ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಗೌಡ
ರಿಷಬ್ ಶೆಟ್ಟಿ (Rishab Shetty) ಅವರಿಗೆ ನಾಯಕಿಯಾಗಿ ‘ಕಾಂತಾರ’ ಮೂಲಕ ಸಕ್ಸಸ್ ಕಂಡ ನಟಿ ಸಪ್ತಮಿ ಇದೀಗ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಕಿರುತೆರೆಗೆ ಸಪ್ತಮಿ ಹಾಜರಿ ಹಾಕಿದ್ದಾರೆ. ‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ಇದೀಗ ಮಹಾ ಸಂಚಿಕೆ ನಡೆಯುತ್ತಿದೆ. ಇದರಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಸಪ್ತಮಿ ತಂಡಕ್ಕೆ ಸಾಥ್ ನೀಡಿದ್ದಾರೆ.
ಸೀರಿಯಲ್ ಪ್ರಚಾರಕ್ಕೆ ಸಪ್ತಮಿ ಬಂದಿದ್ದಾರೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪಾತ್ರಗಳ ನಿರೂಪಣೆ ಮಾಡಿದ್ದಾರೆ. ಸೀರಿಯಲ್‌ನ ನಾಯಕಿ ತುಳಸಿ ಪಾತ್ರಧಾರಿ ಅಂದರೆ ಸುಧಾರಾಣಿ ಅವರು ಮಕ್ಕಳ ಖುಷಿಗಾಗಿ ಎದುರಾಳಿಗಳ ಕುತಂತ್ರಕ್ಕೆ ಮಣಿದು ಮನೆಯಿಂದ ಹೊರಹೋಗುತ್ತಾರೆ. ಮುಂದೇನು ಆಗುತ್ತೆ? ನಾಯಕಿ ಮತ್ತೆ ಮರಳಿ ಮನೆಗೆ ಬರುತ್ತಾರಾ ಎಂಬುದು ಸದ್ಯದ ಟ್ವಿಸ್ಟ್. ಇದನ್ನು ಸಪ್ತಮಿ ನಿರೂಪಣೆ ಮಾಡುವ ಮೂಲಕ ಸೀರಿಯಲ್ ಕುರಿತು ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದ್ದಾರೆ. ಸದ್ಯ ರಿವೀಲ್ ಆಗಿರೋ ಸಪ್ತಮಿ ಪ್ರೋಮೋ ಸದ್ದು ಮಾಡುತ್ತಿದೆ.
‘ಕಾಂತಾರ’ ಚಿತ್ರದ ಸಕ್ಸಸ್ ಅನ್ನು ನಟಿ ಸದುಪಯೋಗಪಡಿಸಿಕೊಂಡಿದ್ದಾರೆ. ಕನ್ನಡದ ಜೊತೆ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಸಪ್ತಮಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿಯೂ ಕನ್ನಡದ ಬೆಡಗಿಗೆ ಸಖತ್ ಬೇಡಿಕೆಯಿದೆ.
ತೆಲುಗು ಅಂಗಳದಲ್ಲಿ ಮೊದಲೇ ಕನ್ನಡತಿಯರ ದರ್ಬಾರ್ ಜಾಸ್ತಿಯಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ, ರುಕ್ಮಿಣಿ ವಸಂತ್ (Rukmini Vasanth) ಮಧ್ಯೆ ಸಪ್ತಮಿ ಕೂಡ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಅಳಿದು ತೂಗಿ ಸಿನಿಮಾ ಒಪ್ಪಿಕೊಳ್ತಿದ್ದಾರೆ.
ಒಟಿಟಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ಬಿ
ರಕ್ಷಿತ್ ಶೆಟ್ಟಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಬಿ ಒಟಿಟಿಯಲ್ಲಿ (OTT) ಲಭ್ಯವಾಗಿದೆ. ಜನವರಿ 25ರ ಮಧ್ಯರಾತ್ರಿಯಿಂದಲೇ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ನೋಡಬಹುದು ಎಂದು ನಿರ್ದೇಶಕ ಹೇಮಂತ್ ರಾವ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಎ ಮತ್ತು ಬಿ ಪಾರ್ಟ್ ಎರಡನ್ನೂ ಪ್ರೇಕ್ಷಕರು ಒಪ್ಪಿಕೊಂಡಿದ್ದರು. ಬಾಕ್ಸ್ ಆಫೀಸಿನಲ್ಲೂ ಗೆದ್ದಿದ್ದವು.
ಕೇವಲ ಪ್ರೇಕ್ಷಕರು ಮಾತ್ರವಲ್ಲ, ಸೆಲೆಬ್ರಿಟಿಗಳು ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಹೆಸರಾಂತ ನಟ ಪ್ರಕಾಶ್ ರಾಜ್ (Prakash Raj), ತಾವು ಮೆಚ್ಚಿದ ಸಿನಿಮಾಗಳ ಬಗ್ಗೆ ಆಗಾಗ್ಗೆ ಬರೆಯುತ್ತಲೇ ಇರುತ್ತಾರೆ. ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾ ಬಗ್ಗೆ, ‘ಸಪ್ತ ಸಾಗರದಾಚೆ ಎಲ್ಲೋ.. ಆಹಾ.. ಒಂದು ಸುಂದರ ದೃಶ್ಯಕಾವ್ಯ ಅನುಭವ. ಡೋಂಟ್ ಮಿಸ್’ ಎಂದು ಬರೆದುಕೊಂಡಿದ್ದರು.
ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ಚೈತ್ರಾ ಆಚಾರ್ಯ, ರುಕ್ಮಿಣಿ, ಚರಣ್ ರಾಜ್ ಹೀಗೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರಿಗೆ ತಮ್ಮ ಬರಹವನ್ನು ಟ್ಯಾಗ್ ಮಾಡಿದ್ದರು. ಇಡೀ ತಂಡಕ್ಕೆ ಇಂಥದ್ದೊಂದು ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನೂ ಪ್ರಕಾಶ್ ರಾಜ್ ಅರ್ಪಿಸಿದ್ದರು.
ಕೇವಲ ಕನ್ನಡದಲ್ಲಿ ಮಾತ್ರವಲ್ಲ, ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradacche Yello) ತೆಲುಗು ನೆಲದಲ್ಲೂ ಸದ್ದು ಮಾಡಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾ, ಈಗ ತೆಲುಗಿನಲ್ಲೂ (Tollywood) ಅತ್ಯುತ್ತಮ ಪ್ರತಿಕ್ರಿಯೆಯನ್ನು ಕಂಡಿತ್ತು. ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು.