PUTTUR: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
PUTTUR: ಸವಣೂರು ಸರ್ವೆ ಬಳಿಯ ಗೌರಿ ಹೊಳೆಯ ಸಮೀಪ ಶುಕ್ರವಾರ ರಾತ್ರಿ ಸ್ಕೂಟಿ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಸನ್ಮಿತ್ (21) ಅವರ ಮೃತದೇಹ ಪತ್ತೆಯಾಗಿದ್ದು ಪುತ್ತೂರು (PUTTUR) ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ನಿನ್ನೆ ನಬೆಳಿಗ್ಗೆಯಿಂದ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸ್ಥ ಸಿಬ್ಬಂದಿಗಳು ಗೌರಿ ಹೊಳೆಯಲ್ಲಿ ಮೃತ ದೇಹಕ್ಕೆ ಶೋದ ಕಾರ್ಯಚರಣೆ ನಡೆಸಿದ್ದರು.
ಇಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತ ದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ:
ಸವಣೂರು ಸರ್ವೆ ಬಳಿಯ ಗೌರಿ ಹೊಳೆಯ ಸಮೀಪ ಶುಕ್ರವಾರ ರಾತ್ರಿ ಸ್ಕೂಟಿ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದ, ಹೊಳೆಗೆ ಹಾರಿರುವ ಶಂಕೆಯಿಂದ ಅಗ್ನಿಶಾಮಕ ದಳದವರು ಶನಿವಾರ ಶೋಧ ಕಾರ್ಯ ನಡೆಸಿದ್ದು, ಸಂಜೆ ತನಕ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರ ಗೌಡ ಅವರ ಪುತ್ರ, ಮುಕ್ರಂಪಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಮಹೀಂದ್ರ ಶೋರೂಂನ ಉದ್ಯೋಗಿ ಸನ್ಮಿತ್ ಟಿ. (21) ನಾಪತ್ತೆಯಾದವರು. ಅವರಿಗೆ ಸೇರಿದ ಡಿಯೋ ಸ್ಕೂಟರ್ ಹೊಳೆಯ ಬದಿಯಿಂದ 150 ಮೀ. ದೂರದಲ್ಲಿ ಪತ್ತೆಯಾಗಿತ್ತು. ಬೈಕ್‌ನಲ್ಲಿ ಮೊಬೈಲ್, ಪರ್ಸ್, ಹೆಲ್ಮೆಟ್, ಟಿಫಿನ್ ಬಾಕ್ಸ್ ಕಂಡು ಬಂದಿತ್ತು.
ತಂದೆಗೆ ಕರೆ ಮಾಡಿದ್ದ:
ಸನ್ಮಿತ್ ಪ್ರತಿದಿನ ಬಸ್‌ನಲ್ಲಿ ಮುಕ್ರಂಪಾಡಿಗೆ ತೆರಳುತ್ತಿದ್ದರು. ಶುಕ್ರವಾರ ಕೆಲಸ ಜಾಸ್ತಿ ಇದ್ದು ಬರುವಾಗ ರಾತ್ರಿ ಆಗಬಹುದು ಎಂದು ಸ್ಕೂಟಿ ತೆಗೆದುಕೊಂಡು ಹೋಗಿದ್ದರು. ಪ್ರತಿದಿನ ಸಂಜೆ 6.30ರ ವೇಳೆಗೆ ಮನೆಗೆ ಬರುತ್ತಿದ್ದ ಸನ್ಮಿತ್ ಶುಕ್ರವಾರ ತಂದೆಗೆ ಕರೆ ಮಾಡಿ, ಹೆಚ್ಚು ಕೆಲಸವಿರುವ ಕಾರಣ ಮನೆಗೆ ಬರುವಾದ ರಾತ್ರಿ 10 ಗಂಟೆಯಾಗಬಹುದು ಎಂದು ತಿಳಿಸಿದ್ದರು. 9.30ರ ಹೊತ್ತಿಗೆ ಮತ್ತೆ ಕರೆ ಮಾಡಿದಾಗ ಅರ್ಧ ಗಂಟೆಯಲ್ಲಿ ಬರುವುದಾಗಿ ಹೇಳಿದ್ದರು. ರಾತ್ರಿ 11 ಗಂಟೆಯಾದರೂ ಬಾರದೆ ಇದ್ದಾಗ ಮತ್ತೆ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸಿರಲಿಲ್ಲ.
Bantwala: ಶಾಮಿಯಾನದ ಕೆಲಸಗಾರ ವಿದ್ಯುತ್ ಶಾಕ್ ಗೆ ಬಲಿ:
ಬಂಟ್ವಾಳ: ಶಾಮಿಯಾನದ ಲಾರಿ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದ ಮರುದಿನವೇ ಶಾಮಿಯಾನದ ಕೆಲಸಗಾರನೋರ್ವ ವಿದ್ಯುತ್ ಶಾಕ್ ಗೆ ಬಲಿಯಾದ ದುರಂತ ಘಟನೆ ತಾಲೂಕಿನಲ್ಲಿ ನಡೆದಿದೆ.
ಲಾರಿಯೊಂದರಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ವಯರ್ ತಾಗಿ ನಾಲ್ವರು ಕೆಲಸಗಾರರಿಗೆ ಗಾಯವಾಗಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟ ಘಟನೆ ಕಡೇಶಿವಾಲಯ ಸಮೀಪ ಕೆಮ್ಮನ್ ಕಾಡಬೆಟ್ಟು ಎಂಬಲ್ಲಿ ಜು.20ರ ಶನಿವಾರ ಮಧ್ಯಾಹ್ನ ನಡೆದಿದೆ.
ಕಡೇಶಿವಾಲಯ ಗ್ರಾಮದ ಕಾಡಬೆಟ್ಟು ಎಂಬಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಕಲ್ಲಡ್ಕದ ಚಂದ್ರಶೇಖರ ಸಾಲಿಯನ್ ಅವರ ಮಾಲಿಕತ್ವದ ಸಾಲಿಯನ್ ಶಾಮಿಯಾನದ 5 ಜನ ಕೆಲಸಗಾರರಿಗೆ ವಿದ್ಯುತ್ ತಂತಿ ತಗುಲಿ ಕುಂದನ್ ಕುಮಾರ್ (20) ಮೃತಪಟ್ಟಿದ್ದು, ಬಾಕಿ 4 ಜನ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.