ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಾಜಸ್ಥಾನ : ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಿಎಂ ಭಜನ್‌ಲಾಲ್ ಶರ್ಮಾ ಅವರಿಗೆ ಇಂದು ಡಬಲ್ ಖುಷಿ, ಏನಿದು?

Twitter
Facebook
LinkedIn
WhatsApp
ರಾಜಸ್ಥಾನ : ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಿಎಂ ಭಜನ್‌ಲಾಲ್ ಶರ್ಮಾ ಅವರಿಗೆ ಇಂದು ಡಬಲ್ ಖುಷಿ, ಏನಿದು?

ರಾಜಸ್ಥಾನ: ರಾಜಸ್ಥಾನದ 14ನೇ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಇಂದು ಮಧ್ಯಾಹ್ನ 12.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೈಪುರದ ರಾಮ್ನಿವಾಸ್ ಬಾಗ್‌ನಲ್ಲಿರುವ ಆಲ್ಬರ್ಟ್ ಹಾಲ್ ಮುಂದೆ ಪ್ರಮಾಣವಚನ ಸಮಾರಂಭ ನಡೆಯಲಿದ್ದು ಅದಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಲಾಗಿದೆ.

ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

ಹುಟ್ಟುಹಬ್ಬದಂದೇ ಪ್ರಮಾಣವಚನ:
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಭಜನ್‌ಲಾಲ್ ಶರ್ಮಾ ಅವರಿಗೆ ಇಂದು ಡಬಲ್ ಖುಷಿ, ಯಾಕೆಂದರೆ ಒಂದೆಡೆ ಪ್ರಮಾಣ ವಚನ ಸ್ವೀಕರಿಸುವ ಖುಷಿಯಾದರೆ, ಇನ್ನೊಂದೆಡೆ ಇಂದು ಅವರ ಹುಟ್ಟುಹಬ್ಬ ಇಂದಿನ ಶುಭದಿನದಂದೇ ಪ್ರಮಾಣವಚನ ಕಾರ್ಯಕ್ರಮ ಆಯೋಜಿಸಿದ್ದು ಡಬಲ್ ಖುಷಿ ನೀಡಿದಂತಾಗಿದೆ. ಇದರೊಂದಿದೆ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Parliament: ಒಂದೂವರೆ ವರ್ಷದ ಹಿಂದೆ ಮೈಸೂರಲ್ಲೇ ನಡೆದಿತ್ತು ಸಂಚು

ಹೊಸದಿಲ್ಲಿ: ಬುಧವಾರ ಇಡೀ ದೇಶವನ್ನು ಬೆಚ್ಚಿಬೀಳಿಸಿದ, ಸಂಸತ್‌ ಭವನಕ್ಕೆ ಭದ್ರತ ಲೋಪದ ಕಪ್ಪು ಚುಕ್ಕೆ ತಂದಿಟ್ಟ “ದುಷ್ಕೃತ್ಯ”ಕ್ಕೆ ಒಂದೂವರೆ ವರ್ಷದ ಹಿಂದೆಯೇ ತಯಾರಿ ನಡೆದಿತ್ತು. ಅದೂ ಕರ್ನಾಟಕದ ಮೈಸೂರಿನಲ್ಲಿ!

ಹೌದು, ಬಂಧಿತರಾದ ಐವರು ಆರೋಪಿಗಳ ವಿಚಾರಣೆ ವೇಳೆ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸದನದೊಳಗೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು, ಸ್ಮೋಕ್‌ ಬಾಂಬ್‌ ಸಿಡಿಸಿದ ಪ್ರಕರಣವು ಇಂದು ನಿನ್ನೆ ನಡೆದ ಸಂಚು ಅಲ್ಲ. ಸುಮಾರು ಒಂದೂವರೆ ವರ್ಷದ ಹಿಂದೆಯೇ ಎಲ್ಲ 6 ಆರೋಪಿಗಳೂ ಮೈಸೂರಿನಲ್ಲಿ ಭೇಟಿಯಾಗಿ, ಈ ಕುರಿತು ಚರ್ಚೆ ನಡೆಸಿದ್ದರು. ಇವರೆಲ್ಲರೂ “ಭಗತ್‌ಸಿಂಗ್‌ ಫ್ಯಾನ್‌ ಕ್ಲಬ್‌’ ಎಂಬ ಫೇಸ್‌ಬುಕ್‌ ಪೇಜ್‌ನ ಭಾಗವಾಗಿದ್ದರು. 9 ತಿಂಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಮತ್ತೆ ಭೇಟಿಯಾಗಿದ್ದ ಆರೋಪಿ ಗಳು 2ನೇ ಸುತ್ತಿನ ಮಾತುಕತೆ ನಡೆಸಿ, ಯೋಜನೆ ಅಂತಿಮಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ಮನೋರಂಜನ್‌, ಉ. ಪ್ರದೇಶದ ಸಾಗರ್‌ ಶರ್ಮ, ಮಹಾರಾಷ್ಟ್ರದ ಅಮೋಲ್‌ ಶಿಂಧೆ, ಹರಿಯಾಣದ ನೀಲಂ ದೇವಿ ವಿರುದ್ಧ ಪೊಲೀಸರು ಭಯೋತ್ಪಾದನೆ ಆರೋಪ ಹೊರಿಸಿದ್ದಾರೆ.

ವಿಚಾರಣೆಯಿಂದ ತಿಳಿದುಬಂದದ್ದೇನು?
– ಭಗತ್‌ ಸಿಂಗ್‌ ಫ್ಯಾನ್‌ ಕ್ಲಬ್‌ ಫೇಸ್‌ಬುಕ್‌ ಪೇಜ್‌ ಮೂಲಕ ಆರೋಪಿಗಳು ಪರಸ್ಪರ ಸಂಪರ್ಕ.
– ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಆರೋಪಿಗಳ ಮೊದಲ ಭೇಟಿ; ಸಂಚಿನ ಬಗ್ಗೆ ಚರ್ಚೆ.
– 9 ತಿಂಗಳ ಹಿಂದೆ ಚಂಡೀಗಢದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮತ್ತೂಂದು ಸುತ್ತಿನ ಮಾತುಕತೆ
– ಈ ವರ್ಷದ ಜುಲೈ ತಿಂಗಳಿನಲ್ಲಿ ಸಂಸತ್‌ ಪ್ರವೇಶಿಸಲು ಆರೋಪಿ ಸಾಗರ್‌ ನಡೆಸಿದ ಯತ್ನ ವಿಫ‌ಲ.
– ಸಂಸತ್‌ ಭವನದ ಹೊರಗಿನಿಂದಲೇ ಭದ್ರತ ತಪಾಸಣೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದ್ದ ಸಾಗರ್‌.
– ದಿಲ್ಲಿ ತಲುಪಿ, ಗುರುಗ್ರಾಮದಲ್ಲಿ ತಂಗಿದ್ದ ಆರೋಪಿಗಳು.
– ಇಂಡಿಯಾ ಗೇಟ್‌ ಸಮೀಪ ಪರಸ್ಪರ ಗ್ಯಾಸ್‌ ಕ್ಯಾನಿಸ್ಟರ್‌ಗಳ ಹಂಚಿಕೆ.
– ಮಹಾರಾಷ್ಟ್ರದಿಂದ ಕ್ಯಾನಿಸ್ಟರ್‌ಗಳನ್ನು ತಂದಿದ್ದ ಅಮೋಲ್‌ ಶಿಂಧೆ.
– ಸಂಸತ್ತಿನೊಳಗೆ ಪ್ರವೇಶಿಸಿದ್ದ ಸಾಗರ್‌, ಮನೋರಂಜನ್‌.
– ಹೊರಗೆ ಉಳಿದು ಪ್ರತಿಭಟನೆಗೆ ನಿರ್ಧರಿಸಿದ ನೀಲಂ, ಶಿಂಧೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist