ನಡುರಸ್ತೆಯಲ್ಲೇ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್ ಕಾನ್ಸ್ಟೇಬಲ್ ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಮಾನತು!
ಉತ್ತರಪ್ರದೇಶ: ಪೊಲೀಸ್ ಕಾನ್ಸ್ ಟೇಬಲ್ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಪರಿಣಾಮ ಪೊಲೀಸ್ ಕಾನ್ಸ್ ಟೇಬಲ್ ಅಮಾನತುಗೊಂಡಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.
ರಿಂಕು ರಾಜೋರಾ ಎಂಬ ಪೊಲೀಸ್ ಕಾನ್ಸ್ ಟೇಬಲ್ ಸಮವಸ್ತ್ರದಲ್ಲಿದ್ದು, ವ್ಯಕ್ತಿಯೊಬ್ಬನನ್ನು ಹಿಡಿದು ಥಳಿಸಿ, ನೆಲದ ಮೇಲೆ ಬಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ತುಳಿಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
TW: Violence
— Piyush Rai (@Benarasiyaa) August 16, 2023
A video of a UP police constable assaulting a man in full public view has surfaced. Incident happened within limits of Kavinagar PS in Ghaziabad, UP. pic.twitter.com/iOTNhxCjCJ
ಸ್ಥಳೀಯ ಮಾಧ್ಯಮಕ್ಕೆ ಪೊಲೀಸ್ ಕಾನ್ಸ್ ಟೇಬಲ್ ನೀಡಿರುವ ಪ್ರತಿಕ್ರಿಯೆ ಪ್ರಕಾರ, ಈ ವ್ಯಕ್ತಿ ರಿಂಕು ಅವರ ಸಹೋದರಿ ಹೆಸರಿನಲ್ಲಿ ಅಶ್ಲೀಲ ಮಾತುಗಳನ್ನಾಡಿದ್ದು, ಇದರಿಂದ ಕೋಪಗೊಂಡು ಆತನಿಗೆ ಥಳಿಸಿರುವುದಾಗಿ ವರದಿಯಾಗಿದೆ.
ಆ ವ್ಯಕ್ತಿ ಅಶ್ಲೀಲ ಭಾಷೆ ಬಳಸಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಿತ್ತೇ ವಿನಃ ಹಾಡಹಗಲೇ ಈ ರೀತಿ ಕ್ರಮ ಕೈಗೊಳ್ಳುವುದು ತಪ್ಪು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಕೂಡಲೇ ರಿಂಕುವನ್ನು ಕರ್ತವ್ಯದಿಂದ ಅಮಾನತುಗೊಳಿಸಿ, ಇಲಾಖೆಯ ತನಿಖೆಗೆ ಆದೇಶ ನೀಡಲಾಗಿದೆ. ಅಲ್ಲದೇ ರಿಂಕು ವಿರುದ್ಧ ಉತ್ತರಪ್ರದೇಶದ ಗಾಜಿಯಾಬಾದ್ ನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಚೀನಾ ಒಪ್ಪಿದೆ: MEA
ನವದೆಹಲಿ: ಪೂರ್ವ ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಉಳಿದಿರುವ ಸಮಸ್ಯೆಗಳನ್ನು ವಿಳಂಬವಿಲ್ಲದೆ ಪರಿಹರಿಸಲು ಭಾರತ (India) ಮತ್ತು ಚೀನಾ (China) ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ. ಮಂಗಳವಾರ ನಡೆದ 19ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬಳಿಕ ಬುಧವಾರ ಸಚಿವಾಲಯ ತನ್ನ ಹೇಳಿಕೆ ಪ್ರಕಟಿಸಿದೆ.
ಚುಶುಲ್-ಮೊಲ್ಡೊ ಗಡಿ ಸಭೆಯ ಸ್ಥಳದಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ 19ನೇ ಸುತ್ತಿನ ಮಾತುಕತೆ ನಡೆಯಿತು. ಎರಡು ದೇಶಗಳ ನಡುವಿನ ಸಮಸ್ಯೆ ಬಗ್ಗೆ ಧನಾತ್ಮಕ, ರಚನಾತ್ಮಕ ಮತ್ತು ಆಳವಾದ ಮಾತುಕತೆ ನಡೆಸಿದೆ. ಆದರೆ ಉಳಿದ ಘರ್ಷಣೆಯ ಬಿಂದುಗಳಲ್ಲಿ ಸೈನ್ಯವನ್ನು ಹಿಂಪಡೆಯುವ ತಕ್ಷಣದ ಪ್ರಗತಿಯನ್ನು ವರದಿ ಮಾಡಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಉಳಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಸಲು ಮತ್ತು ಈ ಮಾತುಕತೆ ವೇಗವನ್ನು ಕಾಪಾಡಿಕೊಳ್ಳಲು ಚೀನಾ ಒಪ್ಪಿಕೊಂಡಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಉಭಯ ಕಡೆಯಿಂದ ಒಪ್ಪಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ತಿಳಿಸಿದೆ.
2020 ರಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ಪ್ರಾರಂಭವಾದಾಗಿನಿಂದ ಎರಡೂ ಕಡೆಯಿಂದ 5 ಘರ್ಷಣೆ ಬಿಂದುಗಳಿಂದ ಸೇನೆಯನ್ನು ಯಶಸ್ವಿಯಾಗಿ ಹಿಂಪಡೆಯಲಾಗಿದೆ. ಇತ್ತೀಚಿನ ಮಾತುಕತೆಗಳು ಡೆಪ್ಸಾಂಗ್ ಪ್ಲೇನ್ಸ್ ಮತ್ತು ಡೆಮ್‌ಚೋಕ್‌ನಿಂದ ಸೇನೆ ಹಿಂಪಡೆಯುವುದಾಗಿದೆ. ಬಿಕ್ಕಟ್ಟು ಬಗೆಹರಿಯುವವರೆಗೆ ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂದು ಭಾರತ ನಿರಂತರವಾಗಿ ಒತ್ತಿ ಹೇಳಿದೆ.
ಜಿ20 ನಾಯಕರ ಶೃಂಗಸಭೆಗೆ ಒಂದು ತಿಂಗಳ ಮೊದಲು ಈ ಮಾತುಕತೆ ನಡೆದಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೆಪ್ಟೆಂಬರ್ 9 ಮತ್ತು 10 ರಂದು ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.