ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಚುಂಬನದ ದೃಶ್ಯ: ಕಾಲೆಳೆದ ನೆಟ್ಟಿಗರು!

Twitter
Facebook
LinkedIn
WhatsApp
ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಚುಂಬನದ ದೃಶ್ಯ: ಕಾಲೆಳೆದ ನೆಟ್ಟಿಗರು!

ಹಿಂದಿಯ ಬಹುನಿರೀಕ್ಷಿತ ಅನಿಮಲ್ ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾದಾಗಿನಿಂದಲೂ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಿಕೊಂಡಿದೆ. ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರದ ಟ್ರೇಲರ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಆದರೆ ಟ್ರೇಲರ್‌ಗೂ ಮುನ್ನ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಂಚಲನ ಮೂಡಿಸಿದೆ. ‘ಅನಿಮಲ್’ ಚಿತ್ರದ ಹೊಸ ಪೋಸ್ಟರ್‌ನಲ್ಲಿ 41 ವರ್ಷದ ರಣಬೀರ್ ಕಪೂರ್ 14 ವರ್ಷ ಕಿರಿಯ ರಶ್ಮಿಕಾ ಮಂದಣ್ಣಗೆ ಲಿಪ್ ಕಿಸ್ ಮಾಡುತ್ತಿರುವುದು ಕಂಡುಬಂದಿದೆ.

ಈ ಲಿಪ್ ಕಿಸ್ ಪೋಸ್ಟರ್ ವಾಸ್ತವವಾಗಿ ಅನಿಮಲ್ ಹಾಡು ‘ಹುವಾ ಮೈನ್’ ನಿಂದ ಬಂದಿದೆ. ಇದು ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ. ಅದೇ ಹಾಡಿನ ಪ್ರಚಾರಕ್ಕಾಗಿ ನಿರ್ಮಾಪಕರು ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ವಿಮಾನದ ಕಾಕ್‌ಪಿಟ್‌ನಲ್ಲಿದ್ದು ಪರಸ್ಪರ ಲಿಪ್ ಕಿಸ್ ಮಾಡುತ್ತಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಹಾಡು ಬಿಡುಗಡೆಯಾಗಲಿದೆ.

ಈ ಲಿಪ್ ಕಿಸ್ ಪೋಸ್ಟರ್ ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಹಿಂದೆ ತೆರೆಯ ಮೇಲೆ ಚುಂಬನದ ದೃಶ್ಯಗಳನ್ನು ಮಾಡಿದ್ದಾರೆ. ಆದರೆ ಇದು ರಣಬೀರ್ ಕಪೂರ್ ಜೊತೆಗಿನ ಮೊದಲ ಚಿತ್ರ. ‘ಅನಿಮಲ್’ ಚಿತ್ರದ ಟ್ರೇಲರ್ ನೋಡಿದ ದಿನದಿಂದಲೂ ಅಭಿಮಾನಿಗಳು ರಣಬೀರ್ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿಯನ್ನು ಕೊಂಡಾಡುತ್ತಿದ್ದಾರೆ. 

ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆ ಚುಂಬನದ ದೃಶ್ಯ ಮಾಡಿದ್ದರು. ಎಲ್ಲರ ಕಾಲೆಳಿತದೆ ಕಾಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

‘ಅನಿಮಲ್’ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಡಿಸೆಂಬರ್ 1ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ತೃಪ್ತಿ ದಿಮ್ರಿ ಕೂಡ ನಟಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ