RCB: ಈ ಬಾರಿ ಕಪ್ ನಮ್ದೆ ಅಂತಿದ್ದಾರೆ ಅರ್ ಸಿಬಿ ಟೀಮ್ ;ಇಲ್ಲಿದೆ ತಂಡದ ವೈರಲ್ ಫೊಟೋಸ್..!
ಫೆಬ್ರವರಿ 23 ರಿಂದ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2024) ಆರಂಭವಾಗುತ್ತಿದ್ದು, ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಐದು ತಂಡಗಳು ತಮ್ಮ ತವರು ಕ್ರೀಡಾಂಗಣಗಳಲ್ಲಿ ಅಭ್ಯಾಸ ಆರಂಭಿಸಿದೆ. ಇಂದು (ಸೋಮವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಫೋಟೋಶೂಟ್ ಮಾಡಿಸಿದ್ದು, ತನ್ನ ಸೋಶಿಯಲ್ ಮೀಡಿಯಾ X ಖಾತೆಯಲ್ಲಿ ಹಂಚಿಕೊಂಡಿದೆ.
𝗧𝗲𝗮𝗺𝗺𝗮𝘁𝗲𝘀 𝘄𝗵𝗼 𝘀𝗹𝗮𝘆 𝘁𝗼𝗴𝗲𝘁𝗵𝗲𝗿, 𝘀𝘁𝗮𝘆 𝘁𝗼𝗴𝗲𝘁𝗵𝗲𝗿 🤝🔮
— Royal Challengers Bangalore (@RCBTweets) February 19, 2024
We're spicing up our feed with some #WPL Photoshoot heat 🌶️🔥#PlayBold #SheIsBold #ನಮ್ಮRCB #WPL2024 pic.twitter.com/wG9U9NyZgp
ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನಾ (Smriti Mandhana), ಕನ್ನಡತಿ ಶ್ರೇಯಾಂಕ ಪಾಟೀಲ್, ಸ್ಫೋಟಕ ಆಟಗಾರ್ತಿ ಸೋಫಿ ಡಿವೈನ್ ಸೇರಿದಂತೆ ಅನೇಕರು ಫೋಟೋ ಶೂಟ್‌ನಲ್ಲಿ ಮಿಂಚಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಆರ್‌ಸಿಬಿ ಅಭಿಮಾನಿಗಳು ಜಾಲತಾಣದಲ್ಲಿ ʻಈ ಸಲ ಕಪ್ ನಮ್ದೆʼ ಟ್ರೆಂಡ್ ಶುರು ಮಾಡಿದ್ದಾರೆ
𝘋𝘳𝘪𝘱 𝘴𝘰 𝘳𝘦𝘨𝘢𝘭, 𝘺𝘰𝘶'𝘥 𝘵𝘩𝘪𝘯𝘬 𝘪𝘵'𝘴 𝘪𝘭𝘭𝘦𝘨𝘢𝘭 🫅✨
— Royal Challengers Bangalore (@RCBTweets) February 19, 2024
Skipper Smriti keeps it sharp on and off the field 💯#PlayBold #SheIsBold #ನಮ್ಮRCB #WPL2024 @mandhana_smriti pic.twitter.com/V5SdryIfTn
2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಫೆಬ್ರವರಿ 23 ರಿಂದ ಮಾರ್ಚ್ 13ರ ವರೆಗೆ ಒಟ್ಟು 20 ಲೀಗ್ ಸುತ್ತಿನ ಪಂದ್ಯಗಳು ನಡೆಯಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
Flex so fine, it's got to be Sophie Devine 💪💥#PlayBold #SheIsBold #ನಮ್ಮRCB #WPL2024 @sophdevine77 pic.twitter.com/tWGJo4SIxG
— Royal Challengers Bangalore (@RCBTweets) February 19, 2024
ಕಳೆದ ವರ್ಷ ಮುಂಬೈನ ಬ್ರಬೋರ್ನ್ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಆದ್ರೆ ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ. ಲೀಗ್ ಸುತ್ತಿನ ಬಹುತೇಕ ಪಂದ್ಯಗಳು ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆಯಲಿದೆ.
WPL ನಲ್ಲಿ 5 ಮಹಿಳಾ ತಂಡಗಳು ಇರಲಿದ್ದು, ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಇನ್ನೂ 2 ಮತ್ತು 3ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿದ್ದು, ಗೆದ್ದ ತಂಡ ಫೈನಲ್‌ನಲ್ಲಿ ಸೆಣಸಲಿದೆ.
Most stylish fast bowler vibe check. Kate enters the debate ✨
— Royal Challengers Bangalore (@RCBTweets) February 19, 2024
12th Man Army, doesn't Crossy look best in Red 😏#PlayBold #SheIsBold #ನಮ್ಮRCB #WPL2024 @katecross16 pic.twitter.com/5uVzXEGFQD
███████ 💯%
— Royal Challengers Bangalore (@RCBTweets) February 19, 2024
Super Shrey Slay Game: Updated ✅🦸♀️#PlayBold #SheIsBold #ನಮ್ಮRCB #WPL2024 @shreyanka_patil pic.twitter.com/FIXHdsZPPA
Oh, 𝗚𝗵𝗼𝘀𝗵, these 𝗕𝗶𝘀𝗵𝘁 friends have got their swag on point 👌😉#PlayBold #SheIsBold #ನಮ್ಮRCB #WPL2024 @13richaghosh pic.twitter.com/cwRkRZrX2d
— Royal Challengers Bangalore (@RCBTweets) February 19, 2024