ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

RCB ಯ ಮಿಂಚಿನ ಬೌಲಿಂಗ್ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್ ಗಳ ಭರ್ಜರಿ ಜಯ

Twitter
Facebook
LinkedIn
WhatsApp
Siraj11682229200687

IPL 2023 RR vs RCB: ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 60ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.

ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಆರ್​ಸಿಬಿ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಪವರ್​ಪ್ಲೇನಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಆರ್​ಸಿಬಿ ಆರಂಭಿಕರು ಕಲೆಹಾಕಿದ್ದು ಕೇವಲ 42 ರನ್​ಗಳು ಮಾತ್ರ. ಇದಾದ ಬಳಿಕ 19 ಎಸೆತಗಳಲ್ಲಿ 18 ರನ್​ಗಳಿಸಿದ್ದ ವಿರಾಟ್ ಕೊಹ್ಲಿ ಕ್ಯಾಚ್ ನೀಡಿ ಔಟಾದರು.

ಮತ್ತೊಂದೆಡೆ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ 44 ಎಸೆತಗಳಲ್ಲಿ 55 ರನ್ ಬಾರಿಸಿ ಡುಪ್ಲೆಸಿಸ್ ಔಟಾದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್​ವೆಲ್ 33 ಎಸೆತಗಳಲ್ಲಿ 54 ರನ್ ಚಚ್ಚಿದರು. ಪರಿಣಾಮ ಆರ್​ಸಿಬಿ ತಂಡದ ಮೊತ್ತ 5 ವಿಕೆಟ್ ನಷ್ಟಕ್ಕೆ 171 ಕ್ಕೆ  ಬಂದು ನಿಂತಿತು.

172 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್​ಗೆ ಮೊದಲ ಓವರ್​ನಲ್ಲೇ ಮೊಹಮ್ಮದ್ ಸಿರಾಜ್ ಬಿಗ್ ಶಾಕ್ ನೀಡಿದರು. ಪ್ರಥಮ ಓವರ್​ನ 2ನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ (0) ವಿಕೆಟ್ ಪಡೆದ ಸಿರಾಜ್ ಆರ್​ಸಿಬಿ ತಂಡಕ್ಕೆ ಆರಂಭಿಕ ಯಶಸ್ಸು ತಂದು ಕೊಟ್ಟರು.

ಇದರ ಬೆನ್ನಲ್ಲೇ ವೇಯ್ನ್ ಪಾರ್ನೆಲ್ ಜೋಸ್ ಬಟ್ಲರ್​ (0) ಹಾಗೂ ಸಂಜು ಸ್ಯಾಮ್ಸನ್​ (4) ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಬ್ರೇಸ್​ವೆಲ್ ಪಡಿಕ್ಕಲ್ ಹಾಗೂ ಧ್ರುವ್ ಜುರೇಲ್ ವಿಕೆಟ್ ಕಬಳಿಸಿದರು.

7 ಓವರ್​ನಲ್ಲಿ ಕೇವಲ 31 ರನ್​ಗಳಿಸಿ 6 ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ಸೋಲಿನ ಸುಳಿಗೆ ಸಿಲುಕಿದರು. ಇತ್ತ ಸಂಪೂರ್ಣ ಮೇಲುಗೈ ಸಾಧಿಸಿ ಆರ್​ಸಿಬಿ ಶಿಮ್ರಾನ್ ಹೆಟ್ಮೆಯರ್ (35) ವಿಕೆಟ್ ಪಡೆಯುವ ಮೂಲಕ  ಗೆಲುವನ್ನು  ಖಚಿತಪಡಿಸಿದರು.

ಅಂತಿಮವಾಗಿ 10.3 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೇವಲ 59 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ಆರ್​ಸಿಬಿ ತಂಡವು 112 ರನ್​ಗಳ ಭರ್ಜರಿ ಜಯ ಸಾಧಿಸಿದೆ.ಆರ್​ಸಿಬಿ ಪರ ವೇಯ್ನ್ ಪಾರ್ನೆಲ್​ 3 ಓವರ್​ಗಳಲ್ಲಿ 10 ರನ್ ನೀಡಿ 3 ವಿಕೆಟ್ ಪಡೆದರೆ, ಮೈಕೆಲ್ ಬ್ರೇಸ್​ವೆಲ್, ಕರ್ಣ್​ ಶರ್ಮಾ ತಲಾ 2 ವಿಕೆಟ್ ಹಾಗೂ ಸಿರಾಜ್, ಮ್ಯಾಕ್ಸ್​ವೆಲ್ ತಲಾ 1 ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ