Rain Weather: ಮಲೆನಾಡಿನಲ್ಲಿ ತಂಪೆರೆದ ಮಳೆರಾಯ; ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಸುಸ್ತಾದ ಜನ.!
ಇದು ಈ ಬಾರಿ ಸುರಿದ ವರ್ಷದ ಮೊದಲ ಮಳೆಯಾಗಿದ್ದು, ಮೊದಲ ಮಳೆಯೇ ದೊಡ್ಡ ಪ್ರಮಾಣದಲ್ಲಿ ಸುರಿದಿದೆ. ಒಂದೇ ಗಂಟೆಗೆ ಸುಮಾರು 3.84 ಸೆಂ.ಮೀ ಮಳೆಯಾಗಿದೆ.
ಭಾರಿ ಮಳೆ ನಿರೀಕ್ಷೆಯಲ್ಲಿ ಕರ್ನಾಟಕದ ಜನ: ಹವಾಮಾನ ಪರಿಸ್ಥಿತಿ ಹೇಗಿದೆ?
ಮುಂಗಾರು ಮಳೆ ಕೈಕೊಟ್ಟ ಕಾರಣಕ್ಕೆ ಕರ್ನಾಟಕ 2023ರಲ್ಲಿ ಭಾರಿ ಸಮಸ್ಯೆಗೆ ಸಿಲುಕಿತ್ತು. ಹೀಗಾಗಿಯೇ 2024ರ ಬೇಸಿಗೆ ಆರಂಭಕ್ಕೂ ಮೊದಲೇ ದೊಡ್ಡ ತಲೆನೋವು ಶುರುವಾಗಿದ್ದು, ಕುಡಿಯುವ ನೀರು ಒದಗಿಸಲು ಸರ್ಕಾರ ಕೂಡ ಪರದಾಡುತ್ತಿದೆ. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಶುರುವಾಗಿದೆ, ಎಂಬ ಆರೋಪವೂ ಕೇಳಿಬರುತ್ತಿದೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಒಂದೇ ಒಂದು ದೊಡ್ಡ ಮಳೆ ಬಿದ್ದರೆ ಸಾಕು, ಎಲ್ಲಾ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂಬ ನಿರೀಕ್ಷೆ ಇದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರವು ಸೇರಿ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಭಾರಿ ಬಿಸಿಲು ಮುಂದುವರಿಯುವ ಸಾಧ್ಯತೆ ಇದೆ.
ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಆದ್ರೆ ಈಗ ಮತ್ತೆ ಮಳೆ ಶುರುವಾಗುತ್ತಿದೆ ದೇಶದ ಹಲವು ರಾಜ್ಯದಲ್ಲಿ ಮಳೆ ಹಾಗೂ ಆಲಿಕಲ್ಲು ಬೀಳಲಿದೆ ಎನ್ನಲಾಗಿದೆ. ಇದರ ಜೊತೆಗೆ ಕರ್ನಾಟಕದಲ್ಲಿ, ಕನ್ನಡಿಗರ ನೆಲವೂ ಮಳೆ ಕಾರಣ ಒದ್ದೆಯಾಗಲಿದೆ ಉತ್ತಮ ಮಳೆ ಬೀಳುತ್ತೆ ಅಂತ ರೈತರು ಕಾಯುತ್ತಿದ್ದಾರೆ. ಹಾಗೇ ಗ್ರಾಮೀಣ ಭಾಗದಲ್ಲಿ ಇಂತಹ ಸಮಯದಲ್ಲಿ ಮಳೆ ಬಿದ್ರೆ ಕುಡಿಯುವ ನೀರಿಗೆ ಎದುರಾದ ಸಮಸ್ಯೆ ಸರಿಹೋಗಲಿದೆ. ಉತ್ತರ ಕರ್ನಾಟಕ & ಮೈಸೂರು ಕರ್ನಾಟಕ ಭಾಗದ ಜನರು ಇದೀಗ, ಭಾರಿ ಮಳೆ ಕೊರತೆ ಕಾರಣ ನಲುಗಿ ಹೋಗಿದ್ದಾರೆ. ಹಳ್ಳಿಗಳಲ್ಲಿ ಇದೀಗ, ನೀರು ಪಡೆಯುವುದೇ ದೊಡ್ಡ ಸಾಹಸ ಆಗಿದೆ. ಹೀಗಾಗಿ ಪ್ರತಿಯೊಬ್ಬರು ಮಳೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ ಆದರೆ ವರುಣ ದೇವ ಯಾವಾಗ ಕರುಣೆ ತೋರಿಸುತ್ತಾನೋ ಗೊತ್ತಿಲ್ಲ.