ಪಡೀಲ್ ಅಂಡರ್ ಪಾಸ್ ನಲ್ಲಿ ರಸ್ತೆ ಅಪಘಾತ ; ಓರ್ವ ಮೃತ್ಯು – ಇಬ್ಬರು ಗಂಭೀರ!

Padil underpass: ಮಂಗಳೂರು ನಗರದ ಪಡೀಲ್ ಅಂಡರ್ ಪಾಸ್‌ನಲ್ಲಿ (Padil underpass) ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುವುದಾಗಿ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು :ಮಂಗಳೂರು ನಗರದ ಪಡೀಲ್ ಅಂಡರ್ ಪಾಸ್‌ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುವುದಾಗಿ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು,: ಮಂಗಳೂರು ನಗರದ ಪಡೀಲ್ ಅಂಡರ್ ಪಾಸ್‌ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುವುದಾಗಿ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭುವನ್ ರಾಜ್ (18) ಎಂದು ಗುರುತಿಸಲಾಗಿದೆ. ಗಾಡ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ಭವಿನ್ ರಾಜ್ ಗುರುವಾರ ಮಧ್ಯಾಹ್ನ ತನ್ನ ಗೆಳೆಯರ ಜತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಪಡೀಲ್ ಅಂಡರ್‌ಪಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಅಂಡರ್‌ಪಾಸ್ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಮೂವರು ಕೂಡ ಗಾಯಗೊಂಡಿದ್ದು, ಈ ಪೈಕಿ ಭವಿನ್ ರಾಜ್ ಮೃತಪಟ್ಟಿದ್ದಾರೆ.
ಘಟನೆಯ ಕುರಿತಂಟೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಅಪಘಾತ – ಮಂಗಳೂರಿನ ಯುವಕ ಮೃತ್ಯು
ಮಂಗಳೂರು, ಸೆ 14: ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುದ್ರೋಳಿಯ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಕುದ್ರೋಳಿಯ ಮೊಯ್ದಿನ್ ನಗರದ ಝಹೂರ್-ನಸೀರಾ ದಂಪತಿಯ ಪುತ್ರ ನಾಹಿದ್ ಸಫಾನ್ (28) ಮೃತಪಟ್ಟ ಯುವಕ
ನಾಹಿದ್ ಸಫಾನ್ ಅವರು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಬೆಳ್ಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಯಲಹಂಕ ಬಿಬಿ ರಸ್ತೆಯ ಏರೋ ಡ್ರಂ ಬಳಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಇನ್ನು ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದ ನಾಹಿದ್ ಸಫಾನ್ ತಂದೆ ಮತ್ತು ತಾಯಿ ಹಾಗೂ ಅಣ್ಣ, ಅಕ್ಕ, ಪತ್ನಿಯನ್ನು ಅಗಲಿದ್ದಾರೆ.