Raghunath Shrinivas kamath: ಮೂಲ್ಕಿಯ ರಘುನಾಥ್ ಕಾಮತ್ ರವರ ನಾಚ್ಯುರಲ್ ಐಸ್ ಕ್ರಿಂ ನ ಯಶಸ್ಸಿನ ಸ್ಟೋರಿ..!
ಶ್ರೀ ರಘುನಾಥ್ ಶ್ರೀನಿವಾಸ್ ಕಾಮತ್(Raghunath Shrinivas kamath founder of Naturals Ice Cream) ರವರು ಹುಟ್ಟಿದ್ದು 1954 ಮಲ್ಕಿಯಲ್ಲಿ. ಇವರು ಹುಟ್ಟಿದ್ದು ಬಡ ಕುಟುಂಬದಲ್ಲಿ. ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ಶ್ರೀ ರಘುನಾಥ್ ರವರು ಎಸ್ಎಸ್ಎಲ್ ಸಿ ಯಲ್ಲಿ ಎರಡು ಬಾರಿ ಫೇಲಾಗಿದ್ದರು. ತದನಂತರ ತಂದೆಯ ಜೊತೆ ಇವರು ಹಣ್ಣಿನ ವ್ಯಾಪಾರ ನಡೆಸಲು ಸಹಾಯ ಮಾಡುತ್ತಿದ್ದರು.
ಶ್ರೀ ರಘುನಾಥ್ ಶ್ರೀನಿವಾಸ್ ಕಾಮತ್(Raghunath Shrinivas kamath) ಇವರು ಹಣ್ಣಿನ ವ್ಯಾಪಾರದಲ್ಲಿ ತಂದೆಯೊಂದಿಗೆ ತುಂಬಾ ಅನುಭವ ಪಡೆದರು. ಬಳಿಕ ಇವರು ಹುಟ್ಟುರಿಂದ ಮುಂಬೈ ಗೆ ಅನ್ನನ ಹೋಟೆಲ್ ಗೆ ಕೆಲಸಕ್ಕೆಂದು ತೆರಳಿದರು. ಅಲ್ಲಿ ಜನರು ಐಸ್ ಕ್ರೀಮ್(Ice Cream) ನ್ನು ಹೆಚ್ಚು ತಿನ್ನುತ್ತಿರುವುದನ್ನು ನೋಡಿ ಹಣ್ಣಿನಿಂದ ಐಸ್ ಕ್ರೀಂ(Ice Cream) ಮಾಡಿ ಮಾರಾಟ ಮಾಡಬೇಕೆಂದು ಆಸೆ ಹುಟ್ಟಿತು. ಬಳಿಕ ಈ ಐಡಿಯಾ ವನ್ನು ಇವರು ತನ್ನ ಅಣ್ಣನ ಜೊತೆ ಹೇಳಿದಾಗ ಅವರು ಅದನ್ನು ತಿರಸ್ಕರಿಸಿದರು. ನಂತರ ಅಣ್ಣನ ಹೋಟೆಲ್ ಬಿಟ್ಟು 1984 ರಲ್ಲಿ ಇವರು ತಮ್ಮದೇ ನಾಚ್ಯುರಲ್ ಐಸ್ ಕ್ರೀಂ(Naturals Ice Cream) ಸಂಸ್ಥೆಯನ್ನು ಮುಂಬೈ ನಲ್ಲಿ ಆರಂಭಿಸಿದರು.
ಇವರ ಉದ್ದೇಶ ಒಂದೇ ಅಗಿತ್ತು, ಎಲ್ಲಾ ಬಗೆಯ ಹಣ್ಣಿನ ಐಸ್ ಕ್ರಿಂ(Ice Cream) ನ್ನು ತಯಾರಿಸುವುದು. ಇವರ ಈ ರೀತಿಯ ಐಸ್ ಕ್ರೀಂ(Ice Cream) ಹಲವು ಜನರಿಗೆ ಇಷ್ಟವಾಯಿತು. ಇವರ ಹೋಟೆಲ್ ರಸ್ತೆ ಬದಿ ಇದ್ದುದರಿಂದ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿತ್ತು. ನಂತರ 5 ಕಡೆಗಳಲ್ಲಿ ಇವರು ಶಾಖೆಯನ್ನು ವಿಸ್ತರಿಸಿದರು. ಇಂದಿಗೆ 165 ನಗರಗಳಲ್ಲಿ ನಾಚ್ಯುರಲ್ ಐಸ್ ಕ್ರೀಂ(Naturals Ice Cream) ಪಾರ್ಲರ್ ವಿಸ್ತರಿಸಿದೆ. 20 ಬಗೆಯ ಐಸ್ ಕ್ರೀಂ(Ice Cream) ನೊಂದಿಗೆ ವಾರ್ಷಿಕ 300 ಕೋಟಿ ವಹಿವಾಟು ನಡೆಯುತ್ತಿದೆ.