ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ- ಎನ್‍ಐಎಗೆ ಸಿಕ್ಕಿತು ಚೆನ್ನೈ ಲಿಂಕ್
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಬ್ಲಾಸ್ಟ್ ಮಾಡಿ ಹತ್ತಿರ ಒಂದು ತಿಂಗಳಾಗುತ್ತಾ ಇದೆ. ಆದರೆ ಬಾಂಬರ್ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಬಾಂಬ್ ಇಟ್ಟವನು ಯಾರು ಅನ್ನೋದನ್ನ ಇದೀಗ ಎನ್‍ಐಎ ಪತ್ತೆ ಮಾಡಿದೆ.
ಹೌದು, ಈಗಾಗಲೇ 2019ರಿಂದ ಎನ್‍ಐಎ ಅಧಿಕಾರಿಗಳಿಗೆ ಮೋಸ್ಟ್ ವಾಂಟೆಡ್ ಉಗ್ರ ಅನ್ನೋದು ಕ್ಲಿಯರ್ ಆಗಿದೆ. ಹಾಗಾದ್ರೆ ಆ ಮೋಸ್ಟ್ ವಾಂಟೆಡ್ ಉಗ್ರ ಎಲ್ಲಿದ್ದ ಅನ್ನೋ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ರಾಮೇಶ್ವರಂ ಕೆಫೆ ಬಾಂಬರ್ ಜಾಡು ಹಿಡಿದ ಎನ್‍ಐಎಗೆ (NIA) ಚೆನ್ನೈ ಲಿಂಕ್ ಸಿಕ್ಕಿದೆ. ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ ಶಂಕಿತ 2 ತಿಂಗಳು ತಮಿಳುನಾಡಿನಲ್ಲಿ ಉಳಿದಿದ್ದ. ಈ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಕೂಡ ಇದ್ದ. ಹೀಗೆ ಸ್ಫೋಟಕ್ಕೂ ಮುನ್ನ ಓಡಾಡಿದ್ದ ಶಂಕಿತನ ಜಾಡನ್ನು ಎನ್‍ಐಎ ಕಲೆ ಹಾಕಿದೆ. ಈ ವೇಳೆ ಶಂಕಿತ ತಮಿಳುನಾಡಿನಿಂದ ಬಂದಿರುವುದು ಪತ್ತೆಯಾಗಿದೆ.
ಟೋಪಿ ಮೂಲ ಪತ್ತೆ: ಶಂಕಿತ ಧರಿಸಿದ್ದ ಟೊಪಿಯ ಮೂಲವನ್ನು ಕೂಡ ಎನ್‍ಐಎ ಪತ್ತೆ ಹಚ್ಚಿದೆ. ಶಂಕಿತ ಧರಿಸಿದ್ದ ಟೋಪಿಯನ್ನು ತಮಿಳುನಾಡಿನ ಮಾಲ್ ಒಂದರಲ್ಲಿ ಖರೀದಿಸಿದ್ದಾನೆ. ಖರೀದಿ ವೇಳೆ ಮುಖ ಚಹರೆ ಸಮೇತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಈಗಾಗಲೇ ಪತ್ತೆಯಾದ ಕ್ಯಾಪ್‍ನಲ್ಲಿ ಶಂಕಿತನ ಕೂದಲು ಕೂಡ ಸಿಕ್ಕಿದೆ. ಕೂದಲು ಆಧರಿಸಿ ಡಿಎನ್‍ಎ ಟೆಸ್ಟ್ ಸಹ ಒಳಪಡಿಸಿದೆ. ಒಟ್ಟಿನಲ್ಲಿ ಎನ್‍ಐಎ ತನಿಖೆ ವೇಳೆ ಇಬ್ಬರು ಶಿವಮೊಗ್ಗದವರೆಂಬ ಮಾಹಿತಿ ಸಿಕ್ಕಿದೆ.
ಬಾಂಬರ್ `ಉಗ್ರ’ ಹೆಜ್ಜೆ: ಈ ಉಗ್ರ 2019ರಿಂದ ಬೇಕಾಗಿದ್ದಾನೆ. 2023ರ ಮಾರ್ಚ್-ಜುಲೈ ಮಹಾರಾಷ್ಟ್ರದಲ್ಲಿದ್ದ, ಜುಲೈ-ಡಿಸೆಂಬರ್ ವರೆಗೆ ಕರ್ನಾಟಕದಲ್ಲಿದ್ದ, 2024ರ ಜನವರಿಯಲ್ಲಿ ಕೇರಳದಲ್ಲಿದ್ದ, ಫೆಬ್ರವರಿಯಲ್ಲಿ ತಮಿಳುನಾಡಿನಲ್ಲಿದ್ದ, ಮಾರ್ಚ್ ನಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಬಂದಿದ್ದ ಎಂಬ ಮಾಹಿತಿ ಸಿಕ್ಕಿದೆ.