ಭಾನುವಾರ, ಜೂನ್ 2, 2024
ಬೆಳ್ತಂಗಡಿ: ಬೈಕಿಗೆ ಡಿಕ್ಕಿ ಹೊಡೆದ ಲಾರಿ; ಬೈಕ್ ಸವಾರ ಸಾವು.!-ಇಂಗ್ಲೆಂಡ್ನಿಂದ 1 ಲಕ್ಷ ಕಿಲೋಗ್ರಾಂಗಳಷ್ಟು ಚಿನ್ನ ಭಾರತಕ್ಕೆ ಮರಳಿ ತಂದ ಭಾರತ; ಖಜಾನೆಗೆ ರವಾನಿಸಿದ ಆರ್ಬಿಐ.!-ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ-ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಇಳಿಕೆ..!-ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸಲು ಜೂನ್ 12 ರವರೆಗೆ ಅವಕಾಶ ನೀಡಿದ ಹೈಕೋರ್ಟ್-ಸುಮಲತಾ ಅಂಬರೀಶ್ ಗೆ ವಿಧಾನ ಪರಿಷತ್‌ ಟಿಕೆಟ್ ಬಹುತೇಕ ಫಿಕ್ಸ್?-Pears: ಪಿಯರ್ಸ್ ಹಣ್ಣು ಮಾರುಕಟ್ಟೆಯಲ್ಲಿ ಎಷ್ಟು ಫೇಮಸೋ ಅಷ್ಟೇ ಆರೋಗ್ಯಕ್ಕೂ; ಇಲ್ಲಿದೆ ಮಾಹಿತಿ-ಗೃಹ ಸಚಿವ ಅಮಿತ್‌ ಶಾ ಪತ್ನಿ ಸೋನಲ್‌ ಶಾ ಜೊತೆಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ-ಗುದನಾಳದಲ್ಲಿ ಬರೋಬ್ಬರಿ 1kg ಚಿನ್ನ ಬಚ್ಚಿಟ್ಟ ಗಗನಸಖಿ!-ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶುಭ್​ಮನ್ ಗಿಲ್​ ಮತ್ತು ಧ್ರುವ್​ ಜುರೇಲ್​ ರನ್ನು ಹೊಗಳಿದ ರಾಹುಲ್ ದ್ರಾವಿಡ್

Twitter
Facebook
LinkedIn
WhatsApp
ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಮ್ಮದ್ ಶಮಿ; ಫೋಟೋ ಮೂಲಕ ಟ್ವೀಟರ್ ನಲ್ಲಿ ಪೋಸ್ಟ್..!

ಭಾರತ ತಂಡ ಇಂಗ್ಲೆಂಡ್​ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 3-1ರಿಂದ ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಲ್ಲದೇ 4ನೇ ದಿನದ ಒಂದು ಹಂತದಲ್ಲಿ ಭಾರತ ಸೋಲಿನ ಸನಿಹಕ್ಕೆ ಬಂದು ತಲುಪಿತ್ತು. ಆದರೆ ಯುವ ಆಟಗಹಾರರಾದ ಧ್ರುವ್ ಜುರೇಲ್​ ಮತ್ತು ಶುಭ್​ಮನ್ ಗಿಲ್​ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನು, 192 ರನ್‌ಗಳನ್ನು ಬೆನ್ನಟ್ಟಿದ ಭಾರತವು ರಾಂಚಿಯ ಪಿಚ್‌ನಲ್ಲಿ 84/1 ವಿಕೆಟ್​ ನಿಂದ ಆರಂಭವಾಗಿ 120 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು. ಮೊದಲು ಶುಭಮನ್ ಗಿಲ್ ಮತ್ತು ಧ್ರುವ್ ಜುರೆಲ್ ಆರನೇ ವಿಕೆಟ್‌ಗೆ 72 ರನ್‌ಗಳ ಅಜೇಯ ಪಾಲುದಾರಿಕೆಯೊಂದಿಗೆ ತಂಡವನ್ನು ಅಂತಿಮವಾಗಿ ಗೆಲುವಿನ ದಡ ಸೇರಿಸಿತು. ಇದು ದ್ರಾವಿಡ್ ಸಂತಸಕ್ಕೂ ಕಾರಣವಾಗಿದೆ.

ಸೋತರೂ, ಗೆದ್ದರೂ ಹೆಚ್ಚಾಗಿ ಸಂಭ್ರಮಿಸದೇ ಶಾಂತವಾಗಿರುವ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 4ನೇ ಟೆಸ್ಟ್​ ಪಂದ್ಯ ಗೆಲ್ಲುತ್ತಿದ್ದದಂತೆ ಡ್ರೆಸ್ಸಿಂಗ್​ ರೂಂ ನಲ್ಲಿ ಎದ್ದು ನಿಂತು ಸಂಭ್ರಮಿಸಿದರು. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತದನಂತರ ಡ್ರೆಸ್ಸಿಂಗ್​ ರೂಮ್​ನಿಂದ ಹೊರಬಂದ ದ್ರಾವಿಡ್​ ಸಂತೋಷದಿಂದ ತಮ್ಮ ಶಿಷ್ಯರನ್ನು ಪ್ರೀತಿಯನ್ನು ತಬ್ಬಿಕೊಂಡು ಅಭಿನಂದಿಸಿದರು.

ದ್ರಾವಿಡ್ ಜುರೆಲ್ ಮತ್ತು ಗಿಲ್ ಅವರನ್ನು ಅಪ್ಪಿಕೊಳ್ಳುತ್ತಿರುವುದನ್ನು ನೋಡಿದ ಅಭಿಮಾನಿಗಳು ಗುರುವಿಗೆ ತಕ್ಕ ಶಿಷ್ಯರು ಸಿಕ್ಕದ್ದಾರೆ. ದ್ರಾವಿಡ್​ ಸಾಕಷ್ಟು ಸಂತೋಷದಿಂದ ಕೂಡಿದ್ದಾರೆ ಎಂದೆಲ್ಲಾ ಕಾಮೆಂಟ್​ ಮಾಡುತ್ತಿದ್ದು, ಅಭಿಮಾನಿಗಳು ಟೀಂ ಇಂಡಿಯಾಗೆ ಅಭಿನಂದೆನಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇನ್ನು, ದ್ರಾವಿಡ್​​ ಸಂತೋಷದಿಂದ ಡ್ರೆಸ್ಸಿಂಗ್​ ರೂಮನ್​ ನಲ್ಲಿ ಶುಭ್​ಮನ್ ಗಿಲ್​ ಮತ್ತು ಧ್ರುವ್​ ಜುರೇಲ್​ ಅವರನ್ನು ಹೊಗಳಿದ್ದಾರೆ. ಇಬ್ಬರೂ ಸಹ ಉತ್ತಮವಾಗಿ ಆಡಿದ್ದೀರಿ ಎಂದು ಹೇಳಿದ್ದಲ್ಲದೇ ಒಂದು ವಿಶೇಷ ಸಂದೇಶ ನೀಡಿದ್ದನ್ನು ಶುಭ್​ಮನ್ ಗಿಲ್​ ತಮ್ಮ ಇನ್ಸ್ಟಾಗ್ರಾಂ ಫೋಸ್ಟ್​ ಮೂಲಕ ಬಹಿರಂಗಪಡಿಸಿದ್ದಾರೆ.

ನೀವು ಇಲ್ಲದಿದ್ದರೆ, ನಂತರ ಯಾರು? ಈಗ ಇಲ್ಲದಿದ್ದರೆ ಇನ್ನು ಯಾವಾಗ? ಎಂದು ಹೇಳುವ ಮೂಲಕ ದ್ರಾವಿಡ್​​ ಯುವ ಆಟಗಾರರಿಗೆ ಭಾವನಾತ್ಮಕವಾಗಿ ಸಂದೇಶ ನೀಡಿದ್ದಾರೆ ಎಂದು ಗಿಲ್​ ಪೋಸ್ಟ್​ ಮೂಲಕ ತಿಳಿಸಿದ್ದಾರೆ. ಒಟ್ಟಾರೆಯಾಗಿ ಈ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ ಅಂಕಪಟ್ಟಿಯಲ್ಲಿಯೂ 2ನೇ ಸ್ಥಾನವನ್ನು ಇನ್ನಷ್ಟು ದೃಡವಾಗಿಸಿದೆ.

ಈ ಮೂಲಕ ಭಾರತ ತಂಡ ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿಯನ್ನು ಗೆದ್ದಂತಾಗಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡವು ತವರು ನೆಲದಲ್ಲಿ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಜಯಗಳ ದಾಖಲೆಯನ್ನು ವಿಸ್ತರಿಸಿದೆ. ಯಾವುದೇ ಬೇರೆ ತಂಡ ಇಷ್ಟು ದೊಡ್ಡಮಟ್ಟದಲ್ಲಿ ತವರಿನಲ್ಲಿಯೂ ಟೆಸ್ಟ್​ ಸರಣಿ ಗೆಲುವು ದಾಖಲಿಸಲಿಲ್ಲ.

ರೋಹಿತ್ ಶರ್ಮಾ ಇಂಗ್ಲೆಂಡ್‌ನ ಭಾಝ್​ಬಾಲ್​ ಯುಗದಲ್ಲಿ ಆಂಗ್ಲರ ವಿರುದ್ಧ ಜಯಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈವರೆಗೂ ಯಾವುದೇ ವಿಶ್ವದ ಕ್ರಿಕೆಟ್ ತಂಡದ ನಾಯಕನೂ ಸಹ ಭಾಝ್​ಬಾಲ್​ ವಿರುದ್ಧ ಸರಣಿ ಜಯ ದಾಖಲಿಸಿರಲಿಲ್ಲ. ಹೌದು, ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್​ ತಂಡ ವಿಶ್ವ ಟೆಸ್ಟ್​ ಕ್ರಿಕೆಟ್​ ನಲ್ಲಿ ಹೊಸ ಮಾದರಿಯನ್ನು ಪರಿಚಯಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ