ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

RCB LOGO: ಐಪಿಎಲ್ ಆರಂಭಕ್ಕೂ ಮುನ್ನ ಲೋಗೋ ಬದಲಿಸಿದ ಆರ್​ಸಿಬಿ..!

Twitter
Facebook
LinkedIn
WhatsApp
RCB LOGO: ಐಪಿಎಲ್ ಆರಂಭಕ್ಕೂ ಮುನ್ನ ಲೋಗೋ ಬದಲಿಸಿದ ಆರ್​ಸಿಬಿ..!

IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಮುಂಬರುವ ಐಪಿಎಲ್​ಗಾಗಿ ತನ್ನ ಲೋಗೋ ವಿನ್ಯಾಸವನ್ನು ಬದಲಿಸಿದೆ. ಈ ಬದಲಾವಣೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿಕೊಂಡಿದೆ. ವಿಶೇಷ ಎಂದರೆ ಆರ್​ಸಿಬಿ ಫ್ರಾಂಚೈಸಿಯು ತನ್ನ ಲೋಗೋವನ್ನು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ನಾಲ್ಕು ಬಾರಿ ಹೊಸ ಲೋಗೋದೊಂದಿಗೆ ಕಣಕ್ಕಿಳಿದಿದೆ. ಇದೀಗ ಐದನೇ ಬಾರಿಗೆ ಲೋಗೋ ಬದಲಿಸಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ.

rcb logo

IPL 2008: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಈ ಲೋಗೋ ವಿನ್ಯಾಸದೊಂದಿಗೆ ಕಣಕ್ಕಿಳಿದಿತ್ತು. ಅಂದು ಆರ್​ಸಿಬಿ ತನ್ನ ಲೋಗೋ ವಿನ್ಯಾಸದಲ್ಲಿ RC (ರಾಯಲ್ ಚಾಲೆಂಜರ್ಸ್) ಯನ್ನು ಎದ್ದು ಕಾಣುವಂತೆ ಚಿತ್ರಿಸಿದ್ದರು. ಅಂದರೆ ಇಲ್ಲಿ ಸಿಂಹದ ಗುರುತಿಕ್ಕಿಂತ ರಾಯಲ್ ಚಾಲೆಂಜರ್ಸ್ ಬರಹಕ್ಕೆ ಪ್ರಾಶಸ್ತ್ಯ ನೀಡಲಾಗಿತ್ತು.

rcb logo 1

IPL 2009-2015: ಐಪಿಎಲ್ 2009 ರಲ್ಲಿ ಆರ್​ಸಿಬಿ ತಂಡವು ಲೋಗೋ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಿತು. ಮೊದಲ ಸೀಸನ್​ನ ಲೋಗೋವನ್ನು ಇಲ್ಲಿ ಮುಂದುವರೆಸಲಾಗಿದ್ದರೂ ಬಣ್ಣಗಳಲ್ಲಿ ಮಾರ್ಪಾಡು ಮಾಡಲಾಗಿತ್ತು. ಅಲ್ಲದೆ ಈ ಲೋಗೋದೊಂದಿಗೆ ಆರ್​ಸಿಬಿ 7 ಸೀಸನ್​ಗಳಲ್ಲಿ ಕಣಕ್ಕಿಳಿದಿರುವುದು ವಿಶೇಷ.

rcb

IPL 2016-2019: ಆರ್​ಸಿಬಿ ತಂಡದ ಲೋಗೋದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದ್ದು 2016 ರಲ್ಲಿ. ಅಂದಿನ ಲೋಗೋದಲ್ಲಿ RC ಬದಲಿಗೆ ಸಿಂಹದ ಚಿತ್ರವನ್ನು ಹೈಲೆಟ್ ಮಾಡಲಾಗಿತ್ತು. ಈ ಲೋಗೋವನ್ನು 2019 ರವರೆಗೆ ಬಳಸಿಕೊಂಡಿತ್ತು.

rcb 2024

IPL 2020-2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಲೋಗೋವನ್ನು ಸಂಪೂರ್ಣವಾಗಿ ಬದಲಿಸಿದ್ದು 2020 ರಲ್ಲಿ. ಈ ಬಾರಿ ಲೋಗೋದಿಂದ RC ಬರಹವನ್ನು ತೆಗೆದುಹಾಕಿದ್ದಲ್ಲದೆ, ಸಿಂಹದ ಗುರುತನ್ನು ಹೈಲೆಟ್ ಮಾಡಿತು. ಈ ಮೂಲಕ ಈ ಹಿಂದಿನ ಮೂರು ಲೋಗೋಗಿಂತ ವಿಭಿನ್ನ ವಿನ್ಯಾಸವನ್ನು ರೂಪಿಸಿತ್ತು. ಅಲ್ಲದೆ ಕಳೆದ ಸೀಸನ್​ವರೆಗೆ ಆರ್​ಸಿಬಿ ಇದೇ ಲೋಗೋದಲ್ಲೇ ಕಣಕ್ಕಿಳಿದಿದೆ.

 
rcb 2024 03

IPL 2024: ರಾಯಲ್ ಚಾಲೆಂಜರ್ಸ್ ಬ್ಯಾಂಗ್​ಲೋರ್ ಈ ಬಾರಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೆಸರಿನೊಂದಿಗೆ ಕಣಕ್ಕಿಳಿಯಲಿದೆ. ಇಲ್ಲಿ ಹೆಸರಿನೊಂದಿಗೆ ಲೋಗೋ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಯಾಗಿದೆ. ಅಂದರೆ ಇದೇ ಮೊದಲ ಬಾರಿಗೆ ಆರ್​ಸಿಬಿ ತನ್ನ ಲೋಗೋದಲ್ಲಿ RCB ಎಂದು ಬರೆದುಕೊಂಡಿದೆ. ಹಾಗೆಯೇ ಈ ಹಿಂದಿನ ಟ್ರೇಡ್ ಮಾರ್ಕ್ ವಿನ್ಯಾಸ ಸಿಂಹ ಘರ್ಜನೆಯನ್ನು ಇಲ್ಲೂ ಕೂಡ ಮುಂದುವರೆಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ