ರಸ್ತೆ ಸಮೀಪ ಹೆಲಿಕಾಪ್ಟರ್ ಪಾರ್ಕಿಂಗ್! ವಾಹನ ಸವಾರರ ಪರದಾಟ; ವಿಡಿಯೋ ವೈರಲ್
ಬೆಂಗಳೂರು: ಉದ್ಯಾನನಗರಿಯಲ್ಲಿ ಅತೀ ಹೆಚ್ಚು ಕಿರಿಕಿರಿ ಎನಿಸುವುದು ಟ್ರಾಫಿಕ್ ಸಮಸ್ಯೆ. ಇದು ಪ್ರತಿಯೊಬ್ಬರು ಎದುರಿಸುವ ಸಮಸ್ಯೆಯಾಗಿದೆ. ಒಂದು ವೇಳೆ ನೀವು ನಿಮ್ಮ ಕಾರು ಅಥವಾ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಗ್ನಲ್ ಬಳಿ ಹೆಲಿಕಾಪ್ಟರ್ ನಿಂತಿದ್ದರೆ ಹೇಗಾಗಬಹುದು? ಹೌದು ಅಂತಹ ಒಂದು ಘಟನೆ ಬೆಂಗಳೂರಿನ ಎಚ್ ಎಎಲ್ ಬಳಿ ನಡೆದಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ x ನಲ್ಲಿ ಶೇರ್ ಮಾಡಿರುವ ಬೆಂಗಳೂರು ಟ್ರಾಫಿಕ್ ನಲ್ಲಿ ಹೆಲಿಕಾಪ್ಟರ್ ನಿಂತಿರುವ ಫೋಟೋ ವೈರಲ್ ಆಗಿದೆ. ಎಚ್ ಎಎಲ್ ಬಳಿಯ ರಸ್ತೆಯಲ್ಲಿ ವಾಹನ ಸವಾರರು ತಮ್ಮ ಆಟೋ ಮತ್ತು ಬೈಕ್ ಗಳನ್ನು ನಿಲ್ಲಿಸಿ ಹೆಲಿಕಾಪ್ಟರ್ ಅನ್ನು ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುತ್ತಿರುವುದು ಚಿತ್ರದಲ್ಲಿದೆ.
ರಸ್ತೆಯಲ್ಲಿ ಹೆಲಿಕಾಪ್ಟರ್ ಅನ್ನು ಕೊಂಡೊಯ್ಯುತ್ತಿದ್ದ ಪರಿಣಾಮ ವಾಹನ ಸವಾರರ ಮೇಲೆ ಪರಿಣಾಮ ಬೀರಿದ್ದು, ಟ್ರಾಫಿಕ್ ಜಾಮ್ ಆಗುವಂತಾಗಿತ್ತು. ಕೆಲವು ಅಧಿಕಾರಿಗಳು ಹೆಲಿಕಾಪ್ಟರ್ ಅನ್ನು ಮುಂದಕ್ಕೆ ಒಯ್ಯಲು ಪ್ರಯತ್ನಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಯತ್ನಿಸಿರುವುದಾಗಿ ವರದಿ ತಿಳಿಸಿದೆ.
ಈ ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಳಕೆದಾರರು ಹಂಚಿಕೊಂಡು ತಮಾಷೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಾಹನ ದಟ್ಟಣೆ ನಿಗ್ರಹಕ್ಕೆ ಹೊಸ ಮಾರ್ಗ ಎಂಬ ಕ್ಯಾಪ್ಶನ್ ಅನ್ನು ಬಳಕೆದಾರರೊಬ್ಬರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಮನ್ ಸುರಾನ ಎಂಬವರು ರಸ್ತೆ ಮಧ್ಯೆ ಹೆಲಿಕಾಪ್ಟರ್ ಸಿಲುಕಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.
Silicon City ಜನರಿಗೆ ಮಾಲಿನ್ಯ ಕಂಟಕ! ಗಾಳಿ ಗುಣಮಟ್ಟ ಕುಸಿತದಿಂದ ಹೃದಯ ಸಂಬಂಧಿ ಕಾಯಿಲೆ
ಬೆಂಗಳೂರು: ಐಟಿ-ಬಿಟಿ ಹಬ್, ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಮಹಾನಗರ ಎಂಬ ಖ್ಯಾತಿ ಪಡೆದು, ಒಂದೂವರೆ ಕೋಟಿ ಜನರಿಗೆ ನೆಲೆ ಕೊಟ್ಟಿರುವ ರಾಜ್ಯ ರಾಜಧಾನಿಗೆ ಮಾಲಿನ್ಯದ ಕಂಟಕ ಎದುರಾಗಿದೆ. ಪರಿಣಾಮ ವಾಯು ಮಾಲಿನ್ಯದಿಂದ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ದುಸ್ಥಿತಿ ಬಂದೊದಗಿದೆ.
ಬೆಂಗಳೂರಿನಲ್ಲಿ ವರ್ಷ ದಿಂದ ವರ್ಷಕ್ಕೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚು ತ್ತಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿಯು ಹಲವು ಕ್ರಮ ಜಾರಿಗೊಳಿಸಿದರೂ ಶೇ.60ರಷ್ಟು ಮಾಲಿನ್ಯ ಪ್ರಮಾಣ ಏರಿಕೆಯಾಗಿದೆ.
2022 ಆಗಸ್ಟ್ ಮಾಸಕ್ಕೆ ಹೋಲಿ ಸಿದರೆ ಈ ವರ್ಷ ವಾಯು ಮಾಲಿ ನ್ಯವು ಇನ್ನಷ್ಟು ಹೆಚ್ಚಿದೆ. ಇದರಿಂದ ಬೆಂಗಳೂರಿಗರಲ್ಲಿ ಬಹುತೇಕ ಮಂದಿ ಅಸ್ತಮಾ, ಅಲರ್ಜಿ, ಉಸಿರಾಟದ ಸಮಸ್ಯೆ, ಶ್ವಾಸ ಕೋ ಶದ ಸಮಸ್ಯೆ, ಹೊಸ ಮಾದರಿಯ ವೈರಲ್ ಜ್ವರ, ಕಣ್ಣಿನ ಸಮಸ್ಯೆ ದುಪ್ಪಟ್ಟಾಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.
ಗಾಳಿಯ ಗುಣಮಟ್ಟ ಕುಸಿತವು ಮಕ್ಕಳು, ವೃದ್ಧರು, ಗರ್ಭಿಣಿಯರಲ್ಲಿ ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ದ್ವಿಗುಣ ಗೊಳ್ಳು ವಂತೆ ಮಾಡಿದೆ ಎಂಬುದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮೂಲ ಗಳಿಂದ ತಿಳಿದು ಬಂದಿದೆ.
ಮಿತಿಗಿಂತ 4 ಪಟ್ಟು ಮಾಲಿನ್ಯ ಹೆಚ್ಚಳ:
ಸಿಲಿ ಕಾನ್ ಸಿಟಿಯಲ್ಲಿ ಡಬ್ಲೂé ಎಚ್‌ಒ ನಿಗದಿಪಡಿಸಿರುವ ಮಿತಿಗಿಂತ 4ಕ್ಕೂ ಹೆಚ್ಚು ಪಟ್ಟು ಮಾಲಿನ್ಯ ಉಂಟಾಗಿದೆ. ಧೂಳಿನ ಕಣ, ನೈಟ್ರೋಜನ್ ಡಯಾಕ್ಸೆ„ಡ್ ಪ್ರಮಾಣ ಸುರಕ್ಷಿತ ಮಟ್ಟಕ್ಕಿಂತ 1.4 ಪಟ್ಟು ಹೆಚ್ಚಾಗಿರುವುದು ಗ್ರೀನ್ ಪೀಸ್ ಇಂಡಿಯಾ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಪರ್ಟಿಕ್ಯುಲರ್ ಮ್ಯಾಟರ್ ಹೆಚ್ಚಳದಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ವಾರ್ಷಿಕವಾಗಿ ಸಾವಿರಾರು ಮಂದಿ ಮರಣ ಹೊಂದುತ್ತಿರುವುದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ನಡೆಸಿದ್ದ ಅಧ್ಯಯನ ದೃಢಪಡಿಸಿದೆ.