ಸೋಮವಾರ, ಫೆಬ್ರವರಿ 3, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಜರಂಗದಳ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ ಆರ್ ಅಶೋಕ್​​; ಏನಿದು ಆರೋಪ?

Twitter
Facebook
LinkedIn
WhatsApp
ಬಜರಂಗದಳ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ ಆರ್ ಅಶೋಕ್​​; ಏನಿದು ಆರೋಪ?
  ನಾನು ಗೃಹ ಸಚಿವನಾಗಿದ್ದಾಗ ಬಜರಂಗದಳ (bajrang dal)ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ (Rowdy Sheet)  ಕೇಸ್ಹಾಕಿಸಿದ್ದೆ ಎನ್ನುವ ವಿಪಕ್ಷ ನಾಯಕ ಆರ್​ ಅಶೋಕ್ (R Ashok)​ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕೆಂಡಾಮಂಡಲವಾಗಿದ್ದು, ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್​ ಅವರನ್ನು ತೆಗೆದು ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಪತ್ರ ಬರೆದು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್​ ಅಶೋಕ್​, ಬಜರಂಗ ದಳದ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆಶೋಕ್, ರಾಮನಗರದ ವಕೀಲರು ಜ್ಞಾನವಾಪಿ ದೇಗುಲ ಬಗ್ಗೆ ಪೋಸ್ಟ್ ಮಾಡಿದ್ರು. ಆ ವಿಚಾರವಾಗಿ ಪ್ರಸ್ತಾಪಿಸಿದ್ದೆ, ಮುಸ್ಲಿಮರು ಅಂತಾ ಓಲೈಕೆ ಮಾಡಬೇಡಿ. ಬಜರಂಗ ದಳ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ ಹಾಕಿಸಿದ್ದೆ ಎಂದೆ. ಬಜರಂಗ ದಳ, ಹಿಂದೂ ಕಾರ್ಯಕರ್ತರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ನಾನು ಕೂಡ 10 ವರ್ಷ ಬಜರಂಗ ದಳದಲ್ಲೇ ಇದ್ದವನು ಎಂದು ಹೇಳಿದರು. ಈ ಮೂಲಕ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ಮುಂದೆ ಮಂಡಿಯೂರಿದರು.

ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದ ಬಜರಂಗದಳ ನಾನು ಗೃಹಸಚಿವನಾಗಿದ್ದಾಗ ಬಜರಂಗದಳದ ವಿರುದ್ಧ ಗೂಂಡಾ ಕಾಯ್ದೆ ಕೇಸ್ ಹಾಕಿಸಿದ್ದೆ ಎನ್ನುವ ಹೇಳಿಕೆಯಿಂದ ಅಶೋಕ್ ವಿರುದ್ಧ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದು, sಆರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಬಜರಂಗದಳ ಒತ್ತಾಯಿಸಿತ್ತು. ಅಲ್ಲದೇ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಪತ್ರ ಬರೆದಿರುವ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಆರ್.ಅಶೋಕ್ರನ್ನು ವಿಪಕ್ಷ ನಾಯಕ ಸ್ಥಾನದಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ. ಅಲ್ಲದೇ ಆರ್.ಅಶೋಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದವು.

ಆರ್ ಅಶೋಕ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಶರಣ್ ಪಂಪ್‌ವೆಲ್ ನಾನು ಗೃಹಸಚಿವ ಆಗಿದ್ದಾಗ ಪಬ್‌ನಲ್ಲಿ ಗಲಾಟೆ ಆದಾಗ ಹಿಂದೂ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಅಂತ ಹೇಳಿದ್ದಾರೆ. ವಿಹೆಚ್‌ಪಿ ಇದನ್ನ ಬಲವಾಗಿ ಖಂಡಿಸುತ್ತೆ. ಗೋ ಮಾತೆ, ಮಹಿಳೆಯರ ಪರ ಕೆಲಸ ಮಾಡೋ ಸಂಘಟನೆ. ಅಂತ‌ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿರೋದಾಗಿ ಹೇಳಿದ್ದು ಮನಸ್ಸಿಗೆ ಬೇಸರ ಆಗಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ದೂರು ನೀಡಿದ್ದು, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅಶೋಕ್ ಅವರನ್ನ ವಿಪಕ್ಷ ನಾಯಕರ ಸ್ಥಾನದಿಂದ ತೆಗೆಯಬೇಕು. ಅವರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಅಶೋಕ್ ನಮ್ಮದೇ ವೈಚಾರಿಕ ಇರೋ ಪಕ್ಷದವರು. ಅವರ ಸಮರ್ಥನೆ ಸರಿಯಲ್ಲ. ಹಿಂದೂ ವಿರೋಧಿ ಹೇಳಿಕೆ ಸರಿಯಲ್ಲ. ಶಿಕ್ಷಕಿ ಮೇಲೆ ಕ್ರಮ ತೆಗೆದುಕೊಳ್ಳೋ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅದು ಬಿಟ್ಟು ಹಿಂದೂ ಸಂಘಟನೆ ಮೇಲೆ ಕ್ರಮ ತೆಗೆದುಕೊಂಡೆ ಅಂತ ಹೇಳಿದ್ದಾರೆ. ಇದು ಸರಿಯಲ್ಲ. ಕೇಂದ್ರದ ನಾಯಕರನ್ನೂ ಭೇಟಿಯಾಗುತ್ತೇವೆ. ಪತ್ರದ ಮೂಲಕ ಅಶೋಕ್ ವಿರುದ್ಧ ದೂರು ಕೂಡ ನೀಡಲಿದ್ದೇವೆ ಎಂದರು.

ಆರ್ ಅಶೋಕ್ ಹೇಳಿದ್ದೇನು? ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಎಫ್‌ಐಆರ್ ಹಾಕಿರುವ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದರು. ಈ ವೇಳೆ, “ಮಂಗಳೂರು ಪಬ್ ದಾಳಿ ವೇಳೆ ನಾನು ರಾಜ್ಯದ ಗೃಹ ಸಚಿವನಾಗಿದ್ದೆ. ಇದೇ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಧರಣಿ ಕೂಡ ನಡೆದು, ದೊಡ್ಡ ಗಲಾಟೆಯೇ ಆಗಿತ್ತು. ಅವತ್ತು ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನನ್ನ ಮೇಲೆ ಭಾರೀ ಒತ್ತಡವಿತ್ತು. ಫೋನ್‌ಗಳು ಕೂಡ ಬಂದಿತ್ತು. ಆದರೂ ಕೂಡ ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಪಬ್ ದಾಳಿ ವೇಳೆ ಯುವತಿಯರ ಮೇಲೆ ದೌರ್ಜನ್ಯ ಎಸಗಿ ಬಜರಂಗದಳದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ಆ ಥರ ನೀವೂ ಕೂಡ ಕ್ರಮ ಕೈಗೊಳ್ಳಿ” ಎಂದು ಗೃಹ ಸಚಿವ ಪರಮೇಶ್ವರ್ಗೆ ಆಗ್ರಹಿಸಿದ್ದರು.

ಈ ಮೂಲಕ ತಾವು ಗೃಹ ಸಚಿವರಾಗಿದ್ದಾಗ ಹೇಗೆ ಇದ್ದೆ ಎನ್ನುವುದನ್ನು ತೋರಿಸಿಕೊಳ್ಳುವ ಭರದಲ್ಲಿ ಬಜರಂಗ ದಳ ವಿರುದ್ಧ ಗುಂಡಾ ಕೇಸ್ ಹಾಕಿದ್ದೆ ಎಂದು ಹೇಳಿಕೊಂಡಿದ್ದರು. ಆದ್ರೆ, ಈ ಹೇಳಿಕೆ ವಿಪಕ್ಷ ನಾಯಕ ಆರ್ ಅಶೋಕ್​ಗೆ ತಿರುಗು ಬಾಣವಾಗಿದ್ದು, ಅಶೋಕ್​ ವಿರುದ್ಧ ಬಜರಂಗದಳ ಕೆಂಡಾಮಂಡಲವಾಗಿತ್ತು. ಇದೀಗ ಕ್ಷಮೆ ಕೇಳುವ ಮೂಲಕ ಅಶೋಕ್ ಹಿಂದೂ ಸಂಘಟನೆಗಳ ಮುಂದೆ ಮಂಡಿಯೂರಿದ್ದಾರೆ,.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist