ರಶ್ಮಿಕಾ ಮಂದಣ್ಣ ಧರಿಸಿದ್ದ ಸಿಂಪಲ್ ಸೀರೆಯ ಅಸಲಿ ಬೆಲೆ ಕೇಳಿ ಅಭಿಮಾನಿಗಳು ಶಾಕ್!
ಸೌತ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚಿಗೆ ತಮ್ಮ ಸಹಾಯಕನ ಮದುವೆಗೆ ಸಾಕ್ಷಿಯಾಗುವ ಮೂಲಕ ಸುದ್ದಿಯಾಗಿದ್ದರು. ಈಗ ಆ ಮದುವೆಯಲ್ಲಿ ಧರಿಸಿದ ಸೀರೆ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಧರಿಸಿದ ಸಿಂಪಲ್ ಸೀರೆಯ ಬಗ್ಗೆ ಚರ್ಚೆಯಾಗಿದೆ. ಅದರ ಅಸಲಿ ಬೆಲೆ ಕೇಳಿದ್ರೆ ನೀವು ಅಚ್ಚರಿಪಡುತ್ತೀರಾ.
ಸಹಾಯಕ ಸಾಯಿ (Sai) ಮದುವೆ ಹೈದರಾಬಾದ್‌ನಲ್ಲಿ ಸರಳವಾಗಿ ನೆರವೇರಿತು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ರಶ್ಮಿಕಾ ಮಂದಣ್ಣ ಕೂಡ ಹಾಜರಿ ಹಾಕಿದ್ದರು. ಈ ಮದುವೆಯಲ್ಲಿ ನಟಿ ಗೋಲ್ಡನ್ ಬಣ್ಣದ ಸಿಂಪಲ್ ಸೀರೆಯಲ್ಲಿ ಮಿಂಚಿದ್ದರು. ಆ ಸಿಂಪಲ್ ಸೀರೆಗೆ 35 ಸಾವಿರ ರೂ. ಎಂದು ಹೇಳಲಾಗುತ್ತಿದೆ. ಸೀರೆಯ ಅಸಲಿ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.
ರಣ್‌ಬೀರ್ (Ranbir Kapoor) ನಟನೆಯ ಅನಿಮಲ್ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪುಷ್ಪ 2 (Pushpa 2) ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಟೈಗರ್ ಶ್ರಾಪ್, ಧನುಷ್, ವಿಕ್ರಮ್ ಅವರ ಮುಂಬರುವ ಸಿನಿಮಾಗಳಿಗೆ ರಶ್ಮಿಕಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.
ತೆಲುಗು ಬಿಗ್ ಬಾಸ್‌ಗೆ ಕನ್ನಡದ ‘ಅಗ್ನಿಸಾಕ್ಷಿ’ ನಟಿ
ಕನ್ನಡದ ಅಗ್ನಿಸಾಕ್ಷಿ, ರುಕ್ಕು ಸೀರಿಯಲ್‌ನಲ್ಲಿ ನಟಿಸಿದ ಶೋಭಾ ಶೆಟ್ಟಿ (Shobha Shetty) ಇದೀಗ ತೆಲುಗಿನ ಬಿಗ್ ಬಾಸ್ ಮನೆಗೆ (Bigg Boss House) ಕಾಲಿಟ್ಟಿದ್ದಾರೆ. ತೆಲುಗು ಸೀರಿಯಲ್‌ಗಳ ಮೂಲಕ ಗುರುತಿಸಿಕೊಂಡಿದ್ದ ನಟಿ, ಈಗ ನಾಗಾರ್ಜುನ (Nagarjuna) ನಿರೂಪಣೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ತೆಲುಗಿನಲ್ಲಿ ದೊಡ್ಮನೆ ಆಟ ಆರಂಭವಾಗಿದೆ. ಬಿಗ್ ಬಾಸ್ ಸೀಸನ್ 7ಗೆ (Bigg Boss Telugu 7) ಭಾನುವಾರ (ಸೆ.3) ಚಾಲನೆ ಸಿಕ್ಕಿದೆ. ಶಕೀಲಾ, ಕಿರಣ್ ರಾಥೋಡ್ ಇರುವ ಈ ಸೀಸನ್‌ನಲ್ಲಿ ಕನ್ನಡದ ಯುವ ನಟಿ ಶೋಭಾ ಶೆಟ್ಟಿ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ದೊಡ್ಮನೆಗೆ ಗ್ಲ್ಯಾಮರ್ ತುಂಬಲು ಶೋಭಾ ಕೂಡ ಸಾಥ್ ನೀಡಿದ್ದಾರೆ.
ಈ ಶೋ ಶುರುವಾಗುವ ಮುನ್ನವೇ ಶೋಭಾ ಶೆಟ್ಟಿ ಮನೆಗೆ ಹೋಗುತ್ತಾರೆ ಎಂಬ ಅಂತೆ ಕಂತೆ ಸುದ್ದಿಯಿತ್ತು. ಈಗ ಸ್ಪಷ್ಟನೆ ಸಿಕ್ಕಿದೆ. ತೆಲುಗು ಪ್ರೇಕ್ಷಕರನ್ನ ಕನ್ನಡದ ನಟಿ ಗೆದ್ದು ಬೀಗಲಿ ಎಂಬುದೇ ಕನ್ನಡ ಸಿನಿ ಪ್ರೇಮಿಗಳ ಆಶಯ.