ರಾಖಿ ಸಾವಂತ್ ಜೊತೆ ಡಾನ್ಸ್ ಮಾಡಿ ಎಡವಿ ಬಿದ್ದ ವಿಕ್ಕಿ ಕೌಶಲ್
IIFA 2023 ಸಮಾರಂಭ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೆ ಅಬುಧಾಬಿಯಲ್ಲಿ ನಡೆದ ಐಫಾ ಸಮಾರಂಭ ಅನೇಕ ವಿಚಾರಗಳಿಗೆ ಸುದ್ದಿಯಾಗಿದೆ. ಅದರಲ್ಲೂ ನಟ ವಿಕ್ಕಿ ಕೌಶಲ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಐಫಾ ಸಮಾರಂಭಕ್ಕೂ ಮುನ್ನ ವಿಕ್ಕಿ ಕೌಶಲ್ ಅವರನ್ನು ಸಲ್ಮಾನ್ ಖಾನ್ ಬಾಡಿಗಾರ್ಡ್ಸ್ ತಳ್ಳಿದ ವಿಡಿಯೋ ವೈರಲ್ ಆಗಿತ್ತು. ಇದೀಗ ರಾಖಿ ಸಾವಂತ್ ಜೊತೆ ಡಾನ್ಸ್ ಮಾಡಿ ಎಡವಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಕ್ಕಿ ಕೌಶಲ್ ಸದ್ಯ ‘ಜರಾ ಹಟ್ಕೆ ಜರಾ ಬಚ್ಕೇ’ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದು ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಮತ್ತು ಸಾರಾ ಅಲಿ ಖಾನ್ ಐಫಾ ಸಮಾರಂಭದಲ್ಲೂ ತಮ್ಮ ಸಿನಿಮಾದ ಪ್ರಮೋಷನ್ ಮಾಡಿದ್ದಾರೆ. ಈ ನಡುವೆ ರಾಖಿ ಸಾವಂತ್ ಜೊತೆ ವಿಕ್ಕಿ ಮತ್ತು ಸಾರಾ ಇಬ್ಬರೂ ಡಾನ್ಸ್ ಮಾಡಿದ್ದಾರೆ.
ವೇದಿಕೆ ಮೇಲೆ ವಿಕ್ಕಿ ನಟಿ ಸಾರಾ ಮತ್ತು ರಾಖಿ ಸಾವಂತ್ ಜೊತೆ ಪತ್ನಿ ಕತ್ರಿನಾ ಕೈಫ್ ಅವರ ಫೇಮಸ್ ಸಾಂಗ್ ಶೀಲಾ ಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಾಖಿ ಜೊತೆ ವಿಕ್ಕಿ ಸ್ಟೆಪ್ ಹಾಕಿದರು. ಆದರೆ ಡಾನ್ಸ್ ಮಾಡುತ್ತಾ ರಾಖಿ ಸಾವಂತ್ ಅವರ ಗೌನ್ ಮೇಲೆ ಕಾಲಿಟ್ಟರು. ಡಾನ್ಸ್ ಮಾಡುವ ಭರದಲ್ಲಿ ಗೌನ್ ಮೇಲೆ ಕಾಲಿಟ್ಟಿದ್ದು ಗಮನಿಸದೇ ವಿಕ್ಕಿ ಕೌಶಲ್ ಮುಗ್ಗರಿಸಿ ಬಿದ್ದರು. ರಾಖಿ ಸಾವಂತ್ ಏನಾಯಿತು ಎಂದು ತಿರುಗಿ ನೋಡಿದರು. ಆಗಲೇ ವಿಕ್ಕಿ ಎದ್ದು ನಿಂತಿದ್ದರು. ಪಕ್ಕದಲ್ಲಿದ್ದ ಸಾರಾ ರಾಕಿ ಸಾವಂತ್ ಅವರಿಗೆ ಅಡ್ಡ ನಿಂತರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಮೂವರು ದಿಢೀರ್ ಅಂತ ವೇದಿಕೆ ಮೇಲೆ ಸುಂದರವಾಗಿಯೇ ಹೆಜ್ಜೆ ಹಾಕಿದರು. ಆದರೆ ವಿಕ್ಕಿ ಕೌಶಲ್ ಬ್ಯಾಲೆನ್ಸ್ ತಪ್ಪಿ ಬೀಳುವ ಮೂಲಕ ಅವರ ಡಾನ್ಸ್ ಸಂಭ್ರಮ ಅಲ್ಲಿಗೆ ನಿಂತಿತು. ಈ ವಿಡಿಯೋಗೆ ಅಭಿಮಾನಿಗಳು, ‘ಹಹಹಾ ರಾಖಿ ಅತ್ಯುತ್ತಮವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ‘ವಿಕ್ಕಿ ಕೌಶಲ್‌ಗೆ ಡಾನ್ಸ್ ಮಾಡುವಾಗ ಬೇರೆ ಕಡೆ ಗಮನ ಇರಲ್ಲ’ ಎಂದು ಹೇಳಿದ್ದಾರೆ. ಇದು ತುಂಬಾ ಚೆನ್ನಾಗಿದೆ ಎಂದು ಮತ್ತೋರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ, ‘ರಾಖಿ ಸಾವಂತ್, ವಿಕ್ಕಿ ಕೌಶಲ್ ಅವರನ್ನು ಕೆಡವಿದರು’ ಎಂದು ಹೇಳಿದರು. ಶನಿವಾರ ನಡೆದ ಐಫಾ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ಜೊತೆ ವಿಕ್ಕಿ ಕೌಶಲ್ ಕೂಡ ಹೋಸ್ಟ್ ಮಾಡಿದ್ದಾರೆ.
Trust Rakhi to be extra chaotic ??? But damn those moves Vicky!❤️??#VickyKaushal #SaraAliKhan #RakhiSawant #IIFA2023 pic.twitter.com/PkyrLz4E19
— A ?️ (@scrappinthrough) May 28, 2023
ಸಲ್ಮಾನ್ ಬಾಡಿಗಾರ್ಡ್ಸ್ ತಳ್ಳಿದ ಘಟನೆ
ಐಫಾ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಎಂಟ್ರಿ ಕೊಡುತ್ತಾರೆ. ವಿಕ್ಕಿ ಕೌಶಲ್ ಅಲ್ಲಿದ್ದವರಿಗೆ ಸೆಲ್ಫಿ ನೀಡುತ್ತಿರುತ್ತಾರೆ. ಸಲ್ಮಾನ್ ಖಾನ್ ಜೊತೆ ದೊಡ್ಡ ಗುಂಪು ಬಂದಿದ್ದು ನೋಡಿ ವಿಕ್ಕಿ ಕೌಶಲ್ ಪಕ್ಕಕ್ಕೆ ಸರಿಯುತ್ತಾರೆ. ಬಳಿಕ ಸಲ್ಮಾನ್ ಖಾನ್ ಅವರನ್ನು ಮಾತನಾಡಿಸಲು ಮುಂದಾಗುತ್ತಾರೆ. ಅಷ್ಟೊತ್ತಿಗೆ ಸಲ್ಮಾನ್ ಬಾಡಿಗಾರ್ಡ್ ವಿಕ್ಕಿ ಕೌಶಲ್ ಅವರನ್ನು ಪಕ್ಕಕ್ಕೆ ಸರಿಸಿ ಸಲ್ಮಾನ್ ಖಾನ್‌ಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಕ್ಕಿ ಕೌಶಲ್ ಪ್ರತಿಕ್ರಿಯೆ
ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದ ವಿಕ್ಕಿ, ‘ಅನೇಕ ಬಾರಿ ಕೆಲವು ವಿಷಯಗಳ ಬಗ್ಗೆ ಅನಾವಶ್ಯಕ ಚರ್ಚೆಯಾಗುತ್ತದೆ. ಅದರಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲಾ ವಿಷಯಗಳು ವಿಡಿಯೋದಲ್ಲಿ ತೋರಿಸಿದ ಹಾಗೆ ಇರುವುದಿಲ್ಲ. ಆ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೇಳಿದ್ದರು.