ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Rabies: 40 ಜನರಿಗೆ ಕಚ್ಚಿ ಸಾವನ್ನಪ್ಪಿದ ರೇಬಿಸ್ ಸೋಂಕಿತ ಮಗು, ಆತಂಕದಲ್ಲಿ ಗ್ರಾಮಸ್ಥರು!

Twitter
Facebook
LinkedIn
WhatsApp
rabies 1

ಜಲೌನ್ (ಉತ್ತರ ಪ್ರದೇಶ): ಕೆಲವು ವಾರಗಳ ಹಿಂದೆ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಗ್ರಾಮವೊಂದರ ಎರಡೂವರೆ ವರ್ಷಗಳ ಹೆಣ್ಣು ಮಗು ರೇಬಿಸ್ (Rabies) ಸೋಂಕಿಗೆ ತುತ್ತಾಗಿ ಸೋಮವಾರ ಮೃತಪಟ್ಟಿದೆ. ಈ ಮಗುವಿನ ಸಾವು ಇಡೀ ಗ್ರಾಮಕ್ಕೇ ಆತಂಕ ತಂದೊಡ್ಡಿದೆ! ಏಕೆಂದರೆ, ಈ ಮಗು ಸಾವನ್ನಪ್ಪುವ ಮುನ್ನ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ. ಇದೀಗ ಎಲ್ಲರಿಗೂ ರೇಬಿಸ್ (Rabies) ಸೋಂಕು ತಗುಲಿದೆ.

ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಕೊಂಚ್ ತಾಲ್ಲೂಕಿನ ಕ್ಯೋಲಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗು ತನ್ನ ತಾಯಿಯ ಜೊತೆ ಸೋದರ ಮಾವನ ಮನೆಯಲ್ಲಿ ಇತ್ತು. ಈ ವೇಳೆ ಮಗುವಿಗೆ ಬೀದಿ ನಾಯಿಗಳು ಕಡಿದಿದ್ದವು. ಹೀಗಾಗಿ, ಮಗು ರೇಬಿಸ್ ಸೋಂಕಿಗೆ ತುತ್ತಾಗಿತ್ತು.

ಮಗುವಿಗೆ ಬೀದಿ ನಾಯಿಗಳು ಕಡಿದ ಬಳಿಕ ರೇಬಿಸ್ ಸೋಂಕು ತಗುಲಿತ್ತು. ಆದರೆ, ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರಲಿಲ್ಲ. ಈ ಮಗು ಗ್ರಾಮದ 40 ಜನರಿಗೆ ಕಳೆದ ಮೂರು ವಾರಗಳ ಅವಧಿಯಲ್ಲಿ ಕಚ್ಚಿತ್ತು. ಇದೀಗ ಎಲ್ಲರೂ ರೇಬಿಸ್ ಸೋಂಕಿಗೆ ಒಳಗಾಗಿದ್ದಾರೆ. ಇನ್ನು ಈ ಬಾಲಕಿಗೆ ಕಡಿದ ಬಳಿಕ ರೇಬಿಸ್ ಸೋಂಕಿತ ಬೀದಿ ನಾಯಿ ಕೂಡಾ ಸಾವನ್ನಪ್ಪಿತ್ತು.

ಮಗುವಿಗೆ ನಾಯಿ ಕಡಿದ ಬಳಿಕ ಪೋಷಕರು ಗ್ರಾಮದ ನಾಟಿ ವೈದ್ಯರ ಬಳಿ ಕರೆದೊಯ್ದಿದ್ದರು. ಯಾವುದೇ ವೃತ್ತಿಪರ ಪದವೀಧರ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿರಲಿಲ್ಲ. ಮಗುವನ್ನು ಗ್ರಾಮಕ್ಕೆ ವಾಪಸ್ ಕರೆ ತಂದ ಬಳಿಕ ಮಗುವಿನ ದೇಹದಲ್ಲಿ ರೇಬಿಸ್ ರೋಗದ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಮಗುವಿನ ಪೋಷಕರು ಮಾತ್ರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರೇಬಿಸ್ ರೋಗದ ಲಕ್ಷಣ ಹೊಂದಿದ್ದ ಮಗುವು ತನ್ನ ಬಳಿ ಬಂದ ಎಲ್ಲರಿಗೂ ಉಗುರಿನಿಂದ ಪರಚುತ್ತಿತ್ತು. ಸಿಕ್ಕ ಸಿಕ್ಕ ಕಡೆ ಕಚ್ಚುತ್ತಿತ್ತು. ಮಗುವಿನ ವರ್ತನೆಯಲ್ಲಿ ವಿಪರೀತ ಬದಲಾವಣೆ ಕಂಡು ಬಂದಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಕಳೆದ ಶುಕ್ರವಾರ ಮಗು ಕುಸಿದು ಬಿದ್ದಾಗ ಮಗುವಿನ ಹೆತ್ತವರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಜಿಲ್ಲಾಸ್ಪತ್ರೆ ವೈದ್ಯರು ಕೂಡಲೇ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ, ಕುಟುಂಬಸ್ಥರು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಮಗು ಸಾವನ್ನಪ್ಪಿದೆ.

ಮಗು ಕಚ್ಚಿದ ಪರಿಣಾಮ ಇದೀಗ ಕ್ಯೋಲಾರಿ ಗ್ರಾಮದ 40 ಜನರು ರೇಬಿಸ್ ಸೋಂಕಿತರಾಗಿದ್ದಾರೆ. ಎಲ್ಲರಿಗೂ ರೇಬಿಸ್ ಸೋಂಕು ನಿರೋಧಕ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ದಿನೇಶ್ ಬರ್ದಾರಿಯಾ ಅವರು ಹೇಳಿದ್ದಾರೆ. ರೇಬಿಸ್ ಸೋಂಕಿನ ವಿರುದ್ದ ಚಿಕಿತ್ಸೆ ನೀಡಲು ಸೂಕ್ತ ವೈದ್ಯಕೀಯ ವ್ಯವಸ್ಥೆ ಲಭ್ಯವಿದೆ. ಹೀಗಾಗಿ, ಯಾರೂ ಆತಂಕಕ್ಕೆ ಒಳಗಾಗೋದು ಬೇಡ ಎಂದು ವೈದ್ಯರು ಅಭಯ ಹೇಳಿದ್ದಾರೆ. ಆದರೂ ಗ್ರಾಮಸ್ಥರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

ಮೈಲಿಗೆ ಅಂತ ಬಾಣಂತಿ, ಮಗುವನ್ನು ಊರ ಹೊರಗಿಟ್ಟ ಪ್ರಕರಣ – ವಿಪರೀತ ಶೀತದಿಂದ ಮಗು ಸಾವು

ತುಮಕೂರು: ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗಿಟ್ಟಿದ್ದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ದಾರುಣ ಘಟನೆ ಗೊಲ್ಲರಹಟ್ಟಿಯಲ್ಲಿ (Gollarahatti) ನಡೆದಿದೆ.

ಶೀತದಿಂದ ಬಳಲುತ್ತಿದ್ದ ಮಗುವನ್ನು ತುಮಕೂರು (Tumkur) ಜಿಲ್ಲಾಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮೈಲಿಗೆ ಎಂಬ ಕಾರಣದಿಂದ ಬಾಣಂತಿ ಹಾಗೂ ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು ಎಂದು ತಿಳಿದು ಬಂದಿದೆ. 

ವಿಪರೀತ ಗಾಳಿ, ಮಳೆ ಇದ್ದರೂ ಸಹ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗುವಿಗೆ ಅನಾರೋಗ್ಯ ಕಾನಿಸಿಕೊಂಡಿತ್ತು ಎನ್ನಲಾಗಿದೆ. ಗ್ರಾಮದ ಸಿದ್ದೇಶ್ ಮತ್ತು ವಸಂತಾ ದಂಪತಿಯ ಮಗು ಮೃತಪಟ್ಟಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist