ಬುಧವಾರ, ಫೆಬ್ರವರಿ 28, 2024
ಹಿಮಾಚಲ ಕಾಂಗ್ರೆಸ್ ಸರ್ಕಾರವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಡಿ.ಕೆ. ಶಿವಕುಮಾರ್‌ ಎಂಟ್ರಿ.!-ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಗೆ ಸಿಬಿಐ ಸಮನ್ಸ್.!-ರಾಜೀನಾಮೆ ಸುಳ್ಳು ಸುದ್ದಿ ; ನಾನಿನ್ನೂ ರಾಜೀನಾಮೆ ನೀಡಿಲ್ಲ,5 ವರ್ಷ ನಮ್ಮದೇ ಸರ್ಕಾರ: ಹಿಮಾಚಲ ಸಿಎಂ-ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾರನ್ನು ಬಂಧಿಸುವಂತೆ ಕೋರ್ಟ್ ಆದೇಶ.!-ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಗೆ ಸರ್ಕಾರ ಆದೇಶ; ಹೇಗಿದೆ ಪರಿಷ್ಕೃತ ದರ?-ಮಂಗಳೂರು : ಖಾಸಗಿ ಬಸ್ ಸಾರಿಗೆ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು.!-RCB ತಂಡದ ಸ್ಟಾರ್ ಆಟಗಾರ್ತಿ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಗೆ ಅಭಿಮಾನಿಯಿಂದ ಮದುವೆ ಪ್ರಸ್ತಾಪ..!-Accident: ಟ್ರಕ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸಾವು!-ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ಸಾವು..!-ಮಂಗಳೂರು: ಪಾಕಿಸ್ತಾನ ಪರ ಘೋಷಣೆ ; ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪುದುಚೇರಿಯಲ್ಲಿ ಬಾಂಬೆ ಮಿಠಾಯಿ ಮಾರಾಟ ನಿಷೇಧ...!

Twitter
Facebook
LinkedIn
WhatsApp
ಪುದುಚೇರಿಯಲ್ಲಿ ಬಾಂಬೆ ಮಿಠಾಯಿ ಮಾರಾಟ ನಿಷೇಧ...!

ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ನೆಚ್ಚಿನ ತಿನಿಸಾಗಿದ್ದ ಬಾಂಬೆ ಮಿಠಾಯಿ(ಕಾಟನ್ ಕ್ಯಾಂಡಿ)ಯನ್ನು ಪುದುಚೇರಿಯಲ್ಲಿ ನಿಷೇಧಿಸಲಾಗಿದೆ. ಅದರಲ್ಲಿ ಆರೋಗ್ಯಕ್ಕೆ ಹಾನಿಕರ­ವಾದ ರೊಡಮೈನ್‌-ಬಿ ಎಂಬ ವಿಷಕಾರಿ ಅಂಶ ಪತ್ತೆಯಾಗಿ­ರುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ವರದಿ ನೀಡಿದ್ದಾರೆ. ಹಾಗಾಗಿ ಪುದುಚೇರಿಯಾದ್ಯಂತ ಇನ್ನು ಬಾಂಬೆ ಮಿಠಾಯಿ ಮಾರಾಟ ನಿಷೇಧಿಸಿರುವುದಾಗಿ ಲೆಫ್ಟಿನೆಂಟ್‌ ಗವರ್ನರ್‌ ತಮಿಳ್‌ಸಾಯಿ ಸುಂದರರಾಜನ್‌ ಹೇಳಿದ್ದಾರೆ.

ಆದರೆ, ಆಹಾರ ಸುರಕ್ಷತಾ ಇಲಾಖೆಯಿಂದ ಗುಣಮಟ್ಟದ ಪ್ರಮಾಣ ಪತ್ರ ಪಡೆದ ಮಾರಾಟಗಾರರು ಕಾಟನ್ ಕ್ಯಾಂಡಿ ಮಾರಾಟ ಮುಂದುವರಿಸಬಹುದು. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಮಾರಾಟವಾಗುತ್ತಿದ್ದ ಕಾಟನ್ ಕ್ಯಾಂಡಿಯಲ್ಲಿ ‘ರೋಡಮೈನ್-ಬಿ’ ಎಂಬ ಹಾನಿಕಾರಕ ರಾಸಾಯನಿಕ ಅಂಶವನ್ನು ಪರೀಕ್ಷಿಸಿದಾಗ ಕಂಡುಬಂದಿದೆ. ಇದರ ಬೆನ್ನಲ್ಲೇ ಕಾಟನ್ ಕ್ಯಾಂಡಿ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಆಹಾರ ಸುರಕ್ಷತಾ ಪ್ರಮಾಣ ಪತ್ರ ಎಷ್ಟು ಬೇಗ ಸಿಗುತ್ತದೋ ಅಷ್ಟು ಬೇಗ ವ್ಯಾಪಾರ ಆರಂಭಿಸಬಹುದು. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬಣ್ಣದ ಸೇರ್ಪಡೆಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಾರದು ಎಂದು ಜನರು ತಿಳಿದಿರಬೇಕು ಎಂದರು. ರೋಡಮೈನ್ ಬಿ, ಸಾಮಾನ್ಯವಾಗಿ RhB ಎಂದು ಸಂಕ್ಷೇಪಿಸಲಾಗಿದೆ, ಇದು ರಾಸಾಯನಿಕ ಸಂಯುಕ್ತವಾಗಿದ್ದು ಅದು ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ.

ರೋಡಮೈನ್ ಬಿ ಮಾನವರಿಗೆ ವಿಷಕಾರಿಯಾಗಿದೆ ಮತ್ತು ಸೇವಿಸಿದರೆ ಜೀವಕೋಶಗಳು ಮತ್ತು ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಬಹುದು. ಆಹಾರದೊಂದಿಗೆ ಬೆರೆಸಿದಾಗ ಇದು ವಿಶೇಷವಾಗಿ ಅಪಾಯಕಾರಿಯಾಗಿದೆ, ಕಾಲಾನಂತರದಲ್ಲಿ ಯಕೃತ್ತು ಹಾನಿ, ಗೆಡ್ಡೆಗಳು ಮತ್ತು ಕ್ಯಾನ್ಸರ್ಗೆ ಕಾರಣವಾಗುತ್ತದೆ.

ಸುಮಾರು ಒಂದೆರಡು ದಶಕಗಳ ಹಿಂದೆ ಎಲ್ಲಾ ಊರುಗಳಲ್ಲಿ ಕಾಟನ್ ಕ್ಯಾಂಡಿ ತುಂಬಾ ಪ್ರಸಿದ್ಧಿ ಪಡೆದಿತ್ತು, ಜತೆಗೆ ಅದರ ಬೆಲೆಯೂ ಕಡಿಮೆ ಇತ್ತು ಜತೆಗೆ ರುಚಿಯೂ ಇದ್ದ ಕಾರಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತಿನ್ನುತ್ತಿದ್ದರು. ಸೈಕಲ್ ಏರಿ ಊರೂರು ಸುತ್ತಿ ಕಾಟನ್ ಕ್ಯಾಂಡಿ ಮಾರಾಟ ಮಾಡಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದವು.

ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ದೇಶೀಯ ಹಾಗೂ ವಿದೇಶಿ ಕಂಪನಿಗಳು ಅನೇಕ ಬಗೆಯ ಸಿಹಿ ತಿನಿಸುಗಳನ್ನು ಮಾರಾಟ ಮಾಡುತ್ತಿವೆ. ಇದರ ನಡುವೆ ಕಾಟನ್ ಕ್ಯಾಂಡಿ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಮಿಠಾಯಿ ಬಾಯಲ್ಲಿ ಇಟ್ಟಾಕ್ಷಣ ಕರಗಿ ನಾಲಿಗೆಗೆ ಮೆತ್ತಿಕೊಂಡು ರುಚಿ ಕೊಡುತ್ತಿತ್ತು.

ಹಲ್ಲಿನ ಬಣ್ಣವು ಗುಲಾಬಿ ಬಣ್ಣಕ್ಕೆ ತಿರುಗಿದ್ರೂ ಬಾಂಬೆ ಮಿಠಾಯಿ ತಿನ್ನುವುದು ಮಾತ್ರ ಮಕ್ಕಳು ಬಿಡುತ್ತಿರಲಿಲ್ಲ. ಇದೀಗ ಈ ಮಿಠಾಯಿಯನ್ನು ಮಕ್ಕಳಿಗೆ ಕೊಡಬೇಕೋ ಬೇಡವೋ ಎನ್ನುವ ಆತಂಕ ಶುರುವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Vicky and team's reels

Video: ವಿರುಷ್ಕಾ ದಂಪತಿಯ ಮಗುವಿನ ಅಕಾಯ್​ ಹೆಸರಿನ ಬಗ್ಗೆ ವಿಕ್ಕಿ ಆ್ಯಂಡ್​ ಟೀಮ್​ನ Reels Viral!

Video: ವಿರುಷ್ಕಾ ದಂಪತಿಯ ಮಗುವಿನ ಅಕಾಯ್​ ಹೆಸರಿನ ಬಗ್ಗೆ ವಿಕ್ಕಿ ಆ್ಯಂಡ್​ ಟೀಮ್​ನ ರೀಲ್ಸ್ ವೈರಲ್! Twitter Facebook LinkedIn WhatsApp ನಾನು ನಂದಿನಿ ಖ್ಯಾತಿಯ ವಿಕ್ಕಿ ಆ್ಯಂಡ್​ ಟೀಮ್​! ಇದಾಗಲೇ ಹಲವಾರು ರೀಲ್ಸ್​ಗಳನ್ನು