ರಸ್ತೆ ಅಪಘಾತ: ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಆಸ್ಪತ್ರೆಗೆ ದಾಖಲು
ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಕಾರು ಅಪಘಾತಕ್ಕೀಡಾಗಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿದ್ದ ರುಬೀನಾ ಕಾರಿಗೆ ಟಾಟಾ ಯೋಧ ಟ್ರಕ್ ಬಂದು ಗುದ್ದಿದೆ. ಫೋನ್‌ನಲ್ಲಿ ಮಾತನಾಡುತ್ತಾ ಟ್ರಕ್ ಚಲಾಯಿಸುತ್ತಾ ಚಾಲಕ ರುಬೀನಾ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ಬಳಿಕ ರಿಬೀನಾ ಅರನ್ನು ಅಸ್ಪತ್ರೆಗೆ ಕರೆದೊಯ್ಯಲಾಗಿದ್ದು ತಕ್ಷಣ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ರಿಬೀನಾ ಪತಿ, ನಟ ಅಭಿನವ್ ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ. ಅಭಿನವ್ ಶೇರ್ ಮಾಡಿರುವ ಫೋಟೋಗಳಲ್ಲಿ
ಟಾಟಾ ಯೋಧದ ಬಂಪರ್ ಮತ್ತು ಮುಂಭಾಗಕ್ಕೆ ಹಾನಿಯಾಗಿದೆ. ಇನ್ನು ರುಬೀನಾ ಇದ್ದ ಕಾರು MG ಗ್ಲೋಸ್ಟರ್‌ನ ಹಿಂಭಾಗ ಹಾನಿಯಾಗಿದೆ.
ಈ ಬಗ್ಗೆ ನಟಿ ರುಬೀನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತನಗೂ ಕೆಲವು ಗಾಯಗಳಾಗಿವೆ ಎಂದು ಹೇಳಿದ್ದಾರೆ. ಬೆನ್ನು ಮತ್ತು ತಲೆಗೆ ಪೆಟ್ಟು ಬಿದ್ದು ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಗಳ ನಂತರ ಎಲ್ಲವೂ ಸರಿಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ರಸ್ತೆಯಲ್ಲಿ ಜಾಗರೂಕರಾಗಿರಿ ಎಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ . ನಿಯಮಗಳು ನಮ್ಮ ಸುರಕ್ಷತೆಗಾಗಿ’ ಎಂದು ಹೇಳಿದ್ದಾರೆ.
ಇನ್ನು ಪತಿ ಅಭಿನವ್ ಪ್ರತಿಕ್ರಿಯೆ ನೀಡಿ, ‘ಇಂದು ನಮಗೆ ಸಂಭವಿಸಿದೆ. ನಿಮಗೂ ಸಂಭಿವಸಬಹುದು. ಫೋನ್ ಹಿಡಿದು ಟ್ರಾಫಿಕ್ ಜಂಪ್ ಮಾಡುವ ಈಡಿಯಟ್ಸ್ ಬಗ್ಗೆ ಎಚ್ಚರದಿಂದಿರಿ. ಆತ ನಗುತ್ತಾ ನಿಂತಿದ್ದ. ರುಬೀನಾ ಕಾರಿನಲ್ಲಿ ಇದ್ದಳು. ಸದ್ಯ ಆರೋಗ್ಯವಾಗಿ ಇದ್ದಾಳೆ. ಅವಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ಆ ಚಾಲಕನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿಮ್ಮನ್ನು ವಿನಂತಿಸುತ್ತೇನೆ’ ಎಂದು ಮುಂಬೈ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Happened to us, can happen to you. Beware of idiots on the phone jumping traffic lights. To top it up standing there smiling. More details later. Rubina was in car she is fine, taking her for medical. @MTPHereToHelp @MumbaiPolice request you to take strict action ! @RubiDilaik pic.twitter.com/mOT5FPs4Vo
— Abhinav Shukla (@ashukla09) June 10, 2023
ರುಬಿನಾ ದಿಲೈಕ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಮುಂಬೈ ಪೊಲೀಸರು ಅಭಿನವ್ ಶುಕ್ಲಾ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ‘ಘಟನೆ ನಡೆದ ಸ್ಥಳದ ಹತ್ತಿರದ ಪೊಲೀಸ್ ಠಾಣೆಗೆ ಘಟನೆಯನ್ನು ವರದಿ ಮಾಡಿ’ ಎಂದು ಹೇಳಿದ್ದಾರೆ.
ನಟಿ ರುಬೀನಾ ದಿಲೈಕ್
ಪುನರ್ ವಿವಾಹ -ಏಕ್ ನಯೀ ಉಮೀದ್, ಸಿಂದೂರ್ ಬಿನ್ ಸುಹಾಗನ್, ಚೋಟಿ ಬಹು ಮತ್ತು ಶಕ್ತಿ: ಅಸ್ತಿತ್ವ ಕೆ ಅಹಸಾಸ್ ಕಿಯಂತಹ ಧಾರಾವಾಹಿಗಳಲ್ಲಿ ರುಬಿನಾ ದಿಲೈಕ್ ನಟಿಸಿದ್ದಾರೆ. ಹಿಂದಿ ಕಿರುತೆರೆ ಲೋಕದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ರುಬೀನಾ ಒಬ್ಬರಾಗಿದ್ದಾರೆ. ನಟಿ ಬಿಗ್ ಬಾಸ್ 14 ರ ಭಾಗವಾಗಿದ್ದರು ಬಿಗ್ ಬಾಸ್ ಗೆದ್ದರು. ಬಿಗ್ ಬಾಸ್ ನಲ್ಲಿ ಪತಿ ಅಭಿನವ್ ಶುಕ್ಲಾ ಜೊತೆ ರುಬೀನಾ ಕಾಣಿಸಿಕೊಂಡರು.