ಶನಿವಾರ, ಜುಲೈ 20, 2024
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-ಬಂಟ್ವಾಳ: ಪುಂಜಾಲಕಟ್ಟೆ ಬಳಿ ಲಾರಿ ಪಲ್ಟಿ; ಓರ್ವ ಸಾವು, ಮೂವರು ಗಂಭೀರ.!-ಶಿರಾಡಿ ಘಾಟ್ ನಲ್ಲಿ ಓಮ್ನಿ ಕಾರಿನ ಮೇಲೆ ಮಣ್ಣು ಕುಸಿತ; ಅಪಾಯದಿಂದ ಪಾರಾದ ಪ್ರಯಾಣಿಕರು-Hardik Pandya - Natasa: ವಿಚ್ಛೇದನ ಪ್ರಕಟಿಸಿದ ಹಾರ್ದಿಕ್ ಪಾಂಡ್ಯ, ನತಾಶಾ-ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜು.19 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-World Record: ಟೆಸ್ಟ್ ಕ್ರಿಕೆಟಿನಲ್ಲಿ ಅತಿ ವೇಗದ 50 ರನ್; ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್-ದಿಬ್ರುಗಢ ಎಕ್ಸ್‌ಪ್ರೆಸ್ ಅಪಘಾತದ ಬಗ್ಗೆ ಪ್ರಧಾನ ಮಂತ್ರಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ-Aanvi Kamdar: ವಿಡಿಯೋ ಮಾಡುವ ವೇಳೆ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು-ದಕ್ಷಿಣ ಕನ್ನಡ ಜಿಲ್ಲೆಯ ಈ 5 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಜು.18 ರಂದು ರಜೆ ಘೋಷಣೆ-ನಕಲಿ ರಜೆ ಆದೇಶ: ಎಫ್.ಐ.ಆರ್ ದಾಖಲಿಸಲು ಡಿಸಿ‌ ಸೂಚನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Roopesh Shetty: ರೂಪೇಶ್ ಶೆಟ್ಟಿ ಸಿನಿಮಾ ‘ಮಂಕು ಭಾಯ್ ಫಾಕ್ಸಿ ರಾಣಿ’ ಜ.13ಕ್ಕೆ ರಿಲೀಸ್​; ಗಮನ ಸೆಳೆದ ಟ್ರೇಲರ್​

Twitter
Facebook
LinkedIn
WhatsApp
IMG 20230105 WA0014

‘ಬಿಗ್ ಬಾಸ್ ಸೀಸನ್ 9’ (BBK 9) ಶೋ ವಿನ್ನರ್ ರೂಪೇಶ್ ಶೆಟ್ಟಿ ಅವರು ಹೀರೋ ಆಗಿ ನಟಿಸಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ (Manku Bhai Foxy Rani) ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಈ ಸಿನಿಮಾ ಜನವರಿ 13ರಂದು ರಿಲೀಸ್​ ಆಗಲಿದೆ. ಗಗನ್ ಎಂ. ನಿರ್ದೇಶನ ಮಾಡಿದ್ದು ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್​, ಪಂಚಮಿ ರಾವ್ ಕೂಡ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘ಇದನ್ನು ಶಾರ್ಟ್ ಮೂವೀ ಮಾಡೋಣ ಅಂತ ಪ್ಲ್ಯಾನ್ ಮಾಡಿಕೊಂಡಿದ್ದೆ. ಆದರೆ ರೂಪೇಶ್ ಶೆಟ್ಟಿ (Roopesh Shetty) ನಟಿಸಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೊಂದುವಂತೆ ಸಿದ್ಧ ಮಾಡಿಕೊಂಡ್ವಿ. 2019ರಲ್ಲಿ ಆರಂಭವಾದ ಚಿತ್ರವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ’ ಎಂದಿದ್ದಾರೆ ನಿರ್ದೇಶಕರು.

ತುಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಕಿರುಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನು ಮಾಡಿ ಅನುಭವ ಹೊಂದಿರುವ ಗಗನ್​ ಅವರು ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ‘ಮಂಗಳೂರು ಕನ್ನಡ ಶೈಲಿಯಲ್ಲಿ ಡೈಲಾಗ್​ಗಳಿವೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆ ಇದರಲ್ಲಿ ಇದೆ’ ಎಂದು ಗಗನ್​ ಹೇಳಿದ್ದಾರೆ.

ಸಿನಿಮಾದ ಬಗ್ಗೆ ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ. ‘ಈ ಚಿತ್ರದಲ್ಲಿ ಕಥೆಯೇ ಹೀರೋ. ಒಂದು ಮುಗ್ಧ ಲವ್ ಸ್ಟೋರಿ ಇರುವ ಸಿನಿಮಾ ಇದು. ಚಿತ್ರಕ್ಕಾಗಿ 8 ಕೆಜಿ ದಪ್ಪ ಆಗಿದ್ದೆ. ಕನ್ನಡದಲ್ಲಿ ಹೀರೋ ಆಗಿ ನಟಿಸುತ್ತಿರುವ 5ನೇ ಸಿನಿಮಾವಿದು. ‘ಡೇಂಜರ್ ಝೋನ್’, ‘ಅನುಷ್ಕಾ’, ‘ನಿಶಬ್ಧ 2’, ‘ಗೋವಿಂದ ಗೋವಿಂದ’ ಸಿನಿಮಾ ಮಾಡಿದ್ದೇನೆ. ಆಗೆಲ್ಲ ಆ ಚಿತ್ರದಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ. ಆದ್ರೆ ಇದೇ ಮೊದಲ ಬಾರಿಗೆ ರೂಪೇಶ್ ಶೆಟ್ಟಿ ಸಿನಿಮಾ ಬರ್ತಿದೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ.

ಕ್ಲಾಸಿಕಲ್ ಡಾನ್ಸರ್ ಆದ ಪಂಚಮಿ ರಾವ್ ಅವರಿಗೆ ಇದು ಮೊದಲ ಸಿನಿಮಾ. ‘ನನಗೆ ಸಿನಿಮಾ ರಂಗದ ಮೇಲೆ ಮೊದಲಿನಿಂದ ಆಸಕ್ತಿ ಇತ್ತು. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಈ ಚಿತ್ರದ ಕಥೆ ತುಂಬಾ ವಿಶೇಷ ಎನಿಸಿತು. ಹಾಗಾಗಿ ಒಪ್ಪಿಕೊಂಡೆ’ ಎಂದಿದ್ದಾರೆ ಪಂಚಮಿ.

ನಟಿ ಗೀತಾ ಭಾರತಿ ಭಟ್ ಪಾಲಿಗೆ ಈ ಸಿನಿಮಾ ಸ್ಪೆಷಲ್ ಆಗಿದೆ. ‘ಹಲವು ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದೆ. ಆದರೆ ಲೀಡ್ ರೋಲ್​ನಲ್ಲಿ ನಟಿಸಿರೋದು ಇದೇ ಮೊದಲು. ಆರಂಭದಲ್ಲಿ ಮಂಗಳೂರು ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದ್ರೆ ಶೂಟಿಂಗ್ ಮುಗಿಯುವ ಹೊತ್ತಿಗೆ ಪೂರ್ತಿ ಮಂಗಳೂರು ಕನ್ನಡ ಕಲಿತೆ. ನನ್ನನ್ನು ನಾನು ತೆರೆ ಮೇಲೆ ನೋಡಿಕೊಂಡಾಗ ಆತ್ಮ ವಿಶ್ವಾಸ ಹೆಚ್ಚಿದೆ’ ಎಂದು ಗೀತಾ ಭಾರತಿ ಭಟ್​ ಹೇಳಿದ್ದಾರೆ.

ಪ್ರಕಾಶ್ ತುಮ್ಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಬ್ಯಾನರ್ ಮೂಲಕ ಜೋಶ್ವ ಜೈಶಾನ್ ಕ್ರಾಸ್ತಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿನ್ಯಾಸ್ ಮಧ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ. ಷಹಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಈ ಚಿತ್ರಕ್ಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ