ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ Samantha- Vijay Deverakonda ಅವರ ರೋಮ್ಯಾಂಟಿಕ್ ನೃತ್ಯ !

Samantha- Vijay Deverakonda : ಖ್ಯಾತ ನಟರಾದ Samantha- Vijay Deverakonda ಕುಶಿ ಚಿತ್ರದಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಬಹು ನಿರೀಕ್ಷಿತ ಶಿವ ನಿರ್ವಾಣ ನಿರ್ದೇಶನದ, ಒಂದು ರೊಮ್ಯಾಂಟಿಕ್ ಕಾಮಿಡಿ ಎಂದು ಬಿಂಬಿಸಲಾಗಿದೆ, ಈ ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳನ್ನು ಪ್ರವೇಶಿಸಲಿದೆ. ಅದರ ಭಾವಪೂರ್ಣ ಪ್ಲೇಪಟ್ಟಿಯೊಂದಿಗೆ, ಕುಶಿ ಈಗಾಗಲೇ ಸಿನಿಮಾ ಅಭಿಮಾನಿಗಳು ಮತ್ತು ಸಂಗೀತ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ಹೈದರಾಬಾದ್‌ನಲ್ಲಿ ನಡೆದ ಬೃಹತ್ ಸಂಗೀತ ಕಚೇರಿಯಲ್ಲಿ ಚಿತ್ರದ ಆಡಿಯೊವನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಯಿತು.
ಕಳೆದ ಕೆಲವು ವರ್ಷಗಳಿಂದ ವಿಜಯ್- ರಶ್ಮಿಕಾ ಲವ್ವಿ ಡವ್ವಿ ಸ್ಟೋರಿ ನಡೆಯುತ್ತಿತ್ತು. ಈಗ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಸಮಂತಾ ನನ್ನ ಕ್ರಶ್, ನನ್ನ ನೆಚ್ಚಿನ ನಟಿ ಎಂದು ‘ಖುಷಿ’ (Kushi) ಸಿನಿಮಾ ಟ್ರೈಲರ್ ಇವೆಂಟ್‌ನಲ್ಲಿ ವಿಜಯ್ ವರಸೆ ಬದಲಿಸಿದ್ದರು. ಈಗ ಅದು ನಿಜ ಎಂಬುದನ್ನ ಹೈದರಾಬಾದ್‌ನಲ್ಲಿ ನಡೆದ ಖುಷಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರೂವ್ ಮಾಡಿದ್ದಾರೆ. ವೇದಿಕೆಯಲ್ಲಿ ಸಮಂತಾರನ್ನು ವಿಜಯ್ ಮುದ್ದಾಡಿದ್ದಾರೆ.
ಟಾಲಿವುಡ್ ನಟಿ ಸಮಂತಾ (Samantha) ಜೊತೆ ವಿಜಯ್ ದೇವರಕೊಂಡ (Vijay Devarakonda) ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಸಮಂತಾ ನನ್ನ ಕ್ರಶ್ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ವಿಜಯ್, ಈಗ ನೆಚ್ಚಿನ ನಟಿ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಲವ್- ರೊಮ್ಯಾನ್ಸ್ ನೋಡಿ ರಶ್ಮಿಕಾ(Rashmika Mandanna) ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.
ವೇದಿಕೆಯಲ್ಲಿ ನೃತ್ಯಕ್ಕೂ ಮುನ್ನ ವಿಜಯ್ ದೇವರಕೊಂಡ ಅವರು ತಮ್ಮ ಶರ್ಟ್ ಅನ್ನು ತೆಗೆದು ಕೇವಲ ಬನಿಯನ್‌ನಲ್ಲಿ ಮಿಂಚಿದರು. ಹೀಗಾಗುತ್ತಿದ್ದಂತೆಯೇ ಶಿಳ್ಳೆಗಳ ಸುರಿಮಳೆಯಾಗಿದೆ. ನಂತರ ವಿಜಯ್ ಅವರು, ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್ ಮುಂದುವರೆಯಿತು. ಕೆಲವರು ವಿಜಯ್ ಅವರ ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದರೆ, ಸಮಂತಾ ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ಪರಿಗೆ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಇಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸದ್ದು ಮಾಡುತ್ತಿದೆ.
ಆರೋಗ್ಯ (Health) ವಿಚಾರವಾಗಿ ಸಮಂತಾ ಸಿನಿಮಾಗಳಿಂದ ದೂರವಿದ್ರು. ಆದರೆ ವಿಜಯ್ ಒಬ್ಬರೇ ಖುಷಿ ಸಿನಿಮಾಗೆ ಪ್ರಚಾರ ಮಾಡ್ತಿರೋದು ನೋಡಿ ಸ್ಯಾಮ್ ಕೂಡ ಸಾಥ್ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಬರೋಬ್ಬರಿ ಮೂರು ಬಗೆಯ ಡ್ರೆಸ್ ಚೇಂಜ್ ಮಾಡಿ ಮಿಂಚಿದ್ದಾರೆ. ಸಮಂತಾ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಜೊತೆಗಿನ ವಿಜಯ್ ಸಲುಗೆ ನೋಡಿ, ರಶ್ಮಿಕಾ ಕಥೆ ಮುಂದೇನು ಅಂತಾ ಫ್ಯಾನ್ಸ್ ತಲೆಬಿಸಿ ಮಾಡಿಕೊಂಡಿದ್ದಾರೆ.