ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Republic Day parade Tableau: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆಗೂ ಅನುಮತಿ

Twitter
Facebook
LinkedIn
WhatsApp
pic 1

ಬೆಂಗಳೂರು (ಜ.12): ಈ ಬಾರಿಯ ಗಣರಾಜ್ಯೋತ್ಸದ  ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆಗೂ ಅನುಮತಿ ಸಿಕ್ಕಿದೆ. ಕಳೆದ 13 ವರ್ಷಗಳಿಂದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನವಾಗುತ್ತಿತ್ತು. ಆದರೆ ಈ ಬಾರಿ ಟ್ಯಾಬ್ಲೋ ಗೆ ಅವಕಾಶ ನಿರಾಕರಿಸಲಾಗಿತ್ತು. ಕೇಂದ್ರ ಸರಕಾರದಿಂದ ನಿರಾಕರಣೆಗೊಂಡಿದ್ದು, ವ್ಯಾಪಕ ವಿರೋಧ  ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಬಳಿ ಮನವಿ ಮಾಡೋದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ಜನತೆಗೆ ಭರವಸೆ ನೀಡಿದ್ದರು. ಈ ಬಾರಿಯ ಗಣರಾಜೋತ್ಸವ ಪೕರೆಡ್‌ನಲ್ಲಿ ರಾಜ್ಯದ ಟ್ಯಾಬ್ಲೋಗೆ ಅವಕಾಶ ಸಿಗಲಿದೆ. ಈ ಹಿಂದೆ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಪ್ರತಿ ವರ್ಷ ಬೇರೆ ಬೇರೆ ರಾಜ್ಯಗಳಿಗೆ ಅವಕಾಶ ಕೊಡಲಾಗುತ್ತದೆ. ಈ ವರ್ಷವೂ ಭಾಗವಹಿಸಲು ಅವಕಾಶ ಕೊಡಿ ಎಂದು ಕೇಳುತ್ತೇವೆ. ಖಂಡಿತ ರಾಜ್ಯ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಗಲಿದೆ ಎಂದಿದ್ದರು. ಕೊನೆಗೂ ರಾಜ್ಯದ ಮನವಿಗೆ ಸ್ಪಂದಿಸಿ  ಅವಕಾಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಈಗ ಮತ್ತೆ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.

2023ರ ಸ್ತಬ್ಥಚಿತ್ರದಲ್ಲಿ ಕರ್ನಾಟಕವು ಮಂಡಿಸಿದ್ದ ನಾರಿಶಕ್ತಿ ಸ್ತಬ್ಥಚಿತ್ರದ ವಿಷಯದ ವಿನ್ಯಾಸದ ಮಾದರಿಯನ್ನು ಕೂಡ ನೀಡಲಾಗಿತ್ತು. ನಾರಿ ಶಕ್ತಿ ಥೀಮ್ ಮೇಲೆಯೇ ಕೇರಳದವರೂ ಕೂಡ  ಸ್ತಬ್ಧಚಿತ್ರ ಮಾಡಿದ್ದರು. ಆದರೆ, ಕರ್ನಾಟಕದ್ದು ರಿಜೆಕ್ಟ್ ಆಗಿತ್ತು. ಈಗ ಅಕ್ಸೆಪ್ಟ್ ಆಗಿದೆ.

ಕರ್ನಾಟಕ ಪ್ರತಿನಿಧಿಸಿದ್ದ 2023ರ ಸ್ತಬ್ಥಚಿತ್ರದಲ್ಲಿ ನಾರಿಶಕ್ತಿ ವಿಷಯವಸ್ತುವಾಗಿತ್ತು. ಆರಂಭದ ಕೆಲವು ಸುತ್ತಿನಲ್ಲಿ ಆಯ್ಕೆಯಾಗಿತ್ತು. ಸ್ತಬ್ಧಚಿತ್ರದ ವಿನ್ಯಾಸ ಮತ್ತು ಸಂಗೀತಕ್ಕೆ ತಜ್ಞರ ಸಮಿತಿ ಒಪ್ಪಿಗೆ ಸಹ ನೀಡಿತ್ತು. ಆದರೆ ಕೊನೆ ಸುತ್ತಿನಲ್ಲಿ ಕರ್ನಾಟಕದ ಸ್ಥಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿ.   ಕಳೆದ ಬಾರಿ ‘ಸಾಂಸ್ಕೃತಿಕ ತೊಟ್ಟಿಲು’ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಕರ್ನಾಟಕ ಪ್ರದರ್ಶಿಸಿದ್ದ ಟ್ಯಾಬ್ಲೋ(ಸ್ತಬ್ದ ಚಿತ್ರ)ಗೆ ದ್ವಿತೀಯ ಪ್ರಶಸ್ತಿ ಸಿಕ್ಕಿತ್ತು.

ಈ ಬಾರಿ ಟ್ಯಾಬ್ಲೋಗಾಗಿ ಸಿರಿಧಾನ್ಯ, ಹೂ ಕೃಷಿ, ರೇಷ್ಮೆ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತರ ನಾರಿಶಕ್ತಿ ಥೀಮ್ ಗಳನ್ನು ರಕ್ಷಣಾ ಇಲಾಖೆ ನಡೆಸುವ ಟ್ಯಾಬ್ಲೋ ಆಯ್ಕೆ ಪ್ರಕ್ರಿಯೆ ಸಭೆಯ ಮುಂದೆ ಕರ್ನಾಟಕ ವಾರ್ತಾ ಇಲಾಖೆ ಅಧಿಕಾರಿಗಳ ಇರಿಸಿದ್ದರು. ಅಂತಿಮವಾಗಿ ಪದ್ಮ ಪುರಸ್ಕೃತ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ ಹಾಗೂ ತುಳಸೀಗೌಡ ಅವರ ನಾರಿ ಶಕ್ತಿ ಟ್ಯಾಬ್ಲೋ ಆಯ್ಕೆ ಸಮಿತಿಯ ಬಹುಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ ಆಯ್ಕೆ ಸಮಿತಿಯ ಅಂತಿಮ ಹಂತದಲ್ಲಿ ಕರ್ನಾಟಕ ಟ್ಯಾಬ್ಲೋ ದಿಢೀರ್‌ ತಿರಸ್ಕೃತವಾಗಿತ್ತು.

16 ರಾಜ್ಯಗಳ ಟ್ಯಾಬ್ಲೋಗೆ ಅವಕಾಶ:  ಕಳೆದ ಬಾರಿ ಟ್ಯಾಬ್ಲೋಗಳ ಆಯ್ಕೆ ಮಾಡಿದ್ದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕೇರಳ, ಪಶ್ಚಿಮ ಬಂಗಾಳಕ್ಕೆ ಈ ಬಾರಿ ಅವಕಾಶ ನೀಡಲಾಗಿದೆ. ಮಿಕ್ಕಂತೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗುಜರಾತ್‌, ಹರಿಯಾಣ, ಜಾರ್ಖಂಡ್‌, ಮಹಾರಾಷ್ಟ್ರ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ, ದಾದರ್‌ ಹವೇಲಿ-ದಮನ್‌, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಉಳಿದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ