ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಈ ಎರಡು ಬ್ಯಾಂಕ್ ಗಳ ಲೈಸೆನ್ಸ್ ರದ್ದುಗೊಳಿಸಿದ ಆರ್ ಬಿಐ ; ಯಾವ ಬ್ಯಾಂಕ್ ಗಳು? ಇಲ್ಲಿದೆ ವಿವರ

Twitter
Facebook
LinkedIn
WhatsApp
WhatsApp Image 2023 07 12 at 2.34.59 PM

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಮತ್ತೆರಡು ಬ್ಯಾಂಕುಗಳ ಲೈಸನ್ಸ್‌ ರದ್ದುಗೊಳಿಸಿದೆ. ಎರಡು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಆರ್‌ಬಿಐ ಮಂಗಳವಾರ ಹೊರಡಿಸಿದ ಎರಡು ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿದೆ. ಇವುಗಳಲ್ಲಿ ಕರ್ನಾಟಕದ ತುಮಕೂರು ಮೂಲದ ಶ್ರೀ ಶಾರದ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಸತಾರಾದಲ್ಲಿರುವ ಹರಿಹರೇಶ್ವರ ಬ್ಯಾಂಕ್ ಸೇರಿವೆ.

ಎರಡೂ ಬ್ಯಾಂಕುಗಳು ಕಾರ್ಯಾಚರಣೆಯನ್ನು ಮುಂದುವರಿಸಲು ಸಾಕಷ್ಟು ಬಂಡವಾಳವನ್ನು ಹೊಂದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದು, ಈ ಎರಡೂ ಬ್ಯಾಂಕ್‌ಗಳಿಗೆ ಯಾವುದೇ ಗಳಿಕೆಯ ಸಾಮರ್ಥ್ಯವೂ ಉಳಿದಿಲ್ಲ ಎಂದು ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಇವುಗಳ ಪರವಾನಗಿಯನ್ನು ರದ್ದುಗೊಳಿಸುವುದು ಅಗತ್ಯವಾಗಿತ್ತು ಎಂದು ತನ್ನ ತೀರ್ಮಾನವನ್ನು ಸಮರ್ಥಿಸಿಕೊಂಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಗ್ರಾಹಕರ ಹಿತಾಸಕ್ತಿ ಕಾಪಾಡಲು ವಿವಿಧ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತಿರುತ್ತದೆ. ಮತ್ತು ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಸಾಮಾನ್ಯವಾಗಿ ಅನೇಕ ಬ್ಯಾಂಕುಗಳು ವಿವಿಧ ವಿಷಯಗಳಲ್ಲಿ ರಿಸರ್ವ್ ಬ್ಯಾಂಕಿನ ಕ್ರಮದ ವ್ಯಾಪ್ತಿಗೆ ಬರುತ್ತವೆ. ಅದರಂತೆ ಇದೀಗ ಎರಡು ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ಸತಾರಾ ಮೂಲದ ಹರಿಹರೇಶ್ವರ ಸಹಕಾರಿ ಬ್ಯಾಂಕ್‌ನ ವ್ಯವಹಾರವನ್ನು ಮುಚ್ಚುವ ಆದೇಶವು ಜುಲೈ 11, 2023ರಿಂದ ಜಾರಿಗೆ ಬಂದಿದೆ ಎಂದು ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ನ ವಿಮೆ ಇರುವುದರಿಂದ ಬ್ಯಾಂಕ್‌ಗಳಲ್ಲಿರುವ 5 ಲಕ್ಷ ರೂ.ವರೆಗಿನ ಗ್ರಾಹಕರ ಠೇವಣಿ ಸುರಕ್ಷಿತವಾಗಿದೆ. 5 ಲಕ್ಷ ರೂ.ಗಿಂತ ಹೆಚ್ಚಿನ ಹಣವವನ್ನು ಠೇವಣಿ ಇಟ್ಟವರು ಈ ಮಿತಿಗಿಂತ ಮೇಲಿನ ಹಣವನ್ನು ಕಳೆದುಕೊಳ್ಳಲಿದ್ದಾರೆ.

ರಿಸರ್ವ್ ಬ್ಯಾಂಕ್ ಪ್ರಕಾರ ಹರಿಹರೇಶ್ವರ ಸಹಕಾರಿ ಬ್ಯಾಂಕ್‌ನ ಶೇ. 99.96ರಷ್ಟು ಠೇವಣಿದಾರರು ತಮ್ಮ ಒಟ್ಟು ಹಣವನ್ನು ಡಿಐಸಿಜಿಸಿಯಿಂದ ಪಡೆಯಲಿದ್ದಾರೆ. ಈ ಬ್ಯಾಂಕ್‌ನ ಗ್ರಾಹಕರು ಮಾರ್ಚ್ 8, 2023ರವರೆಗೆ ಡಿಐಸಿಜಿಸಿಯಿಂದ 57.24 ಕೋಟಿ ರೂ.ಗಳಷ್ಟು ಹಣವನ್ನು ಪಡೆದಿದ್ದಾರೆ. ಇನ್ನೊಂದೆಡೆ ಕರ್ನಾಟಕ ತುಮಕೂರಿನ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್‌ನ ಸುಮಾರು ಶೇ. 97.82ರಷ್ಟು ಠೇವಣಿದಾರರು ಡಿಐಸಿಜಿಸಿಯಿಂದ ಪೂರ್ಣ ಮರುಪಾವತಿಯನ್ನು ಪಡೆಯಲಿದ್ದಾರೆ. ಜೂನ್ 12, 2023 ರವರೆಗೆ ಡಿಐಸಿಜಿಸಿ ಈ ಬ್ಯಾಂಕ್‌ನ ಗ್ರಾಹಕರಿಗೆ 15.06 ಕೋಟಿ ರೂ.ಗಳನ್ನು ಮರಳಿಸಿದೆ.

ಬ್ಯಾಂಕಿಂಗ್‌ ಚಟುವಟಿಕೆಗಳಿಗೆ ಬ್ರೇಕ್‌

ಲೈಸೆನ್ಸ್ ರದ್ದಾದ ಬಳಿಕ ಎರಡೂ ಬ್ಯಾಂಕ್‌ಗಳಿಗೆ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸದಂತೆ ಪೂರ್ಣ ನಿರ್ಬಂಧ ಹೇರಲಾಗಿದೆ. ಈ ಬ್ಯಾಂಕುಗಳು ಇನ್ನು ಮುಂದೆ ಗ್ರಾಹಕರಿಂದ ಯಾವುದೇ ರೀತಿಯ ಠೇವಣಿಗಳನ್ನು ತೆಗೆದುಕೊಳ್ಳುವಂತಿಲ್ಲ. ಸಂಬಂಧಿತ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯನ್ನು ನಿಲ್ಲಿಸಲು ಆದೇಶ ಹೊರಡಿಸುವಂತೆ ಸಹಕಾರಿ ಆಯುಕ್ತರು ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರಿಗೆ ರಿಸರ್ವ್‌ ಬ್ಯಾಂಕ್‌ ಸೂಚನೆ ನೀಡಿದೆ. ಇಷ್ಟಲ್ಲದೆ ಬ್ಯಾಂಕ್‌ಗಳಿಗೆ ಲಿಕ್ವಿಡೇಟರ್ ನೇಮಕ ಮಾಡುವಂತೆಯೂ ಆಯುಕ್ತರಿಗೆ ಆದೇಶ ನೀಡಿದೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist