RPL 2024: ರಜಕ ಯೂತ್ ರಿ. ಮಂಗಳೂರು ಇವರ ವತಿಯಿಂದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಾಳೆ ನಡೆಯಲಿದೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ.!
ರಜಕ ಯೂತ್ ರಿಜಿಸ್ಟರ್ಡ್ ಮಂಗಳೂರು(Rajaka Youth (R.) Mangalore ) ಇವರ ವತಿಯಿಂದ ನಾಳೆ ಸೈಹಾದ್ರಿ ಕಾಲೇಜಿನ ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. 2013 ನವಂಬರ್ ತಿಂಗಳಲ್ಲಿ ಮಡಿವಾಳ ಸಮಾಜದ ಯುವಕರು ಒಗ್ಗಟ್ಟಾಗಿ ಈ ರಜಕ ಯೂತ್ ತಂಡವು ಸ್ಥಾಪನೆಗೊಂಡಿತು. ಈ ಸಂಸ್ಥೆಯ ಪ್ರಮುಖ ಉದ್ದೇಶ ಸಮುದಾಯದ ಅಶಕ್ತರಿಗೆ ನೆರವನ್ನು ನೀಡುವುದು. ಈ ತಂಡವು ಈವರೆಗೆ 10 ಲಕ್ಷಕ್ಕೂ ಅಧಿಕ ಆರ್ಥಿಕ ಸಹಾಯವನ್ನು ನೀಡಿ ಬಂದಿದೆ. ಪ್ರಮುಖವಾಗಿ ವಿದ್ಯಾರ್ಥಿ ವೇತನ, ವೈದ್ಯಕೀಯ ನರವು, ಸಮುದಾಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಮನೆ ದುರಸ್ತಿ, ಶೈಕ್ಷಣಿಕ ನೆರವು ಸೇರಿದಂತೆ ಹಲವು ಕುಟುಂಬಗಳಿಗೆ ಸಹಾಯ ಹಸ್ತಚಾಚಿದೆ.
ಅಷ್ಟೇ ಮಾತ್ರ ಅಲ್ಲದೆ ರಕ್ತದಾನ ಶಿಬಿರ, ಕಣ್ಣು ತಪಾಸಣಾ ಶಿಬಿರ, ವಧು ವರರ ವೇದಿಕೆ, ಉದ್ಯೋಗ ಮಾಹಿತಿ, ಶೈಕ್ಷಣಿಕ ಮಾಹಿತಿ, ಕೌಶಲಾಭಿವೃದ್ಧಿ ತರಬೇತಿ ಕಾರ್ಯಗಾರ, ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಈ ತಂಡವು ನೀಡಿ ಬಂದಿದೆ.
ಈ ಬಾರಿಯ RPL -2024 ಕ್ರಿಕೆಟ್ ಪಂದ್ಯಾಟದ ಉದ್ದೇಶವು ಇದೇ, ಮಡಿವಾಳ ಸಮಾಜದ ಆರ್ಥಿಕವಾಗಿ ಹಿಂದುಳಿದ ಅಶಕ್ತ ಕುಟುಂಬಗಳಿಗೆ ನೆರವು ನೀಡಲು ಈ ಪಂದ್ಯಾಟವನ್ನು ಹಮ್ಮಿಕೊಂಡಿದ್ದು, ಎಲ್ಲರೂ ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಈ ತಂಡವು ಕರೆ ನೀಡಿದೆ.