದ ಪರೀಕ್ಷೆಯಲ್ಲಿ ಪಡೆದಿರಬೇಕು.
  • ವಾರ್ಷಿಕ ಆದಾಯ ಗರಿಷ್ಠ ರೂ.3,60,000 ಮೀರಿರಬಾರದು.

ವಿದ್ಯಾರ್ಥಿವೇತನ ಯಾರಿಗೆ ಎಷ್ಟು?
ಹತ್ತನೇ ತರಗತಿ ಪಾಸಾದವರಿಗೆ : ವಾರ್ಷಿಕ Rs.15,000. ಎರಡು ವರ್ಷ.

 


ಪದವಿ ಅಧ್ಯಯನ ವಿದ್ಯಾರ್ಥಿಗಳಿಗೆ : ವಾರ್ಷಿಕ Rs.25,000. ಮೂರು ವರ್ಷ.
ಸ್ನಾತಕೋತ್ತರ ಪದವಿ ಅಧ್ಯಯನ ವಿದ್ಯಾರ್ಥಿಗಳಿಗೆ : ವಾರ್ಷಿಕ Rs.20,000. ಎರಡು ವರ್ಷ.

ವಿದ್ಯಾಧನ್‌ ವಿದ್ಯಾರ್ಥಿವೇತನ ಅರ್ಜಿಗೆ ಬೇಕಾದ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್‌
  • 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ / ದ್ವಿತೀಯ ಪಿಯುಸಿ ಅಂಕಪಟ್ಟಿ
  • ಯುಜಿ ಅಂಕಪಟ್ಟಿ
  • ಬ್ಯಾಂಕ್‌ ಪಾಸ್‌ಬುಕ್
  • ಅಭ್ಯರ್ಥಿ ಭಾವಚಿತ್ರ
  • ಅಫಿಡೇವಿಟ್
  • ಪ್ರವೇಶ ಪಡೆದ ರಶೀದಿ


ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-09-2023

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist