WPL 2024: ಗುಜರಾತ್ ಗೈಂಟ್ಸ್ ವಿರುದ್ಧ ಸೋಲು ಕಂಡ ಆರ್ ಸಿಬಿ ; ಮೂರು ಪಂದ್ಯ ಸೋತರೂ 2 ನೇ ಸ್ಥಾನದಲ್ಲಿ RCB..!
ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇವರು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಕೇವಲ ಒಂದು ಸೋಲು ಕಂಡು ಒಟ್ಟು ಎಂಟು ಅಂಕ ಪಡೆದುಕೊಂಡಿದೆ. ಡೆಲ್ಲಿ ರನ್ರೇಟ್ +1.301 ಆಗಿದೆ.
ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಸ್ಥಾನದಲ್ಲಿದೆ. ಆಡಿರುವ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡು ಆರ್ಸಿಬಿ ಒಟ್ಟು 6 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಬೆಂಗಳೂರಿನ ರನ್ರೇಟ್ +0.038 ಆಗಿದೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿರುವ ಐದು ಪಂದ್ಯಗಳ ಪೈಕಿ ಮೂರು ಗೆಲುವು ಹಾಗೂ ಎರಡು ಪಂದ್ಯದಲ್ಲಿ ಸೋಲುಂಡು 6 ಅಂಕ ಸಂಪಾದಿಸಿದೆ. ಮುಂಬೈ ರನ್ರೇಟ್ +0.018
ಯುಪಿ ವಾರಿಯರ್ಸ್ ತಂಡ ಆರ್ಸಿಬಿ ವಿರುದ್ಧ ಸೋತು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ ಐದು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಮೂರು ಗೆಲುವು ಕಂಡು 4 ಅಂಕ ಪಡೆದುಕೊಂಡಿದೆ. ಯುಪಿ ರನ್ರೇಟ್ -0.073 ಆಗಿದೆ.
ಮಹಿಳಾ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಯಲ್ಲಿ ಗುಜರಾತ್ ಗೈಂಟ್ಸ್ ತಂಡದ ಸ್ಥಿತಿ ಉತ್ತಮವಾಗಿಲ್ಲ. ಆದರೆ, ಕೊನೆಯ ಪಂದ್ಯದಲ್ಲಿ ಜಯಿಸಿದೆ. ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿದ್ದು, ಒಂದು ಜಯ ಸಾಧಿಸಿ 2 ಅಂಕ ಪಡೆದುಕೊಂಡಿದೆ. ಗುಜರಾತ್ -1.275 ರನ್ರೇಟ್ ಹೊಂದಿದೆ.