ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ A25 ಸ್ಮಾರ್ಟ್ಫೋಫೋನ್ ; ಹೇಗಿದೆ ಫೀಚರ್ಸ್!
ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್‌ಸಂಗ್ ಕಂಪನಿ ವರ್ಷಾಂತ್ಯದ ವೇಳೆಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಸ್ಯಾಮ್‌ಸಂಗ್ ಕಂಪನಿಯ ನೂತನ ಫೋನಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಕಂಪನಿಯ ಹೊಸ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ A25 (Samsung Galaxy A25) ಇದೇ ಡಿಸೆಂಬರ್ 19 ಶಿಪ್ಪಿಂಗ್ ಪ್ರಾರಂಭವಾಗಲಿದೆ ಎಂದು ವರದಿ ಆಗಿದೆ. ಈ ಫೋನಿನ ಬೆಲೆ ಹಾಗೂ ಕೆಲ ಫೀಚರ್ಸ್ ಕೂಡ ಸೋರಿಕೆ ಆಗಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು, ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಎಲ್ಲವೂ ಅತ್ಯುತ್ತಮವಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A25 ಬೆಲೆ ಮತ್ತು ಲಭ್ಯತೆ
ಡಿಜಿಟೆಕ್‌ನಲ್ಲಿನ ವರದಿಯ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ A25 ಸ್ಮಾರ್ಟ್ಫೋಫೋನ್ ಮೂರು ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದು ಕಪ್ಪು, ನೀಲಿ ಮತ್ತು ಹಳದಿ ಬಣ್ಣದ್ದಾಗಿದೆ. ಪಟ್ಟಿ ಮಾಡಲಾದ ಪ್ರಕಾರ ಇದರ ಬೆಲೆ 279 ಸ್ವಿಸ್ ಫ್ರಾಂಕ್ (CHF) ಆಗಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 26,315 ರೂ. ಇರಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ A25 ಸೋರಿಕೆಯಾದ ಫೀಚರ್ಸ್:
ಡಿಸ್ ಪ್ಲೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಸೂಪರ್ AMOLED ಡಿಸ್ ಪ್ಲೇಯನ್ನು ಹೊಂದಿರಬಹುದು.
ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾ 50MP+8MP+2MP ಟ್ರಿಪಲ್ ಸೆಟಪ್ ಅನ್ನು ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13MP ಕ್ಯಾಮೆರಾ ಇರಬಹುದು.
ಪ್ರೊಸೆಸರ್: ಗ್ಯಾಲಕ್ಸಿ A25 5G ಫೋನ್ ಎಕ್ಸಿನೊಸ್ 1280 5G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.
ಮೆಮೊರಿ: 6GB RAM+ 128GB ಮತ್ತು 8GB RAM+ 256GB ಸಂಯೋಜನೆಗಳಲ್ಲಿ ಈ ಫೋನ್ ಅನ್ನು ಖರೀದಿಸಬಹುದು. ಮೈಕ್ರೊ SD ಕಾರ್ಡ್ ಬಳಸಿ 1TB ವರೆಗೆ ಶೇಖರಣಾ ವಿಸ್ತರಣೆ ಮಾಡಬಹುದು.
ಸಾಫ್ಟ್‌ವೇರ್: ಈ ಫೋನಿನ ಬಾಕ್ಸ್‌ನ ಹೊರಗೆ ಸ್ಯಾಮ್‌ಸಂಗ್ One UI 6 ಜೊತೆಗೆ ಆಂಡ್ರಾಯ್ಡ್ 14 ಅನ್ನು ನೀಡಬಹುದು.
ಬ್ಯಾಟರಿ: ಗ್ಯಾಲಕ್ಸಿ A25 5G ಫೋನ್ 5,000mAh ಬ್ಯಾಟರಿ ಹೊಂದಿದೆ. ಇದು ಎಷ್ಟು ವೋಲ್ಟ್ ಫಾಸ್ಟ್ ಚಾರ್ಜರ್ ಬೆಂಬಲ ಪಡೆದುಕೊಂಡಿದೆ ಎಂಬುದು ಬಹಿರಂಗವಾಗಿಲ್ಲ.
ಇತರ ವೈಶಿಷ್ಟ್ಯಗಳು: ಡ್ಯುಯಲ್ ಸಿಮ್ ಬೆಂಬಲ, USB-C, ಸ್ಯಾಮ್‌ಸಂಗ್ ಪೇ, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಇದೆ.
200MP ಕ್ಯಾಮೆರಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ ಯಾವಾಗ ಬಿಡುಗಡೆ?
ಸ್ಯಾಮ್‌ಸಂಗ್ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ತನ್ನ ಎಸ್ ಸರಣಿಯ ಫೋನುಗಳನ್ನು ದೊಡ್ಡ ಮಟ್ಟದಲ್ಲಿ ಅನಾವರಣ ಮಾಡುತ್ತದೆ. ಸ್ಯಾಮ್‌ಸಂಗ್ ಈ ವರ್ಷದ ಆರಂಭದಲ್ಲಿ ಗ್ಯಾಲಕ್ಸಿ S23 ಸರಣಿಯನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಈಗಲೂ ಟ್ರೆಂಡಿಂಗ್ನಲ್ಲಿದೆ.
ತನ್ನ ಎಸ್ ಸರಣಿಯ ಅಡಿಯಲ್ಲಿ ವರ್ಷಕ್ಕೊಂದು ಫೋನ್ ಬಿಡುಗಡೆ ಮಾಡುವ ಸ್ಯಾಮ್‌ಸಂಗ್ ಮುಂದಿನ ವರ್ಷದ ಫೆಬ್ರವರಿಯಲ್ಲಿ S24 ಸರಣಿಯನ್ನು ರಿಲೀಸ್ ಮಾಡಲಿದೆ. ಈ ಫೋನ್ನಲ್ಲಿ ವಿಶೇಷವಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆ ಆದ ಟಾಪ್-ಎಂಡ್ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್ಫೋನ್ನ ಕ್ಯಾಮೆರಾ ಕೂಡ ಅದ್ಭುತವಾಗಿತ್ತು. ಇದು 200-ಮೆಗಾಪಿಕ್ಸೆಲ್ನ ಸ್ಯಾಮ್‌ಸಂಗ್ ISOCELL HP2 ಸೆನ್ಸಾರ್ ಹೊಂದಿತ್ತು. ಇದು ಹಿಂದಿನ ಗ್ಯಾಲಕ್ಸಿ S22 ಅಲ್ಟ್ರಾದಲ್ಲಿನ 108-ಮೆಗಾಪಿಕ್ಸೆಲ್ ಸಂವೇದಕದ ಅಪ್‌ಗ್ರೇಡ್ ಆಗಿದೆ.
ಮುಂದಿನ ವರ್ಷದ ಗ್ಯಾಲಕ್ಸಿ S24 ಅಲ್ಟ್ರಾ ಮತ್ತಷ್ಟು ಕ್ಯಾಮೆರಾ ಸುಧಾರಣೆಯೊಂದಿಗೆ ಬಿಡುಗಡೆ ಆಗಲಿದೆಯಂತೆ. ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ ಹೊಸದಾದ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಟಿಪ್‌ಸ್ಟರ್ ಐಸ್ ಯೂನಿವರ್ಸ್ (@UniverseIce) X (ಈ ಹಿಂದೆ Twitter) ನಲ್ಲಿ ಗ್ಯಾಲಕ್ಸಿ S24 ಅಲ್ಟ್ರಾದ ಕ್ಯಾಮೆರಾ ಫೀಚರ್ಸ್ ಅನ್ನು ಬಹಿರಂಗ ಪಡಿಸಿದ್ದಾರೆ.
ಟಿಪ್‌ಸ್ಟರ್ ಪ್ರಕಾರ, ಸ್ಯಾಮ್‌ಸಂಗ್‌ನ 2024 ಫ್ಲ್ಯಾಗ್‌ಶಿಪ್ ಸ್ಮಾರ್ಟ್ಫೋನ್ 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL HP2SX ಸಂವೇದಕವನ್ನು ಹೊಂದಿರುತ್ತದೆ. ಈ ಇಮೇಜ್ ಸಂವೇದಕವು ಗ್ಯಾಲಕ್ಸಿ S23 ಅಲ್ಟ್ರಾದ ISOCELL HP2 ಸಂವೇದಕದ ಆಪ್ಟಿಮೈಸ್ಡ್ ಆವೃತ್ತಿಯಾಗಿದೆ. ಇದು 1/1.3 ಆಪ್ಟಿಕಲ್ ಫಾರ್ಮ್ಯಾಟ್‌ನಲ್ಲಿ 200 ಮಿಲಿಯನ್ ಪಿಕ್ಸೆಲ್‌ಗಳನ್ನು ಒಳಗೊಂಡಿರುತ್ತದಂತೆ. ಮತ್ತು 0.6-ಮೈಕ್ರಾನ್ ಪಿಕ್ಸೆಲ್‌ಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
200-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ, ಗ್ಯಾಲಕ್ಸಿ S24 ಅಲ್ಟ್ರಾ ಫೋನಿನಲ್ಲಿ ಹೊಸ ಟೆಲಿಫೋಟೋ ಲೆನ್ಸ್ ಕೂಡ ನೀಡಲಾಗುತ್ತದೆ. 3x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಪ್ಯಾಕ್ ಮಾಡಲಿದೆ. ಸ್ನಾಪ್ಡ್ರಾಗನ್ 8 Gen 3 ಪ್ರೊಸೆಸರ್ ಇರುವ ಸಾಧ್ಯತೆ ಇದೆ. ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ನಲ್ಲಿ ಎಕ್ಸಿನೊಸ್ 2400 SoC ಯೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯಲ್ಲಿ ಟೈಟಾನಿಯಂ ಫ್ರೇಮ್‌ಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಇದು ಅಲ್ಯೂಮಿನಿಯಂ ಚಾಸಿಸ್ ಅನ್ನು ಹೊಂದಿವೆ. ಇದಲ್ಲದೆ, ಗ್ಯಾಲಕ್ಸಿ S24 ಆಲ್ಟ್ರಾ ದೀರ್ಘ ಸಮಯ ಬಾಳಕೆ ಬರುವ ಬಲಿಷ್ಠ ಬ್ಯಾಟರಿ ಅವಧಿಯನ್ನು ನೀಡಲು ಹೊಸ EV ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ ಎಂಬ ಮಾಹಿತಿ ಕೂಡ ಸೋರಿಕೆ ಆಗಿದೆ.