Sanket: ಅತ್ಯದ್ಭುತ ಹಿನ್ನೆಲೆ ಸಂಗೀತ ನೀಡಿದ ಕಾರ್ತಿಕ್ ರಾಜ್, ಜೋಶ್ನಾ ರಾಜ್ ಅತ್ಯುತ್ತಮ ನಿರ್ದೇಶನ, ಚೈತ್ರಾ ಶೆಟ್ಟಿ- ವಿಕ್ಕಿ ರಾವ್ ನೈಜ ಅಭಿನಯದ ಸಾಂಕೇತ್ ಮಂಗಳೂರಿನಲ್ಲಿ ಹೌಸ್ ಪುಲ್ ಶೋ!
Sanket: ಅತ್ಯದ್ಭುತ ಹಿನ್ನೆಲೆ ಸಂಗೀತ ನೀಡಿದ ಕಾರ್ತಿಕ್ ರಾಜ್, ಜೋಶ್ನಾ ರಾಜ್ ಅತ್ಯುತ್ತಮ ನಿರ್ದೇಶನ, ಚೈತ್ರಾ ಶೆಟ್ಟಿ- ವಿಕ್ಕಿ ರಾವ್ ನೈಜ ಅಭಿನಯದ ಸಾಂಕೇತ್ ಮಂಗಳೂರಿನಲ್ಲಿ ಹೌಸ್ ಪುಲ್ ಶೋ.
ಮಂಗಳೂರು: ಅತ್ಯುತ್ತಮ ಕಥಾ ಅಂದರವನ್ನು ಹೊಂದಿ ಈ ವರ್ಷದ ಅತ್ಯುತ್ತಮ ಚಿತ್ರ ಎಂಬ ಭಾವನೆಗೆ ಕನ್ನಡ ಚಲನಚಿತ್ರ ಸಾಂಕೇತ್ (Sanket) ಪಾತ್ರವಾಗಿದೆ. ಮಂಗಳೂರಿನ ಬಹುತೇಕ ಚಿತ್ತಮಂದಿರಗಳಲ್ಲಿ ಹೌಸ್ ಫುಲ್ ಶೋಗಳನ್ನು ಕಾಣುತ್ತಿದೆ.
ಎಲ್ಲರಿಗೂ ಆಶ್ಚರ್ಯ ಹುಟ್ಟುವಂತೆ ಮಾಡಿರುವ ಈ ಚಿತ್ರದ ಬಿಜಿಎಂ ಇಡೀ ಚಿತ್ರವನ್ನು ಅತ್ಯುತ್ತಮ ರೀತಿಯಲ್ಲಿ ತೆಗೆದುಕೊಂಡು ಹೋಗಿದೆ. ಈ ಹಿನ್ನೆಲೆ ಸಂಗೀತವನ್ನು ಕಾರ್ತಿಕ್ ರಾಜ್ ನೀಡಿದ್ದಾರೆ.
ಪತ್ನಿ ಜೋಶ್ನಾ ರಾಜ್ ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಚೈತ್ರ ಶೆಟ್ಟಿ ಹಾಗೂ ವಿಕ್ಕಿ ರಾವ್ ತಮ್ಮ ನೈಜ ಅಭಿನಯದಿಂದ ಚಿತ್ರ ರಸಿಕರ ಗಮನ ಸೆಳೆದಿದ್ದಾರೆ.
ಮಂಗಳೂರಿನ ಭಾರತ್ ಸಿನಿಮಾ, ಪಿವಿಆರ್ ಗಳಲ್ಲಿ ಬಹುತೇಕ ಹೌಸ್ಫುಲ್ ಶೋ ಗಳನ್ನ ಈ ಚಿತ್ರ ಕಂಡಿದೆ.
ವೈದ್ಯರೂಬ್ಬರ ಸಾಮಾಜಿಕ ಸಮಸ್ಯೆಯನ್ನು ಬಹಳ ಸುಂದರವಾಗಿ ಚಿತ್ರ ಚಿತ್ರಿಸಿದೆ. ಬಹುತೇಕವಾಗಿ ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ಸಾಗಿದ್ದು ಮಂಗಳೂರಿನ ಸೌಂದರ್ಯವನ್ನು ಸಂಪೂರ್ಣವಾಗಿ ಚಿತ್ರ ಸೆರೆ ಹಿಡಿದಿದೆ.
ಚಿತ್ರದ ಬಿಜಿಎಂ ಹಾಗೂ ವಿ ಎಫ್ ಎಕ್ಷ್ ಬಹಳಷ್ಟು ಗಮನ ಸೆಳೆದಿದ್ದು ಚಿತ್ರ ರಸಿಕರ ಮನವನ್ನು ಗೆದ್ದಿದೆ.
ಬಹುನಿರೀಕ್ಷಿತ ರಿವರ್ ಸ್ಟ್ರೀಮ್ ಪ್ರೊಡಕ್ಷನ್ ರವರ ಚಲನಚಿತ್ರ ಸಾ೦ಕೇತ್ ಸಿನಿಮಾ ಚಲನಚಿತ್ರ ಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿಕೊಂಡಿದೆ. ಸಾಂಕೇತ್ ಈ ತಿಂಗಳ 26ರಂದು ರಾಜ್ಯಾದ್ಯಂತ ಬಿಡುಗಡೆ ಯಾಗಿದೆ.
ಮಹಿಳಾ ನಿರ್ದೇಶಕಿ ಜೋಶ್ನಾ ರಾಜ್ ಅದ್ಭುತ ನಿರ್ದೇಶನದ, ಪ್ರತಿಭಾವಂತ ಕಾರ್ತಿಕ್ ರಾಜ್ ನೀಡಿರುವ ಅದ್ಭುತ ಹಿನ್ನೆಲೆ ಸಂಗೀತ , ನಾಯಕ ನಟಿ ಚೈತ್ರಾ ಶೆಟ್ಟಿ, ನಾಯಕ ನಟ ವಿಕ್ಕಿ ರಾವ್ ಮನೋಜ್ಙ ಅಭಿನಯದ ಭರವಸೆಯ ಚಲನಚಿತ್ರ ಸಾಂಕೇತ್ ಈ ತಿಂಗಳ 26ರಂದು ರಾಜ್ಯಾದ್ಯಂತ ಬಿಡುಗಡೆ ಯಾಗಿದೆ. ಚಲನಚಿತ್ರದ ಬಿಜಿಎಂ, ಕಥೆ, ಕಲಾವಿದರಗಳ ನಟನೆ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನುಳಿದ ಪಾತ್ರಗಳಲ್ಲಿ ರೂಪ ಶ್ರೀ ವಾರ್ಕಡಿ, ಮೋಹನ್ ಶೇನಿ, ಅಮೀನ್ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಪ್ರೀಮಿಯರ್ ಶೋಗಳಲ್ಲಿ ಎಲ್ಲರಿಂದಲೂ ಬೇಸ್ ಎನಿಸಿಕೊಂಡಿರುವ ಸಿನಿಮಾ ತನ್ನ ಮಿಸ್ಟ್ರಿಗಾಗಿ ಈಗಾಗಲೇ ಶೋ ನೋಡಿದವರ ಗಮನ ಸೆಳೆದಿದೆ.
ಕನ್ನಡದ ಭರವಸೆಯ ಸಿನಿಮಾ ಆಗುವ ಎಲ್ಲಾ ಲಕ್ಷಣಗಳನ್ನು ಈ ಸಿನಿಮಾ ಹೊಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ತನ್ನ ಜೀವನವು ಮದುವೆ ಆಗಿ ಮಕ್ಕಳನ್ನು ಹೊಂದಿದಾಗ ಮಾತ್ರ ಪೂರ್ಣವಾಗುತ್ತದೆ ಎಂದು ಒಬ್ಬ ಯುವಕ ನಂಬಿರುತ್ತಾನೆ. ಆದರೆ ಮದುವೆಯ ಕೆಲವು ವರ್ಷಗಳ ನಂತರ ಮಕ್ಕಳನ್ನು ಹೊಂದುವ ಯಾವುದೇ ವಿಧಾನ ಫಲ ನೀಡದಾಗ ತಲ್ಲಣಗೊಂಡ ವ್ಯಕ್ತಿ ಅಸಾಂಪ್ರದಾಯಿಕ ವಿಧಾನ ಪರಿಶೀಲಿಸಲು ಹೊರಡುತ್ತಾನೆ. ತನ್ನ ಸುತ್ತಲಿನ ಪ್ರತಿಯೊಬ್ಬರ ಜೀವನವನ್ನು ಯಾವ ರೀತಿ ಅಪಾಯಕ್ಕೆ ಸಿಲುಕಿಸುತ್ತಾನೆ ಎಂಬುದನ್ನು ಆಧಾರವಾಗಿಸಿ ಸಿನಿಮಾ ಮಾಡಲಾಗಿದೆ.
ಚಿತ್ರದ ಟ್ರೈಲರ್ ಈಗಾಗಲೇ ಸಾಕಷ್ಟು ಗಮನಸೆಳೆದಿದೆ. ಹೀಗಾಗಿ ಸಿನೆಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ ಎನ್ನುತ್ತಾರೆ.
ನಿರ್ದೇಶಕಿ ಜ್ಯೋತ್ಸ್ನಾ ಕೆ.ರಾಜ್ ಅವರು ಸಂಕಲನಕಾರ ಹಾಗೂ ಧ್ವನಿ ವಿನ್ಯಾಸಕಿಯಾಗಿ ಸಾಧನೆ ಮಾಡಿದ್ದು ಕೇರಳದ ಕುಂಬಳೆಯವರು. 2018ರಲ್ಲಿ ನಾಟಕ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿದ್ದರು. ಸಿನಿಮಾ ಕುರಿತಾದ ವಿಶೇಷ ಅನುಭವ ಪಡೆದಿದ್ದಾರೆ. ರಾಜ್ ಕಾರ್ತಿಕ್ ಅವರು ಸಿನೆಮಾಟೊಗ್ರಫಿ ನಡೆಸಿದ್ದಾರೆ. ಪ್ರಕಾಶ್ ವಿ.ರಾವ್ ಸಾಹಿತ್ಯ ಬರೆದಿದ್ದು, ವಿವಿಧ ಯುವ ತಂಡವೇ ಸಿನೆಮಾ ಮಾಡಿದ್ದಾರೆ ಎಂದರು.