ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಸಚಿವ ಮನೋಜ್ ತಿವಾರಿ

Twitter
Facebook
LinkedIn
WhatsApp
ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಸಚಿವ ಮನೋಜ್ ತಿವಾರಿ
 

ನವದೆಹಲಿ: ಟೀಂ ಇಂಡಿಯಾ (Team India) ಆಟಗಾರ ಮನೋಜ್ ತಿವಾರಿ (Manoj Tiwari) ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

2008 ರಲ್ಲಿ ಬ್ರಿಸ್ಬೇನ್‍ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ (Cricket) ಪದಾರ್ಪಣೆ ಮಾಡಿದ್ದರು. ಈ ವರ್ಷ ರಣಜಿ ಟೂರ್ನಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ 37 ವರ್ಷದ ಮನೋಜ್ ತಿವಾರಿ ಕ್ರಿಕೆಟ್ ವೃತ್ತಿ ಬದುಕಿದೆ ಗುಡ್‍ಬೈ ಹೇಳಿದ್ದಾರೆ.

ಮನೋಜ್ ತಿವಾರಿ ಕ್ರಿಕೆಟ್ ಜೊತೆಗೆ ರಾಜಕೀಯದಲ್ಲೂ ಹೊಸ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಪ್ರಸ್ತುತ ಪಶ್ಚಿಮ ಬಂಗಾಳದ ಯುವ ಸಬಲೀಕರಣ ಮತ್ತು ಕ್ರೀಡಾ (West Bengal Sports Minsiter) ಸಚಿವರಾಗಿದ್ದಾರೆ.

2015ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದ ತಿವಾರಿ 12 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದರು. ಇದರಲ್ಲಿ ಒಂದು ಅರ್ಧ ಶತಕ, ಒಂದು ಶತಕ ಸೇರಿದಂತೆ ಒಟ್ಟು 287 ರನ್ ಕಲೆಹಾಕಿದ್ದಾರೆ.

ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಸಚಿವ ಮನೋಜ್ ತಿವಾರಿ

ತಮ್ಮ ಕ್ರಿಕೆಟ್ ವೃತ್ತಿ ಜೀವನದುದ್ದಕ್ಕೂ ಬೆಂಬಲ ನೀಡಿದ್ದ ಪತ್ನಿ ಮತ್ತು ಮಾಜಿ ಸಹ ಆಟಗಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಅವರ ಕೋಚ್ ಮನಬೇಂದ್ರ ಘೋಷ್ ಅವರಿಗೆ ಗೌರವ ಸಮರ್ಪಿಸಿದ್ದಾರೆ.

ಐಪಿಎಲ್‍ನಲ್ಲಿ ಮನೋಜ್ ತಿವಾರಿ ಕೊಲ್ಕತ್ತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 98 ಪಂದ್ಯಗಳನ್ನಾಡಿರುವ ಅವರು ಒಟ್ಟು 1,686 ರನ್ ಬಾರಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳೂ ಸೇರಿವೆ. 

`ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?

ಈತ ಎಂಟ್ರಿ ಕೊಟ್ರೆ ಸಾಕು ಯಾವಾಗ ಸಿಕ್ಸ್ ಬಾರಿಸ್ತಾನೋ? ಅರ್ಧಕ್ಕೆ ಕೈಕೋಡ್ತಾನೋ? ಅನ್ನೂ ಟೆನ್ಷನ್, ಒಮ್ಮೆ ಇದ್ದಕ್ಕಿದ್ದಂತೆ ಸಿಕ್ಸರ್-ಬೌಂಡರಿ ಬಾರಿಸೋದು ಮತ್ತೊಮ್ಮೆ ಬೇಗನೇ ಔಟಾಗಿ ನಿರಾಸೆ ಮೂಡಿಸುತ್ತಿದ್ದ ಕ್ರಿಕೆಟಿಗ ಈಗ ಟೀಂ ಇಂಡಿಯಾ ತಂಡಕ್ಕೆ ನಾಯಕನಾಗುವ ರೇಸ್‌ನಲ್ಲಿದ್ದಾರೆ. ಹೌದು. ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಟೀಂ ಇಂಡಿಯಾಕ್ಕೆ ಸರಣಿ ಜಯ ತಂದುಕೊಟ್ಟ ಹಾರ್ದಿಕ್ ಪಾಂಡ್ಯ (Hardik Pandya), ಎಂ.ಎಸ್ ಧೋನಿಯಂತೆ (MS Dhoni) ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಅನ್ನೋ ಕೂಗು ಕೇಳಿಬರ್ತಿದೆ.

ಟೀಂ ಇಂಡಿಯಾದಲ್ಲಿ (Team India) ಸಂಪೂರ್ಣವಾಗಿ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ (West Indies) ವಿರುದ್ಧ ಕೊನೆಯ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಬ್ಯಾಟಿಂಗ್ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾಗಿ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಹೊಸ ನಾಯಕತ್ವಕ್ಕೆ ಹುಡುಕಾಟ ನಡೆಸಿರುವ ಬಿಸಿಸಿಐಗೆ ಹಾರ್ದಿಕ್ ಪಾಂಡ್ಯ ಪರ ಕೂಗು ಕೇಳಿಬಂದಿದೆ.

2016ರ ಜನವರಿಯಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಸರಣಿ ಮೂಲಕ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟ ಹಾರ್ದಿಕ್ ಪಾಂಡ್ಯ, ಅದೇ ವರ್ಷ ಅಕ್ಟೋಬರ್‌ನಲ್ಲಿ ಏಕದಿನ ತಂಡಕ್ಕೂ ಪದಾರ್ಪಣೆ ಮಾಡಿದ್ರು. 2017ರಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೂ ಫಾರ್ಮ್ ಕಂಡುಕೊಳ್ಳದ ಕಾರಣ 2018ರ ಆಗಸ್ಟ್ ನಂತ್ರ ಟೆಸ್ಟ್ ಕ್ರಿಕೆಟ್‌ನಿಂದ ಹೊರಗುಳಿದರು. ಈವರೆಗೆ 11 ಟೆಸ್ಟ್, 77 ಏಕದಿನ ಪಂದ್ಯ, 87 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಪಾಂಡ್ಯ 123 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.

2022ರಲ್ಲಿ ಐಪಿಎಲ್‌ಗೆ ಸೇರ್ಪಡೆಯಾದ ಗುಜರಾತ್ ಟೈಟಾನ್ಸ್ (Gujarat Taitans) ತಂಡದ ಮೂಲಕ ನಾಯಕತ್ವದ ಜವಾಬ್ದಾರಿ ಹೊತ್ತ ಪಾಂಡ್ಯ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ನಂಬಿಕೆ ಉಳಿಸಿಕೊಂಡರು. 2023ರ ಆವೃತ್ತಿಯಲ್ಲಿ ಸತತ 2ನೇ ಬಾರಿಗೆ ತಂಡವನ್ನ ಫೈನಲ್ ಹಾದಿಗೆ ಕೊಂಡೊಯ್ದರು. ಪ್ರಸಕ್ತ ವರ್ಷದ ಆರಂಭದಿಂದಲೂ ಸಂಪೂರ್ಣ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯ ತಂದುಕೊಟ್ಟಿದ್ದರು. ಇದೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಿಂಡೀಸ್ ಪರ ಜವಾಬ್ದಾರಿಯುತ ಆಟವಾಡಿದ ಪಾಂಡ್ಯ ಗೆಲುವು ತಂದುಕೊಡುವ ಮೂಲಕ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 

ಹಾರ್ದಿಕ್ ಪಾಂಡ್ಯ ಬೆಳವಣಿಗೆಯಿಂದ ಟೀಂ ಇಂಡಿಯಾದಲ್ಲಿ ಹೊಸ ಅಲೆ ಶುರುವಾಗಿದೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2010ರಲ್ಲಿ ಏಷ್ಯಾಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟ ಮಹಿ ಅವರ ಸ್ಥಾನ ತುಂಬಲು ಪಾಂಡ್ಯ ಸೂಕ್ತ ಅನ್ನೋ ಅಭಿಪ್ರಾಯಗಳೂ ಕೇಳಿ ಬರ್ತಿವೆ. ಏಕೆಂದರೆ ವಿಂಡೀಸ್ ಕೊನೆಯ ಪಂದ್ಯದಲ್ಲಿ ಮೈಂಡ್‌ಗೇಮ್ ಆಡಿದ ಪಾಂಡ್ಯ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟರು. ಆರಂಭಿಕ ಇಶಾನ್ ಕಿಶನ್ ಔಟಾಗುತ್ತಿದ್ದಂತೆ ಋತುರಾಜ್ ಗಾಯಕ್ವಾಡ್‌ಗೆ ಚಾನ್ಸ್ ಕೊಟ್ಟರು. ನಂತರ 4ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ರನ್ನ ಕಣಕ್ಕಿಳಿಸಿದರು. ನಂತ್ರ ಪಕ್ಕಾ ಪ್ಲ್ಯಾನ್‌ನೊಂದಿಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. ಇದರಿಂದ ಪಾಂಡ್ಯ ಸಹ ಮಹಿಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಎನ್ನಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ