ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಇ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ತಮ್ಮ ಚೊಚ್ಚಲ ಶತಕ ಸಿಡಿಸಿದರು. ಕೇವಲ 51 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 103 ರನ್ ಗಳಿಸಿ ಔಟಾದರು. ಈ ಶತಕದೊಂದಿಗೆ ಸಚಿನ್ ತೆಂಡೂಲ್ಕರ್ ಮತ್ತು ಋತುರಾಜ್ ಗಾಯಕ್ವಾಡ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದಾರೆ.
ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!
Twitter
Facebook
LinkedIn
WhatsApp
ಸಾಯಿ ಸುದರ್ಶನ್ ಐಪಿಎಲ್ನಲ್ಲಿ 1000 ರನ್ಗಳ ಮೈಲಿಗಲ್ಲನ್ನು ತಲುಪಿದ್ದಾರೆ. 25 ಇನ್ನಿಂಗ್ಸ್ ಗಳಲ್ಲಿ 1034 ರನ್ ಗಳಿಸಿ ವಿನೂತನ ರೆಕಾರ್ಡ್ ಸೃಷ್ಟಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು ಆರು ಅರ್ಧಶತಕಗಳು ಸೇರಿವೆ. ಐಪಿಎಲ್ನಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಸಚಿನ್ ತೆಂಡೂಲ್ಕರ್ ಮತ್ತು ಋತುರಾಜ್ ಗಾಯಕ್ವಾಡ್ ಇಬ್ಬರೂ 31 ಇನ್ನಿಂಗ್ಸ್ ಗಳಲ್ಲಿ 1000 ರನ್ ಗಳಿಸಿ ಜಂಟಿ ದಾಖಲೆ ಹೊಂದಿದ್ದರು. ಸಾಯಿ ಸುದರ್ಶನ್ ಕೇವಲ 25 ಇನ್ನಿಂಗ್ಸ್ಗಳಲ್ಲಿ ಈ ದಾಖಲೆಯನ್ನು ತಲುಪಿದ್ದಾರೆ. ತಿಲಕ್ ವರ್ಮಾ 34 ಇನ್ನಿಂಗ್ಸ್ ಗಳಲ್ಲಿ 1000 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.
ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದಲ್ಲಿ ವೇಗವಾಗಿ 1000 ರನ್ ಗಳಿಸಿದ 3ನೇ ಆಟಗಾರ. ಲೆಂಡ್ಲ್ ಸಿಮನ್ಸ್ 23 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರೆ, ಶಾನ್ ಮಾರ್ಷ್ 21 ಇನ್ನಿಂಗ್ಸ್ಗಳಲ್ಲಿ 1000 ರನ್ ಗಳಿಸಿದ್ದಾರೆ. ಹೇಡನ್ ಮತ್ತು ಸುದರ್ಶನ್ ಇಬ್ಬರೂ 25 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ ಕೇವಲ 50 ಎಸೆತಗಳಲ್ಲಿ ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರೈಸಿದರು. ನಾಯಕ ಗಿಲ್ ಕೂಡ ಶತಕ ಬಾರಿಸಿದರು, ಇವರಿಬ್ಬರು ಮೊದಲ ವಿಕೆಟ್ಗೆ 210 ರನ್ಗಳ ದಾಖಲೆಯ ಆರಂಭಿಕ ಜೊತೆಯಾಟವನ್ನು ನೀಡಿದರು