ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Redmi Note 13R Pro : 108MP ಕ್ಯಾಮೆರಾದ ರೆಡ್ಮಿ ನೋಟ್ 13R ಪ್ರೊ ಬಿಡುಗಡೆ ; ಇಲ್ಲಿದೆ ಫೀಚರ್ಸ್!

Twitter
Facebook
LinkedIn
WhatsApp
Redmi Note 13R Pro : 108MP ಕ್ಯಾಮೆರಾದ ರೆಡ್ಮಿ ನೋಟ್ 13R ಪ್ರೊ ಬಿಡುಗಡೆ ; ಇಲ್ಲಿದೆ ಫೀಚರ್ಸ್!

ಶವೋಮಿ ಕಂಪನಿ ಅಪರೂಪಕ್ಕೆ ತನ್ನ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ. ಸಮಯ ತೆಗೆದುಕೊಂಡ ಒಂದೊಳ್ಳೆ ಮೊಬೈಲ್ ಅನ್ನು ಬಿಡುಗಡೆ ಮಾಡುತ್ತಿರುವ ಶವೋಮಿ ಇದೀಗ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಹೊಸ ರೆಡ್ಮಿ ನೋಟ್ 13R ಪ್ರೊ (Redmi Note 13R Pro) ಸ್ಮಾರ್ಟ್​ಫೋನನ್ನು ಅನಾವರಣ ಮಾಡಿದೆ. ಈ ಫೋನ್ ಮೂರು ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಡೈಮೆನ್ಸಿಟಿ 6080 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 108-ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್​ಫೋನ್​ನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ರೆಡ್ಮಿ ನೋಟ್ 13R ಪ್ರೊ ಬೆಲೆ:

ಹೊಸದಾಗಿ ಬಿಡುಗಡೆಯಾದ ರೆಡ್ಮಿ ನೋಟ್ 13R ಪ್ರೊ ಚೀನಾದಲ್ಲಿ ಏಕೈಕ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 12GB RAM + 256GB ಸ್ಟೋರೇಜ್ ಮಾದರಿಗೆ CNY 1,999. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 23,000 ರೂ. ಇರಬಹುದು. ಇದು ಮಿಡ್‌ನೈಟ್ ಬ್ಲ್ಯಾಕ್, ಟೈಮ್ ಬ್ಲೂ ಮತ್ತು ಮಾರ್ನಿಂಗ್ ಲೈಟ್ ಗೋಲ್ಡ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಪ್ರಸ್ತುತ Mi ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕಿದೆ.

ರೆಡ್ಮಿ ನೋಟ್ 13R ಪ್ರೊ ಫೀಚರ್ಸ್:

ರೆಡ್ಮಿ ನೋಟ್ 13R ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67-ಇಂಚಿನ (1,080×2,400 ಪಿಕ್ಸೆಲ್‌ಗಳು) OLED ಡಿಸ್‌ಪ್ಲೇಯನ್ನು 120Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ, 1,000 nits ವರೆಗೆ ಗರಿಷ್ಠ ಬ್ರೈಟ್​ನೊಂದಿಗೆ ನೀಡಲಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಯಿಂದ 12GB RAM, Mali G57 GPU ಮತ್ತು 256GB ಯ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ.

Redmi Note 13R Pro : 108MP ಕ್ಯಾಮೆರಾದ ರೆಡ್ಮಿ ನೋಟ್ 13R ಪ್ರೊ ಬಿಡುಗಡೆ ; ಇಲ್ಲಿದೆ ಫೀಚರ್ಸ್!

ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಸ್ಮಾರ್ಟ್​ಫೋನ್​ನಲ್ಲಿ 2-ಮೆಗಾಪಿಕ್ಸೆಲ್ ಶೂಟರ್ ಜೊತೆಗೆ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಆಗಿದೆ. ಸೆಲ್ಫಿಗಳಿಗಾಗಿ ಮುಂಭಾಗ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ರೆಡ್ಮಿ ನೋಟ್ 13R ಪ್ರೊನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಗ್ಲೋನಾಸ್, NFC, USB ಟೈಪ್-ಸಿ ಪೋರ್ಟ್, Wi-Fi ಮತ್ತು GPS ಆಯ್ಕೆಗಳು ಸೇರಿವೆ. 5,000mAh ಬ್ಯಾಟರಿಯನ್ನು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡಿದೆ. ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ