ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

L&T ಫೈನಾನ್ಸ್‌ ಕಂಪನಿಯ ಮೇಲೆ 2.5 ಕೋಟಿ ದಂಡ ವಿಧಿಸಿದ RBI...!

Twitter
Facebook
LinkedIn
WhatsApp
L&T ಫೈನಾನ್ಸ್‌ ಕಂಪನಿಯ ಮೇಲೆ 2.5 ಕೋಟಿ ದಂಡ ವಿಧಿಸಿದ RBI...!

ಹೊಸದಿಲ್ಲಿ: L&T ಫೈನಾನ್ಸ್‌ ಕಂಪನಿಯ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ₹2.50 ಕೋಟಿ ದಂಡವನ್ನು ವಿಧಿಸಿದೆ. ಹಣಕಾಸಿನ ವಹಿವಾಟಿನಲ್ಲಿ ನಿರ್ದಿಷ್ಟ ನಿಬಂಧನೆಗಳ ನ್ಯೂನತೆಗಾಗಿ ಈ ದಂಡ ವಿಧಿಸಲಾಗಿದೆ.

ಮಾರ್ಚ್ 31, 2021 ಮತ್ತು ಮಾರ್ಚ್ 31, 2022ರ ನಡುವಿನ ಸಂಸ್ಥೆಯ ಹಣಕಾಸಿನ ಸ್ಥಿತಿಗತಿಯ ಪರಿಶೀಲನೆಯ ಬಳಿಕ RBI ನಿರ್ಧಾರ ಬಂದಿದೆ. RBI ಈ ಬಗ್ಗೆ L&T Finance Limitedಗೆ ನೋಟಿಸ್ ಜಾರಿ ಮಾಡಿದೆ. RBI ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂಬ ಕಾರಣವನ್ನು ನೀಡುವಂತೆ ಕಂಪನಿಗೆ ಸೂಚಿಸಿದೆ.

ಆರ್‌ಬಿಐ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗಾಗಿ ಇರುವ ನಿರ್ದಿಷ್ಟ ನಿಬಂಧನೆಗಳನ್ನು ಅನುಸರಿಸದ ಕಾರಣ ಈ ದಂಡ ವಿಧಿಸಲಾಗಿದೆ. ಠೇವಣಿ ರಹಿತ ಕಂಪನಿ ಮತ್ತು ಠೇವಣಿ ತೆಗೆದುಕೊಳ್ಳುವ ಕಂಪನಿ (ರಿಸರ್ವ್ ಬ್ಯಾಂಕ್) ನಿರ್ದೇಶನಗಳು- 2016, ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ-1934ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರ್‌ಬಿಐ ದಂಡ ವಿಧಿಸಿದೆ.

ಈ ನಿಯಂತ್ರಣ ಕ್ರಮದಿಂದ ಕಂಪನಿ ಮತ್ತು ಅದರ ಗ್ರಾಹಕರ ನಡುವಿನ ಯಾವುದೇ ವಹಿವಾಟುಗಳು ಅಥವಾ ಒಪ್ಪಂದಗಳ ಮೇಲೆ ಪರಿಣಾಮವಿಲ್ಲ. ಈ ತಪಾಸಣೆಯು ವಿವಿಧ ವರದಿಗಳ ಪರಿಶೀಲನೆ ಮತ್ತು ಪತ್ರವ್ಯವಹಾರವನ್ನು ಒಳಗೊಂಡಿತ್ತು. ತಪಾಸಣೆಯ ಸಮಯದಲ್ಲಿ, ಕಂಪನಿಯು ತನ್ನ ಚಿಲ್ಲರೆ ಸಾಲಗಾರರಿಗೆ ರಿಸ್ಕ್‌ ಫ್ಯಾಕ್ಟರ್‌ ಬಗ್ಗೆ ತಿಳಿಸಲು ವಿಫಲವಾಗಿದೆ ಮತ್ತು ಸಾಲದ ಅರ್ಜಿ ನಮೂನೆಗಳು ಅಥವಾ ಮಂಜೂರಾತಿ ಪತ್ರಗಳಲ್ಲಿ ವಿವಿಧ ಸಾಲಗಾರರ ವರ್ಗಗಳಿಗೆ ಅನ್ವಯಿಸುವ ವಿಭಿನ್ನ ಬಡ್ಡಿದರಗಳ ಬಗ್ಗೆ ವಿವರಿಸಿಲ್ಲ ಎಂದು ಗುರುತಿಸಲಾಗಿದೆ.

ದಂಡದ ಬಡ್ಡಿದರಗಳಲ್ಲಿನ ಬದಲಾವಣೆಗಳನ್ನು ಕಂಪನಿಯು ಸಾಲಗಾರರಿಗೆ ತಿಳಿಸಿಲ್ಲ. ಮಂಜೂರಾತಿ ಸಮಯದಲ್ಲಿ ತಿಳಿಸಿದ್ದಕ್ಕಿಂತ ಹೆಚ್ಚಿನ ವಾರ್ಷಿಕ ಬಡ್ಡಿ ದರವನ್ನು ವಿಧಿಸುವಾಗ ಸಾಲದ ನಿಯಮಗಳು ಮತ್ತು ಷರತ್ತುಗಳಲ್ಲಿನ ಬದಲಾವಣೆಗಳ ಸೂಚನೆ ನೀಡಲು ವಿಫಲವಾಗಿದೆ. ನೋಟೀಸ್‌ಗೆ ಕಂಪನಿಯ ಪ್ರತಿಕ್ರಿಯೆಯನ್ನು ಮೌಲ್ಯಮಾಪನ ಮಾಡಿದ ನಂತರ, RBI ನಿರ್ದೇಶನಗಳನ್ನು ಅನುಸರಿಸದ ಕಾರಣ ದಂಡ ಸಮರ್ಥನೀಯ ಎಂದು RBI ನಿರ್ಧರಿಸಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ