ಬುಧವಾರ, ಡಿಸೆಂಬರ್ 25, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Remi Lucidi: 700 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಪ್ರಾಣಬಿಟ್ಟ ಸಾಹಸಿಗ

Twitter
Facebook
LinkedIn
WhatsApp
Remi Lucidi: 700 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಪ್ರಾಣಬಿಟ್ಟ ಸಾಹಸಿಗ
Remi Lucidi: ಸಾಹಸಮಯ ಗಗನಚುಂಬಿ ಕಟ್ಟಡಗಳನ್ನು ಏರಿ ರೀಲ್ಸ್‌ ಮಾಡುವುದರಲ್ಲಿ ಭಾರೀ ಹೆಸರನ್ನು ಪಡೆದಿರುವ ಫ್ರೆಂಚ್ ಡೇರ್‌ಡೆವಿಲ್ ರೆಮಿ ಲುಸಿಡಿ ಅವರು ಹಾಂಗ್ ಕಾಂಗ್‌ನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಫ್ರೆಂಚ್ ಡೇರ್‌ಡೆವಿಲ್ ಎಂದೇ ಖ್ಯಾತಿ ಪಡೆದಿದ್ದ ರೆಮಿ ಲುಸಿಡಿ (Remi Lucidi) ಅವರು ಗಗನಚುಂಬಿ ಕಟ್ಟಡಗಳಿಗೆ ಏರಿ ಅಲ್ಲಿಂದ ರೀಲ್ಸ್ ಮಾಡುವ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳೂ ಅವರಿಗಿದ್ದರು.

ಹಾಂಗ್‌ ಕಾಂಗ್:‌ ಗಗನಚುಂಬಿ ಕಟ್ಟಡಗಳನ್ನು ಏರುವ ಸಾಹಸದಲ್ಲಿಯೇ ಜನಪ್ರಿಯನಾಗಿದ್ದ ಫ್ರೆಂಚ್‌ ಡೇರ್‌ ಡೆವಿಲ್‌ ರೆಮಿ ಎನಿಗ್ಮಾ ಲೂಸಿಡಿ (30ವರ್ಷ) ಹಾಂಗ್‌ ಕಾಂಗ್‌ ನ 68 ಮಹಡಿಗಳುಳ್ಳ ಟ್ರೆಗುಂಟರ್‌ ಟವರ್‌ ಅನ್ನು ಏರಿದ್ದು, ಈ ಸಂದರ್ಭದಲ್ಲಿ ಬರೋಬ್ಬರಿ 721 ಅಡಿ ಎತ್ತರದಿಂದ ಆಯತಪ್ಪಿ ಬಿದ್ದು ದುರಂತ ಅಂತ್ಯ ಕಂಡಿರುವ ಘಟನೆ ನಡೆದಿದೆ.

ರೆಮಿ ಲೂಸಿಡಿ ಜಗತ್ತಿನ ಅತೀ ಎತ್ತರದ ಗಗನಚುಂಬಿ ಕಟ್ಟಡಗಳನ್ನು ಏರುವ ಸಾಹಸದಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದ. ಇನ್‌ ಸ್ಟಾಗ್ರಾಮ್‌ ಡೇರ್‌ ಡೆವಿಲ್‌ ಎಂದೇ ಹೆಸರಾಗಿದ್ದ ರೆಮಿ ತನ್ನ ಸ್ಟಂಟ್‌ ನಿಂದಲೇ ಕೊನೆಯುಸಿರೆಳೆದಿರುವುದು ದುರಂತ ಎಂದು ವರದಿ ತಿಳಿಸಿದೆ.

ಗುರುವಾರ ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಗುರುವಾರ ಟ್ರೆಗುಂಟರ್‌ ಟವರ್‌ ಪ್ರದೇಶಕ್ಕೆ ಬಂದಿದ್ದ ರೆಮಿ ಎನಿಗ್ಮಾ ತಾನು 40ನೇ ಮಹಡಿಯಲ್ಲಿರುವ ತನ್ನ ಗೆಳೆಯನನ್ನು ಭೇಟಿಯಾಗಲು ಬಂದಿರುವುದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದ.

ಆದರೆ ಹುಚ್ಚು ಸಾಹಸಕ್ಕೆ ಇಳಿದಿದ್ದ ರೆಮಿ ಹಾಂಗ್‌ ಕಾಂಗ್‌ ನ ಅತೀ ಎತ್ತರದ (721ಕ್ಕೂ ಅಧಿಕ ಅಡಿ) ಟ್ರೆಗುಂಟರ್‌ ಟವರ್‌ ಅನ್ನು ಏರುತ್ತಾ 68ನೇ ಮಹಡಿ ತಲುಪಿದ್ದ. ಈ ಸಂದರ್ಭದಲ್ಲಿ ಟವರ್‌ ನಲ್ಲಿದ್ದ ಮನೆಯ ಕಿಟಕಿ ಬಾಗಿಲನ್ನು ಬಡಿದು ಒಳಗೆ ಸೇರುವ ಪ್ರಯತ್ನ ಮಾಡಿದ್ದ ರೆಮಿ. ಆದರೆ ಮನೆಯೊಳಗಿದ್ದ ವ್ಯಕ್ತಿ ಮನೆಯ ಬಾಗಿಲನ್ನು ತೆರೆಯುವ ಮಧ್ಯೆಯೇ ಆಯತಪ್ಪಿ ಬಿದ್ದು ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.

ಸಾಹಸಿಗ ರೆಮಿ ಎನಿಗ್ಮಾ ಸಾವಿನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆತನ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿರುವುದಾಗಿ ವರದಿ ತಿಳಿಸಿದೆ.

ರೆಮಿ ಲುಸಿಡಿ ಯಾರು?

ರೆಮಿ ಲುಸಿಡಿ ಮಾಂಟ್‌ಪೆಲ್ಲಿಯರ್ ನಗರದಲ್ಲಿ ಜನಿಸಿದರು, ಆದರೆ ಅವರು ಹಾಂಗ್ ಕಾಂಗ್‌ನಲ್ಲಿ ತಮ್ಮ ಸಮಯವನ್ನು ಕಳೆದರು ಎಂದು ಡೈಲಿ ಮೇಲ್ ವರದಿ ಮಾಡಿದೆ. ಅವರು ಎತ್ತರಗಳನ್ನು, ಎತ್ತರದ ಕಟ್ಟಡಗಳನ್ನು ಹುಡುಕುತ್ತಾ ಪ್ರಪಂಚವನ್ನು ಸುತ್ತಾಡುತ್ತಿದ್ದರು. ಅವರು ತಮ್ಮ ಸಾಹಸಗಳನ್ನು ದಾಖಲಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ Instagram ಖಾತೆಯು @remnigma ಆಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist