ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾರ್ತಿಕ್‌ ಬೆನ್ನಿಗೆ ಸಂಗೀತಾ ಮಸಾಜ್‌..! ಇವರಿಬ್ಬರ ಮಧ್ಯೆ ಸ್ನೇಹನಾ ಪ್ರೀತಿನಾ?

Twitter
Facebook
LinkedIn
WhatsApp
ಕಾರ್ತಿಕ್‌ ಬೆನ್ನಿಗೆ ಸಂಗೀತಾ ಮಸಾಜ್‌..! ಇವರಿಬ್ಬರ ಮಧ್ಯೆ ಸ್ನೇಹನಾ ಪ್ರೀತಿನಾ?

ಬಿಗ್ ಬಾಸ್ ಕನ್ನಡ ಸೀಸನ್ 10’ರ ಮನೆ ಒಳಗೆ ಸೇರಿರುವ ಸಂಗೀತಾ ಶೃಂಗೇರಿ (Sangeetha Sringeri) ಹಾಗೂ  ಕಾರ್ತಿಕ್ ಮಧ್ಯೆ ಸ್ನೇಹ ಬೆಳೆಯುತ್ತಿದೆ. ದಿನ ಕಳೆದಂತೆ ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿದೆ. ತಮ್ಮ ಮಧ್ಯೆ ಇರೋದು ಫ್ರೆಂಡ್​ಶಿಪ್ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ಮನೆಯಲ್ಲಿ ನಡೆದ ಟಾಸ್ಕ್​ನಲ್ಲಿ ಕಾರ್ತಿಕ್​ ಬೆನ್ನಿಗೆ ಗಾಯವಾಗಿದೆ. ಈ ಗಾಯಕ್ಕೆ ಎಣ್ಣೆ ಹಚ್ಚಿದ್ದಾರೆ ಸಂಗೀತಾ. ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾರ್ತಿಕ್‌ ಬೆನ್ನಿಗೆ ಸಂಗೀತಾ ಮಸಾಜ್‌..! ಇವರಿಬ್ಬರ ಮಧ್ಯೆ ಸ್ನೇಹನಾ ಪ್ರೀತಿನಾ?

ಕಾರ್ತಿಕ್ ಬಿಗ್ ಬಾಸ್​ಗೆ ಬರುವ ಮೊದಲೇ ಲವ್ ವಿಚಾರ ಮಾತನಾಡಿದ್ದರು. ತಾವು ದೊಡ್ಮನೆಯಲ್ಲಿ ಒಬ್ಬರನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಸಂಗೀತಾ ಶೃಂಗೇರಿ ಅವರನ್ನು ಆಯ್ಕೆ ಮಾಡಿಕೊಂಡಂತಿದೆ ಕಾರ್ತಿಕ್. ಇಬ್ಬರೂ ಅಸಮರ್ಥರ ಸಾಲಿನಲ್ಲಿದ್ದರು. ಈ ವೇಳೆ ಇಬ್ಬರ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ. ಈಗ ಇವರ ಮಧ್ಯೆ ಇರುವ ಆಪ್ತತೆ ಹೆಚ್ಚುತ್ತಿದೆ.

ಕಾರ್ತಿಕ್‌ ಬೆನ್ನಿಗೆ ಸಂಗೀತಾ ಮಸಾಜ್‌..! ಇವರಿಬ್ಬರ ಮಧ್ಯೆ ಸ್ನೇಹನಾ ಪ್ರೀತಿನಾ?

ಟಾಸ್ಕ್ ಆಡುವಾಗ ಕಾರ್ತಿಕ್ ಬೆನ್ನಿಗೆ ಗಾಯವಾಗಿದೆ. ಆಗ ಸಂಗೀತಾ ಅವರು ಎಣ್ಣೆ ಹಚ್ಚಿ ಮಸಾಜ್ ಮಾಡಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಇವರ ಜೋಡಿ ಚೆನ್ನಾಗಿದೆ ಎನ್ನುವ ಕಮೆಂಟ್​ಗಳು ಅಭಿಮಾನಿಗಳಿಂದ ಬರುತ್ತಿದೆ.

ಸಂಗೀತಾ ಶೃಂಗೇರಿ ಅವರು ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘777 ಚಾರ್ಲಿ’ ಸಿನಿಮಾ ಮೂಲಕ ಅವರು ಫೇಮಸ್ ಆಗಿದ್ದಾರೆ. ಅವರು ಈಗ ಬಿಗ್ ಬಾಸ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಡೊಳ್ಳು’ದಲ್ಲಿ ಕಾರ್ತಿಕ್ ಅವರು ನಟಿಸಿದ್ದಾರೆ.

ಕಾರ್ತಿಕ್‌ ಬೆನ್ನಿಗೆ ಸಂಗೀತಾ ಮಸಾಜ್‌..! ಇವರಿಬ್ಬರ ಮಧ್ಯೆ ಸ್ನೇಹನಾ ಪ್ರೀತಿನಾ?

‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 16 ಮಂದಿ ಇದ್ದಾರೆ. ಮೊದಲ ವಾರದ ನಾಮಿನೇಷನ್​ನಿಂದ ಸ್ನೇಕ್ ಶ್ಯಾಮ್ ಅವರು ಔಟ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಮನೆಯಲ್ಲಿ ಸ್ಪರ್ಧೆ ಹೆಚ್ಚಲಿದೆ. ಹೀಗಿರುವಾಗಲೇ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಬಂಧ ಬೆಳೆಯುತ್ತಿದೆ. ಕಲರ್ಸ್ ಕನ್ನಡದಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ನೋಡೋಕೆ ಅವಕಾಶ ಇದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ