Realme GT 5 ಅತ್ಯದ್ಭುತ ಸ್ಮಾರ್ಟ್‌ಫೋನ್ ; ಶೀಘ್ರದಲ್ಲೇ ಬಿಡುಗಡೆ!
ಪ್ರಸಿದ್ಧ ರಿಯಲ್ ಮಿ ಕಂಪನಿ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ನೂತನ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತದೆ. ಈಗಾಗಲೇ ತನ್ನ ರಿಯಲ್ ಮಿ 11 ಮತ್ತು ರಿಯಲ್ ಮಿ 11X ಫೋನನ್ನು ಆಗಸ್ಟ್ 23 ರಂದು ಭಾರತದಲ್ಲಿ ಅನಾವರಣ ಮಾಡುವುದಾಗಿ ಘೋಷಿಸಿದೆ.
ಹೀಗಿರುವಾಗ ರಿಯಲ್ ಮಿ ಸಂಸ್ಥೆಯ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಸುದ್ದಿ ಹೊರಬಿದ್ದಿದೆ. ಇದರ ಹೆಸರು ರಿಯಲ್ ಮಿ ಜಿಟಿ 5 (Realme GT 5). ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 24GB RAM ಆಯ್ಕೆ ನೀಡಲಾಗಿದೆಯಂತೆ. ಜೊತೆಗೆ ಹೊಚ್ಚ ಹೊಸ ಕ್ವಾಲ್ಕಂನ ಪ್ರೊಸೆಸರ್ ಕೂಡ ಅಳವಡಿಸಲಾಗಿದೆ.
ರಿಯಲ್ ಮಿ ಜಿಟಿ 5 ಸ್ಮಾರ್ಟ್‌ಫೋನ್ ಬಿಡುಗಡೆ ಯಾವಾಗ ಎಂಬ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದು ಮುಂಬರುವ ದಿನಗಳಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಂನ ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್ 8 Gen 2 ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುತ್ತದೆ. ಇದನ್ನು ರಿಯಲ್ ಮಿಯ ಚೀನಾ ಅಧ್ಯಕ್ಷ ಕ್ಸು ಕಿ ಚೇಸ್ ಖಚಿತ ಪಡಿಸಿದ್ದಾರೆ. ಈ ಫೋನ್ನಲ್ಲಿ “ಕಿಲ್ಲರ್ ವೈಶಿಷ್ಟ್ಯ” ಇರಲಿದೆ ಎಂದು ಕೂಡ ಹೇಳಿದ್ದಾರೆ.
ರಿಯಲ್ ಮಿ ಜಿಟಿ 5 ನಲ್ಲಿ ಅಳವಡಿಸಲಾಗಿರುವ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್ ಅನ್ನು ನಿನ್ನೆಯಷ್ಟೆ ಬಿಡುಗಡೆ ಆದ ಒನ್ಪ್ಲಸ್ ಏಸ್ 2 ಪ್ರೊ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ S23 ಆಲ್ಟ್ರಾ ಫೋನ್ಗಳನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ LPDDR5x RAM ಮತ್ತು UFS 4.0 ಸಂಗ್ರಹಣೆಯನ್ನು ಹೊಂದಿದೆ. ಇದರಲ್ಲಿ ಬಲಿಷ್ಠ ಪ್ರೊಸೆಸರ್ ಜೊತೆಗೆ 240W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆಯಂತೆ. ಇದು ಪ್ರಸ್ತುತ ರಿಯಲ್ ಮಿ ಜಿಟಿ 3 ಯಲ್ಲಿ ಕಂಡುಬರುತ್ತದೆ (ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ).
ಇನ್ನೊಂದು ವರದಿಯ ಪ್ರಕಾರ, ರಿಯಲ್ ಮಿ ಜಿಟಿ 5 ಎರಡು ವೇಗದ ಚಾರ್ಜಿಂಗ್ ರೂಪಾಂತರಗಳಲ್ಲಿ ಬರಬಹುದು ಎಂದು ಹೇಳಲಾಗಿದೆ. ಇದು 5,200mAh ಬ್ಯಾಟರಿ – 150W ಚಾರ್ಜಿಂಗ್ ಮತ್ತು 4,600mAh ಬ್ಯಾಟರಿ – 240W ವೇಗದ ಚಾರ್ಜಿಂಗ್ ಜೊತೆಗೆ ಅನಾವರಣಗೊಳ್ಳಲಿದೆಯಂತೆ.
ರಿಯಲ್ ಮಿ ಜಿಟಿ 5 ಫೀಚರ್ಸ್ ಏನಿರಬಹುದು?:
- ಡಿಸ್ ಪ್ಲೇ: ರಿಯಲ್ ಮಿ ಜಿಟಿ 5 ಫೋನ್ 6.74-ಇಂಚಿನ 1.5K OLED ಡಿಸ್ ಪ್ಲೇ ಜೊತೆಗೆ 144Hz ರಿಫ್ರೆಶ್ ದರ ಹೊಂದಿರಬಹುದು.
- ಪ್ರೊಸೆಸರ್: Adreno GPU ನೊಂದಿಗೆ ಜೋಡಿಸಲಾದ ಕ್ವಾಲ್ಕಂ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ನೀಡಲಾಗಿದೆ.
- RAM ಮತ್ತು ಸಂಗ್ರಹಣೆ : 24GB ವರೆಗೆ LPDDR5x RAM ಮತ್ತು 1TB UFS 4.0 ಸಂಗ್ರಹಣೆ.
- OS : ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI ಕಸ್ಟಮ್ ಸ್ಕಿನ್ ಔಟ್ ಆಫ್ ದಿ ಬಾಕ್ಸ್.
- ಕ್ಯಾಮೆರಾಗಳು : 50MP ಸೋನಿ IMX890 OIS ಜೊತೆಗೆ ಪ್ರಾಥಮಿಕ ಸೆನ್ಸಾರ್, 8MP ಸೆಕೆಂಡರಿ ಲೆನ್ಸ್ ಮತ್ತು 2MP ಮೂರನೇ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಇರಬಹುದು.
- ಬ್ಯಾಟರಿ : 240W ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿ ಮತ್ತು 150W ಚಾರ್ಜಿಂಗ್‌ನೊಂದಿಗೆ 5,200mAh ಬ್ಯಾಟರಿ ನಿರೀಕ್ಷಿಸಲಾಗಿದೆ.