ಕಾಲು ಜಾರಿ ಬಿದ್ದ ಸಾಲುಮರದ ತಿಮ್ಮಕ್ಕ (Saalumarada Thimmakka): ಆಸ್ಪತ್ರೆಗೆ ದಾಖಲು

Saalumarada Thimmakka: ಸಾಲು ಮರದ ತಿಮ್ಮಕ್ಕ ಇಂದು ಸಂಜೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿದೆ. ಹಾಗಾಗಿ ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು, ಆಗಸ್ಟ್ 06: ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇಂದು ಸಂಜೆ ಮಂಜುನಾಥನಗರದಲ್ಲಿರುವ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿದೆ. ಹಾಗಾಗಿ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಹೊಳಲ್ಕೆರೆ ಬಿಜೆಪಿ ಶಾಸಕನಿಂದ – ಡೆತ್‌ನೋಟ್ ಬರೆದು ಗ್ರಾ.ಪಂ. ಕ್ಲರ್ಕ್ ಆತ್ಮಹತ್ಯೆ
ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ (Holalkere BJP MLA Chandrappa) ಹೆಸರನ್ನು ಬರೆದಿಟ್ಟು ಗ್ರಾಮ ಪಂಚಾಯತ್ ಕ್ಲರ್ಕ್ (Village Panchayat Clerk) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ (Chitradurga ) ಜಿಲ್ಲೆಯ ಹೊಸದುರ್ಗದ ಜಾನಕಲ್ ಬಳಿ ನಡೆದಿದೆ.
ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮಪಂಚಾಯತ್‌ನ ತಿಪ್ಪೇಸ್ವಾಮಿ ಆತ್ಮಹತ್ಯೆಗೆ (Suicide) ಶರಣಾದ ಕ್ಲರ್ಕ್. ಅಕ್ರಮ ಖಾತೆ ಮಾಡಿಕೊಡುವ ವಿಚಾರಕ್ಕೆ ಹೊಳಲ್ಕೆರೆ ಕ್ಷೇತ್ರದ ಶಾಸಕಎಂ. ಚಂದ್ರಪ್ಪ,ತಾಪಂ ಇಒ ರವಿ ಹಾಗೂ ಗ್ರಾಪಂ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಒತ್ತಡ ಹೇರಿದ್ದರು. ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದು ಅವರ ಕಿರುಕುಳ ತಾಳಲಾರದೇ ನಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮರಣ ಪತ್ರದಲ್ಲಿ ಮೃತ ತಿಪ್ಪೇಸ್ವಾಮಿ ಉಲ್ಲೇಖಿಸಿದ್ದಾರೆ.
ಶನಿವಾರ ಸಂಜೆ ಆತಹತ್ಯೆಗೆ ಶರಣಾಗಿರುವ ತಿಪ್ಪೇಸ್ವಾಮಿ ಚಿತ್ರದುರ್ಗ ತಾಲ್ಲೂಕಿನ ಸೊಂಡೆಕೊಳ ಮೂಲದವರಾಗಿದ್ದಾರೆ. ಅವರ ಸಂಬಂಧಿಕರಿದ್ದ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮಕ್ಕೆ ನಿನ್ನೆ ತೆರಳಿದ್ದರು. ಈ ವೇಳೆ ದೂರದ ಜಮೀನಿಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಗೆ ತಿಪ್ಪೇಸ್ವಾಮಿಯವರ ಪುತ್ರಿ ಆಶಾ ರಾಜಶೇಖರ್ ದೂರು ನೀಡಿದ್ದಾರೆ. ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾ.ಪಂ ಇಓ ರವಿ ಹೆಸರು ಉಲ್ಲೇಖವಿಲ್ಲ. ಗ್ರಾ.ಪಂ ಸದಸ್ಯರ ಕಿರುಕುಳ ಹಿನ್ನಲೆ ಆತ್ಮಹತ್ಯೆ ಎಂದು ಮಾತ್ರ ದೂರು ದಾಖಲಾಗಿದೆ.