ಶನಿವಾರ, ಡಿಸೆಂಬರ್ 21, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Rohith & Pandya: ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೊ ಮಾಡಿಕೊಂಡ ರೋಹಿತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯಾ.!

Twitter
Facebook
LinkedIn
WhatsApp
Rohith & Pandya: ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೊ ಮಾಡಿಕೊಂಡ ರೋಹಿತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯಾ.!

ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ (Rohit Sharma) ನಡುವೆ ಶೀತಲ ಸಮರ ಶುರುವಾಗಿದೆ ಎಂಬ ಸುದ್ದಿಯೊಂದು ಹರಡಿದೆ. ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾಂಡ್ಯ ಅವರ ಮರಳುವಿಕೆಯೊಂದಿಗೆ ಈ ಜಗಳ ಶುರುವಾಗಿದೆ ಎನ್ನಲಾಗಿದೆ. ತಂಡದ ನಾಯಕನಾಗಿ ರೋಹಿತ್ ಅವರ ಹತ್ತು ವರ್ಷಗಳ ಓಟವೂ ಕೊನೆಗೊಳ್ಳಲಿದೆ ಎಂಬುದೇ ಈ ಸಮರದ ಹಿನ್ನೆಲೆ. ಟೈಟನ್ಸ್ ತಂಡವನ್ನು ಸತತ ಎರಡು ಐಪಿಎಲ್ ಫೈನಲ್​ಗಳಿಗೆ ಮುನ್ನಡೆಸಿದ ಆಲ್ರೌಂಡರ್ ಪಾಂಡ್ಯ ಐದು ಬಾರಿಯ ಚಾಂಪಿಯನ್ಸ್. ಆದರೆ, ಅವರ ಮರಳುವಿಕೆ ರೋಹಿತ್​ಗೆ ಬೇಸರ ಮೂಡಿಸಿದೆ ಎನ್ನಲಾಗಿದೆ.

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಷರ್ ಇತ್ತೀಚೆಗೆ ನಾಯಕತ್ವ ಬದಲಾವಣೆಯ ಕಾರಣಗಳನ್ನು ವಿವರಿಸಿದ್ದರು. ಅದು ತೀವ್ರ ಟೀಕೆಗೆ ಗುರಿಯಾಯಿತು. ರೋಹಿತ್ ಅವರ ಪತ್ನಿ ರಿತಿಕಾ ಸಜ್ದೇಹ್ ಕೂಡ ಕೋಚ್ ಹೇಳಿಕೆಯನ್ನು ವಿರೋಧಿಸಿದ್ದರು. ಅವರ ಹೇಳಿಕೆಯಲ್ಲಿ ಅನೇಕ ತಪ್ಪುಗಳಿವೆ” ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ, ಇಬ್ಬರು ಕ್ರಿಕೆಟ್ ಆಟಗಾರರು ಇನ್​ಸ್ಟಾಗ್ರಾಮ್​ನಲ್ಲಿ ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನ ಅಭಿಪ್ರಾಯಗಳನ್ನು ನೀಡಿದ್ದರಿಂದ ವರದಿಗಳು ಅನಿಶ್ಚಿತವಾಗಿವೆ. ಕೆಲವು ‘ಎಕ್ಸ್’ ಬಳಕೆದಾರರು ಇಬ್ಬರೂ ಇನ್​ಸ್ಟಾಗ್ರಾಮ್​ನಲ್ಲಿ ಎಂದಿಗೂ ಒಬ್ಬರನ್ನೊಬ್ಬರು ಫಾಲೊ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಇತರರು ಹಾರ್ದಿಕ್ ಮೂರ್ಖತನ ಮಾಡಿದ್ದಾರೆ ಎಂದು ದೂರಿದ್ದಾರೆ.

 

ಮಾರ್ಕ್ ಬೌಷರ್ ಹೇಳಿಕೆಯೇನು?

ಕೋಚ್​ ಮಾರ್ಕ್ ಬೌಷರ್ ಪ್ರಕಾರ, ಮುಂಬೈ ಇಂಡಿಯನ್ಸ್ ನಾಯಕನಾಗಿ ಪಾಂಡ್ಯ ಅವರ ಆಯ್ಕೆಯು ಮ್ಯಾನೇಜ್ಮೆಂಟ್​ನ ಕಾರ್ಯತಂತ್ರದ ಕ್ರಮವಾಗಿದೆ. ಇದು ಕ್ರಿಕೆಟ್ ನಿರ್ಧಾರವಾಗಿದ್ದರೂ ರೋಹಿತ್ ಶರ್ಮಾ ಪಾತ್ರವನ್ನು ಕಳೆದುಕೊಂಡಾಗ ಜನರು ಅಸಮಾಧಾನಗೊಳ್ಳಬಾರದು ಎಂದು ಅವರು ಹೇಳಿದ್ದಾರೆ. ಅವರು ಬಗ್ಗೆ ಮಾತನಾಡುತ್ತಾ, ಅವರ ನಾಯಕತ್ವದ ಅವಧಿಯುದ್ದಕ್ಕೂ ಅವರ ನಾಯಕತ್ವವನ್ನು ಶ್ಲಾಘಿಸಿದ್ದರು.

“ಇದು ಸಂಪೂರ್ಣವಾಗಿ ಕ್ರಿಕೆಟ್ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಹಾರ್ದಿಕ್ ಅವರನ್ನು ಆಟಗಾರನಾಗಿ ಮರಳಿ ಪಡೆಯಲು ನಾವು ಸಾಕಷ್ಟು ಯೋಜನೆ ರೂಪಿಸಿದ್ದೇವೆ. ಇದು ಪರಿವರ್ತನೆಯ ಹಂತ. ಭಾರತದಲ್ಲಿ ಬಹಳಷ್ಟು ಜನರಿಗೆ ಅರ್ಥವಾಗುವುದಿಲ್ಲ, ಜನರು ಸಾಕಷ್ಟು ಭಾವುಕರಾಗುತ್ತಾರೆ. ನೀವು ಆ ಆಟಗಾರನ ಭಾವನೆಗಳನ್ನು ನಿರ್ಲಕ್ಷಿಸಬಾರು. ನಾಯಕತ್ವ ಬದಲಾವಣೆಯಿಂದ ರೋಹಿತ್ ಅವರಿಂದ ಅತ್ಯುತ್ತಮವಾದದ್ದನ್ನು ಹೊರಬರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಹೊರಗೆ ಹೋಗಿ ಆನಂದಿಸಲು ಮತ್ತು ಕೆಲವು ಉತ್ತಮ ರನ್​ಗಳನ್ನು ಬಾರಿಸಲು ಬಿಡಿ,” ಎಂದು ಬೌಚರ್ ಹೇಳಿದ್ದರು.

“ರೋ (ರೋಹಿತ್) ಅವರೊಂದಿಗೆ ನಾನು ತೆಗೆದುಕೊಂಡ ಒಂದು ವಿಷಯವೆಂದರೆ ಅವರು ಅದ್ಭುತ ವ್ಯಕ್ತಿ. ನನ್ನ ಪ್ರಕಾರ ಅವರು ಅನೇಕ ವರ್ಷಗಳಿಂದ ನಾಯಕರಾಗಿದ್ದಾರೆ. ಅವರು ಮುಂಬೈ ಇಂಡಿಯನ್ಸ್​ಗಾಗಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಅವರು ಭಾರತವನ್ನೂ ಮುನ್ನಡೆಸುತ್ತಿದ್ದಾರೆ. ಅವರು ಭಾರತ ಪರ ಬ್ಯಾಟಿಂಗ್​ನಲ್ಲಿ ಕೆಲವು ಉತ್ತಮ ಋತುಗಳನ್ನು ಹೊಂದಿಲ್ಲ. ಆದರೆ ಅವರು ನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ, “ಎಂದು ಅವರು ಹೇಳಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist