ಪಕ್ಷ ಸೂಚಿಸಿದರೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾಧ್ಯಮದವರೊಂದಿಗೆ ನುಡಿದ ರಮಾನಾಥ ರೈ
Twitter
Facebook
LinkedIn
WhatsApp
ಮಂಗಳೂರು: ಹೈಕಮಾಂಡ್ ನನ್ನನ್ನು ಸ್ಪರ್ಧಿಸಲು ಹೇಳಿದರೆ ನಾನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಬಿ ರಮನಾಥ ರೈ ನುಡಿದಿದ್ದಾರೆ.
ಅವರು ಮಂಗಳೂರಿನ ಅಡ್ಯಾರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ರಾಜ್ಯಮಟ್ಟದ ಸಮಾವೇಶದ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಇ೦ಗಿತವನ್ನು ವ್ಯಕ್ತಪಡಿಸಿದ್ದಾರೆ.
ಕೋಮುವಾದ ಒಂದು ಸೀಸನ್ ಜ್ವರ. ರಾಜಕೀಯ ಜೀವನದಲ್ಲಿ ನಾನು ಸೋಲು ಗೆಲುವುಗಳನ್ನು ಕಂಡಿದ್ದೇನೆ. ಸೋತ ನಂತರ ಗೆದ್ದಿದ್ದೇನೆ ಎಂದವರು ಮಾರ್ಮಿಕವಾಗಿ ನುಡಿದರು. ನಾವು ಕೋಮುವಾದದ ಅಜೆಂಡಾದ ವಿರುದ್ಧ ಸತತವಾಗಿ ಹೋರಾಡುತ್ತಾ ಬಂದಿದ್ದೇವೆ ಎಂದು ರಮನಾಥ ರೈ ನುಡಿದಿದ್ದಾರೆ.