ಮಂಗಳವಾರ, ಡಿಸೆಂಬರ್ 5, 2023
ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!-ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೌಂಡರಿ ಲೈನ್ ಬಳಿ ಕ್ಯಾಮರ ತಳ್ಳಿ ವಿವಾದಕ್ಕೆ ಸಿಲುಕಿದ ಸ್ಯಾಮ್ ಕರ್ರನ್; ವಿಡಿಯೋ ವೈರಲ್!

Twitter
Facebook
LinkedIn
WhatsApp
ಬೌಂಡರಿ ಲೈನ್ ಬಳಿ ಕ್ಯಾಮರ ತಳ್ಳಿ ವಿವಾದಕ್ಕೆ ಸಿಲುಕಿದ ಸ್ಯಾಮ್ ಕರ್ರನ್; ವಿಡಿಯೋ ವೈರಲ್!

ಹೊಸದಿಲ್ಲಿ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರನ್ ಅನಗತ್ಯ ವಿವಾದದ ಮಾಡಿಕೊಂಡಿದ್ದಾರೆ. ಬೌಂಡರಿ ಲೈನ್ ಬಳಿ ಕ್ಯಾಮರ ತಳ್ಳಿ ವಿವಾದಕ್ಕೆ ಸಿಲುಕಿದ್ದಾರೆ.

ಅಫ್ಘಾನಿಸ್ತಾನದ ರಹಮತುಲ್ಲಾ ಗುರ್ಬಾಜ್ ಅವರು ಆರಂಭದಲ್ಲಿ ಹೊಡಿಬಡಿ ಹೊಡೆತಗಳ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದರು. ದುಬಾರಿ ಓವರ್ ಎಸೆದು ಬಂದ ಕರ್ರನ್ ತನ್ನ ಕೋಪವನ್ನು ಕ್ಯಾಮರಾ ಮೇಲೆ ತೋರಿದರು.

ಕಾಮೆಂಟರಿಯಲ್ಲಿ ಕರ್ರನ್ ಅವರ ಈ ನಡೆಯ ಬಗ್ಗೆ ಉಲ್ಲೇಖಿಸದಿದ್ದರೂ ಅಭಿಮಾನಿಗಳು ಈ ಘಟನೆಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಆಲ್ ರೌಂಡರ್ ನ ನಡೆ ಸರಿಯಲ್ಲ ಎನ್ನುವ ಚರ್ಚೆಗಳು ನಡೆಯುತ್ತಿದೆ.

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 284 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ರೆಹಮತುಲ್ಲಾ ಗುರ್ಬಾಜ್ ಕೇವಲ 57 ಎಸೆತಗಳಲ್ಲಿ 80 ರನ್ ಗಳಿಸಿದರೆ, ಇಕ್ರಾಮ್ ಅಲಿಖಿಲ್ 58 ರನ್, ಮುಜೀಬ್ ಉರ್ ರೆಹಮನ್ 28 ರನ್ ಮತ್ತು ರಶೀದ್ ಖಾನ್ 23 ರನ್ ಮಾಡಿದರು.

ಇಂಗ್ಲೆಂಡ್ ಪರ ಆದಿಲ್ ರಶೀದ್ ಮೂರು ವಿಕೆಟ್ ಕಿತ್ತರೆ, ಮಾರ್ಕ್ ವುಡ್ ಎರಡು ವಿಕೆಟ್ ಪಡೆದರು. ನಾಲ್ಕು ಓವರ್ ನಲ್ಲಿ 46 ರನ್ ನೀಡಿದ ಸ್ಯಾಮ್ ಕರ್ರನ್ ದುಬಾರಿಯಾದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ