ನನ್ನ ಇಡೀ ಜೀವನ ಹಾಳು ಮಾಡಿದ ; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹರಿಬಿಟ್ಟ ನಟಿ ವಿಜಯಲಕ್ಷ್ಮಿ ..!
ಫೆಬ್ರವರಿ 29ರಂದು ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಟೆರೆಸ್ನಲ್ಲಿ ಒಂದು ವಿಡಿಯೋ ಮಾಡಿದ್ದರು. ‘ದಯವಿಟ್ಟು ಸೀಮಾನ್ ನನ್ನ ಜೊತೆ ಮಾತನಾಡಬೇಕು’ ಎಂದು ಅವರ ಆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಸೀಮಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಈಗ ಮಾರ್ಚ್ 5ರಂದು ವಿಜಯಲಕ್ಷ್ಮಿ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.
ವಿಜಯಲಕ್ಷ್ಮಿ ಅವರು ಆ ವಿಡಿಯೋ ಹಂಚಿಕೊಂಡು 5 ದಿನ ಕಳೆದರೂ ಕೂಡ ಸೀಮಾನ್ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ‘ಈ ರೀತಿ ವಿಡಿಯೋ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನನಗೆ ಭಾವನಾತ್ಮಕವಾಗಿ ಎಷ್ಟು ನೋವಾಗಿರಬಹುದು ಅಂತ ನೀವೇ ಯೋಚಿಸಿ’ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ‘ಪರವಾಗಿಲ್ಲ, ಆಕೆ ಬಿದ್ದು ಸಾಯಲಿ ಎಂಬುದು ಜನರ ಪ್ರತಿಕ್ರಿಯೆ ಆಗಿದ್ದರೆ ಎಲ್ಲವನ್ನೂ ಹೇಳುತ್ತೇನೆ ಕೇಳಿ’ ಎಂದಿದ್ದಾರೆ ವಿಜಯಲಕ್ಷ್ಮಿ.
#WATCH | உண்மையிலேயே இதுதான் என்னோட கடைசி வீடியோ!
— Reflect News Tamil (@reflectnewstn) March 5, 2024
நடிகை விஜயலட்சுமி வெளியிட்ட தற்கொலை மிரட்டல் வீடியோ!
“என் மரணம் சீமான் யாருன்னு காமிக்கும்... எல்லாருக்கும் நன்றி!”#ActressVijayalaxmi | #Seeman | #vijayalaxmi | #விஜயலட்சுமி | #vijayalakshmi | #ntk | #NaamThamizharKatchi pic.twitter.com/oOLgbuImzi
‘ನನ್ನ ಸಹೋದರಿಯ ಸಮಸ್ಯೆಯಿಂದಾಗಿ ನಾನು ಮೊದಲ ಬಾರಿಗೆ ಸೀಮಾನ್ ಭೇಟಿ ಮಾಡಿದೆ. ಆಗ ಆತನಿಗೆ ಮದುವೆ ಆಗಿರಲಿಲ್ಲ. ನನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿ, ನನ್ನ ಜೊತೆ ಆತ ಮೂರು ವರ್ಷ ಇದ್ದ. ಯಾರಿಗೂ ಗೊತ್ತಾಗದಂತೆ ಆತ ನನ್ನ ಜೊತೆ ರಹಸ್ಯವಾಗಿ ಮದುವೆ ಆದ. ನನ್ನ ಇಡೀ ಬದುಕನ್ನು ಹಾಳು ಮಾಡಿದ. ಸಮಸ್ಯೆಗಳು ಎದುರಾದಾಗ ನನ್ನನ್ನು ಒಂಟಿ ಮಾಡಿದ’ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
‘ಇದು ನನ್ನ ಕೊನೆಯ ವಿಡಿಯೋ. ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ. ಇದಕ್ಕೆಲ್ಲ ಸೀಮಾನ್ ಕಾರಣ’ ಎಂದು ವಿಜಯಲಕ್ಷ್ಮಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ತಮಿಳಿನಲ್ಲಿ ಅವರು ಮಾತನಾಡಿರುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.